ಖಾವಿ೯ ಸಮಾಜ ಕಂಡ ಶ್ರೇಷ್ಠ ಶಿಲ್ಪಿ ಹರೀಶ್ ಎನ್ ಸಾಗರ

ಮೂರ್ತಿಶಿಲ್ಪ – ಚಿತ್ರಕಲೆಯಷ್ಟೇ ಪ್ರಾಚೀನವಾದ ಮತ್ತು ವೈವಿಧ್ಯಮಯವಾದ ಶಿಲ್ಪಕಲೆ, ಮಾನವನ ಅತ್ಯಂತ ಆಸಕ್ತಿದಾಯಕ ಸಂಕೀರ್ಣ ಕಲೆಗಳಲ್ಲೊಂದು, ಮಾನವ ಸಂಸ್ಕøತಿಯ ಬೆಳೆವಣಿಗೆಯನ್ನು ಮೂರ್ತಿಶಿಲ್ಪದಷ್ಟು ಸಮಗ್ರವಾಗಿ ಮತ್ತು ಸ್ಪಷ್ಟವಾಗಿ ದಾಖಲಿಸುವ ಕಲೆ ಬೇರೊಂದಿಲ್ಲ. ಸಮಾಜದ ಸಮಕಾಲೀನ ಭಾವನೆ ಮತ್ತು ಮೌಲ್ಯಾದರ್ಶಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುವ ಶಿಲ್ಪಗಳನ್ನು ಕೆಲವು ಕಲಾಕಾರರೂ ರಚಿಸಿದ್ದಾರೆ. ನಮ್ಮ ಖಾವಿ೯ ಸಮಾಜದಲ್ಲಿ ಪ್ರತಿಭೆ ಹಾಗೂ ಸಾಮರ್ಥ್ಯಗಳಿಗೆ ಏನು ಕೊರತೆ ಇಲ್ಲ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿ ಆಯ್ದುಕೊಂಡ ವ್ಯಕ್ತಿ, ಸಮಾಜ ಕಂಡ ಶ್ರೇಷ್ಠ ಶಿಲ್ಪಿ ಹರೀಶ್ ಎನ್ ಸಾಗರ.

ಶ್ರೀಮತಿ ಚಂದಮ್ಮ ನಾರಾಯಣ ಆಚಾರ್ (ಖಾವಿ೯) ಇವರ ಪಂಚಮ ಪುತ್ರ ಹರೀಶ್ ಎಂ, ಕಡುಬಡತನದಿಂದ ಬೆಳೆದು ಬಂದವರು ಆರ್ಥಿಕ ತೊಂದರೆಯಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಗಲಿಲ್ಲ ಆಗ ಇವರಿಗೆ ಸುಮಾರು 14 ವರ್ಷ. ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಹರೀಶ್ ರವರ ಬಾಳಿನಲ್ಲಿ ಶಿಲ್ಪಕಲೆಯು ಅವರನ್ನು ಆಯ್ಕೆ ಮಾಡಿಕೊಂಡಿದೆ ಇವರಿಗೆ ಸುಮಾರು 15 ವರ್ಷವಾದಾಗ ಇವರ ಜೀವನದಲ್ಲಿ ದಾರಿದೀಪವಾದವರು ಕೆ.ಜಿ .ಶಾಂತಪ್ಪನವರು. ಹರೀಶ್ ರವರು ಸಾಗರದ ಹೆಸರಾಂತ ಶಿಲ್ಪಿ ದಿವಂಗತ ಕೆ ಜಿ ಶಾಂತಪ್ಪ ಗುಡಿಗಾರರಲ್ಲಿ ಕಠಿಣ ಪರಿಶ್ರಮ ಮಾಡಿ ಕಲೆಯನ್ನು ಸಿದ್ಧಿಸಿಕೊಂಡು ತನ್ಮೂಲಕ ಜೀವನೋಪಾಯಕ್ಕೆ ಮಾರ್ಗವನ್ನು ಕಂಡುಕೊಂಡಿರುತ್ತಾರೆ ಹಾಗೆಯೇ ಉತ್ತಮ ಶಿಲ್ಪಿ ಎಂದೇ ಪ್ರಸಿದ್ಧಿ ಪಡೆದವರಾಗಿದ್ದಾರೆ ಕಾಲಕ್ರಮೇಣ ಇವರು ಗುರುಗಳ ಆಶೀರ್ವಾದದಿಂದ ಶ್ರೀ ಗಣೇಶ ಶಿಲ್ಪಕಲಾ ಮಂದಿರವನ್ನು ನಿರ್ಮಿಸಿಕೊಂಡು ಕಲ್ಲಿನ ಕೆತ್ತನೆ ಕೆಲಸವನ್ನು ಗಂಧದ ಮರದ ಕೆತ್ತನೆ ಮತ್ತು ಗಣೇಶನ ಮೂರ್ತಿಗಳನ್ನು ತಯಾರಿಸ ತೊಡಗಿದರು.

ಹಾಗೆಯೇ ಆಸಕ್ತ ಯುವಕರಿಗೆ ತರಬೇತಿಯನ್ನು ಕೊಟ್ಟು ಶಿಲ್ಪಕಲೆಯನ್ನು ಮುಂದುವರಿಸಿಕೊಂಡು ಹೋಗಲು ಇವರು ಕಾರಣಕರ್ತರಾಗಿದ್ದಾರೆ ಅವರ ಕೈಚಳಕದಲ್ಲಿ ಅರಳಿದ ಸಂಪ್ರದಾಯಿಕ ಶಿಲಾಮೂರ್ತಿಗಳು ಹಲವಾರು.ಇವರ ಕೈಯಲ್ಲಿ ಅರಳಿದ ಕಲ್ಲಿನಲ್ಲಿ ಶಿಲ್ಪಕಲೆಯ ಶಿಲಾಮೂರ್ತಿಗಳು ಒಂದು ಅಡಿಯಿಂದ ಹಿಡಿದು ಸುಮಾರು 9ರಿಂದ 11ಅಡಿಯವರೆಗೆ ಶಿಲಾಮೂರ್ತಿಗಳನ್ನು ನಿರ್ಮಿಸಿರುತ್ತಾರೆ. ಕಲ್ಲಿನ ಬಾಗಿಲು ಚೌಕಟ್ಟು ದ್ವಜಸ್ತಂಬ ಕಲ್ಲಿನ ಮಂಟಪ ಗೋಮಾತೆ ವಿಗ್ರಹ ಗಾಂಧೀಜಿ ಮೂರ್ತಿ ಶಿವಲಿಂಗ ಮೂರ್ತಿ ಬಸವಣ್ಣನ ಮೂರ್ತಿ ಬನಶಂಕರಿ ಮೂರ್ತಿ ಮಹಾಲಕ್ಷ್ಮಿ ಮೂರ್ತಿ ಜ್ಞಾನೇಶ್ವರಿ ಮೂರ್ತಿ ಚೌಡೇಶ್ವರಿ ಮೂರ್ತಿ ನಾಗದೇವರ ಮೂರ್ತಿ ಗಣಪತಿ ಮೂರ್ತಿ ರಾಮಮೂರ್ತಿ ಸೀತೆಮೂರ್ತಿ ಲಕ್ಷ್ಮಣ ಮೂರ್ತಿ ಹನುಮಂತ ಮೂರ್ತಿ ಕೃಷ್ಣ ಮೂರ್ತಿ ಲಕ್ಷ್ಮಿ ಮೂರ್ತಿ ತುಳಸಿಕಟ್ಟೆ ಇಂತ ಹಲವಾರು ಮೂರ್ತಿಗಳನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿದ್ದಾರೆ 2000 ಎರಡು 2003ರಲ್ಲಿ ಸಾಗರದಲ್ಲಿ ದೈವಜ್ಞ ಸಮಾಜದ ಶಿಲ್ಪಕಲಾ ಮಂದಿರದ ಗಣಪತಿ ಹಾಗೂ ಜ್ಞಾನೇಶ್ವರಿ ಮೂರ್ತಿಗಳನ್ನು ತಯಾರಿಸಿಕೊಟ್ಟಿದ್ದಾರೆ ಇದರ ಅಳತೆಯು ಗಣಪತಿ ಮೂರ್ತಿ 3.5 ಅಡಿ.

ಇವರು ಕೆತ್ತನೆ ಮಾಡಿರುವ ವಿಗ್ರಹಗಳು ಶಿವಮೊಗ್ಗ , ಹೊಸನಗರ, ಭದ್ರಾವತಿ, ಕುಮಟಾ-ಹೊನ್ನಾವರ ಭಟ್ಕಳ, ಶಿರಸಿ, ಸಿದ್ದಾಪುರ, ಬೆಂಗಳೂರು ಮತ್ತು ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಹೊರರಾಜ್ಯದಲ್ಲೂ ಪ್ರತಿಷ್ಠಾಪಿಸಲ್ಪಟ್ಟಿದೆ ಹಲವಾರು ಮನೆ ಹಾಗು ದೇವಸ್ಥಾನಗಳಲ್ಲಿಯೂ ಇವರು ಮಾಡಿರುವ ವಿಗ್ರಹಗಳಿಗೆ ಪೂಜೆಯೂ ನಡೆಯುತ್ತಿದೆ ಮಾತ್ರವಲ್ಲದೆ ಪ್ರಶಂಸೆಗೆ ಕಾರಣವಾಗಿದೆ ಹಾಗೆ ಸನ್ಮಾನ ಪ್ರಶಸ್ತಿಗಳು ಲಭಿಸಿದೆ.

ಸಾಗರದ ನಗರಸಭೆಯು 2012ರಲ್ಲಿ ಶಿಲ್ಪಕಲೆಯಲ್ಲಿ ಇವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 2012ರಲ್ಲಿ ಕೊಟ್ಟು ಸನ್ಮಾನ ಮಾಡಿರುತ್ತಾರೆ, ಕುಂದಾಪುರದ ವಿದ್ಯಾರಂಗ ಮಿತ್ರಮಂಡಳಿಯೂ ಕೂಡ ಇವರನ್ನು ಗುರುತಿಸಿ 2002 ರಲ್ಲಿ ಸನ್ಮಾನ ಮಾಡಿರುತ್ತಾರೆ.

ಅವರು ಉತ್ತಮ ಶಿಲ್ಪಕಾರನಾಗಿದ್ದು, ಅವರ ಸದಭಿರುಚಿ, ಉತ್ಸಾಹ, ಶಿಲ್ಪಾಕಾರನಾಗಿ ಅವರಿಗಿರುವ ಅದ್ಭುತ ಪ್ರತಿಭೆಯನ್ನು ಪ್ರಶಂಸಿಸುತ್ತಾ, ಇವರ ಸೂಕ್ಷ್ಮ ಶಿಲ್ಪ ಕಲಾಕೃತಿಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಹಾಗೂ ಉತ್ತರೋತ್ತರ ಪ್ರಸಿದ್ಧಿ ಪಡೆಯಲಿ ಎಂದು ಸಮಾಜದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ.

ವರದಿ: ಸುಧಾಕರ್ ಖಾರ್ವಿ
www.kharvionline.com

4 thoughts on “ಖಾವಿ೯ ಸಮಾಜ ಕಂಡ ಶ್ರೇಷ್ಠ ಶಿಲ್ಪಿ ಹರೀಶ್ ಎನ್ ಸಾಗರ

  1. ನಮ್ಮ ಸಮಾಜದ ಅಪ್ರತಿಮ ಶಿಲ್ಪಕಲಾ ಕಲಾವಿದನ ಸಾಧನೆಯ ಅಪೂರ್ವ ಚಿತ್ರಣ ಲೇಖನ ಸುಂದರವಾಗಿ ಮೂಡಿ ಬಂದಿದೆ ಧನ್ಯವಾದಗಳು👌👌👌👍👍👏👏🙏🙏🙏

  2. Namma samaj Kanda apratima shilpakala pratibe Desada uddaglakku evara keertihabali,” SUBHAVAGALI””.

  3. ಇಂಥ ಕಲೆಯೇ ನಶಿಸಿ ಹೋಗುತ್ತಿರುವ ಈ ಸಮಯದಲ್ಲಿ ಅಲ್ಲಿ ಇಲ್ಲಿ ಯಾರಾದರೂ ಮೂರ್ತಿ ಶಿಲ್ಪಿ ಅಥವಾ ಕೆತ್ತನೆಗೆ ಚಿತ್ರಗಳನ್ನು ಶೇರ್ ಮಾಡಿದ್ದಲ್ಲಿ ನೋಡಿ ಸಂತೋಷವಾಗುತ್ತಿತ್ತು …ಆದರೆ ನಮ್ಮದೇ ಸಮಾಜದವರು ಇಷ್ಟು ಅಪ್ರತಿಮ ಸುಂದರವಾದ ಮೂರ್ತಿ ಶಿಲ್ಪ ಕೆತ್ತನೆಯನ್ನು ಮಾಡಿರುದನ್ನು ನೋಡಿ ನನಗೆ ನಿಜವಾಗಿಯೂ ಹೆಮ್ಮೆ ಪಡುವಂತಾಗಿದೆ. ನಮ್ಮ ಸಮಾಜದ ಇಂತಹ ರತ್ನಗಳು ಮತಷ್ಟು ಬೆಳಕಿಗೆ ಬರಲಿ.

Leave a Reply

Your email address will not be published. Required fields are marked *