ಸುನಾಮಿ ಮೀನು ಭೂಕಂಪ ಸುನಾಮಿಯಂತಹ ಪ್ರಾಕೃತಿಕ ದುರಂತ ಘಟಿಸುವ ಮೊದಲ ಮೂನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ದೊರಕುತ್ತದೆ ಎಂಬ ಸತ್ಯ ವೈಜ್ಞಾನಿಕವಾಗಿ ನಿರೂಪಿತವಾಗಿದೆ ಇದರ ಅತ್ಯುತ್ತಮ ಉದಾಹರಣೆಯಾಗಿ ಅಂಡಮಾನ್ ನಿಕೋಬಾರಿನ ಗ್ರೇಟ್ ನಿಕೋಬಾರ್ ಕಡಲಿನ ಸುನಾಮಿ ಮೀನು ಅನಾವರಣಗೊಳ್ಳುತ್ತದೆ ಮಿಲ್ಕ್ ಫಿಶ್ ಚಾನೋಸ್ ಚಾನೋಸ್ ಎಂಬುದು ಇದರ ಮತ್ತೆರಡು ಹೆಸರುಗಳು ಈ ಕಡಲಿನಲ್ಲಿ ಅಪರೂಪಕ್ಕೆ ಆಳಸಮುದ್ರದ ಈ ಮೀನು ಕಾಣಸಿಗುತ್ತಿತ್ತು ಆದರೆ ಸುನಾಮಿ ಸಂಭವಿಸಿದ ನಂತರ ಸಾಗರದಲ್ಲಿ ಈ ಮೀನುಗಳ ಪ್ರಮಾಣ ಆಶ್ಚರ್ಯಕರ ರೀತಿಯಲ್ಲಿ ಏರಿಕೆ ಕಂಡಿತು ಸಂತೋಷ ಭರಿತರಾದ ಮೀನುಗಾರರು ಈ ಮೀನುಗಳಿಗೆ ಸುನಾಮಿ ಮೀನು ಎಂದು ಹೊಸದಾಗಿ ನಾಮಕರಣ ಮಾಡಿದರು
ಸುನಾಮಿ ಸಂಭವಿಸಿದ ಬಳಿಕ ಈ ಮೀನುಗಳು ಅಪಾರ ಪ್ರಮಾಣದಲ್ಲಿ ವೃದ್ಧಿಯಾಗಲು ಕಾರಣವೇನೆಂಬುದನ್ನು ಭಾರತೀಯ ಪ್ರಾಣಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು ಅವರ ಪ್ರಕಾರ 2004ರಲ್ಲಿ ಇಂಡೋನೇಷ್ಯಾದ ಸುಮತ್ರಾ ಕಡಲಿನಲ್ಲಿ ಸಂಭವಿಸಿದ ಸುನಾಮಿ ಭೂಕಂಪನದ ಸೂಚನೆ ಈ ಮೀನುಗಳಿಗೆ ಮೊದಲು ದೊರಕಿತ್ತು ಪರಿಣಾಮವಾಗಿ ಈ ಮೀನುಗಳ ಬೃಹತ್ ಸಮೂಹ ಅಂಡಮಾನ್ ನಿಕೋಬಾರ್ ದ್ವೀಪ ಸ್ವಮೂಹಗಳ ಬಳಿ ವಲಸೆ ಬಂದು ಸುರಕ್ಷಿತ ತಾಣದಲ್ಲಿ ನೆಲೆಯಾದವು ಇವುಗಳೊಂದಿಗೆ ನಿಕೋಬಾರ್ ಕಡಲತೀರದ ಮೀನುಗಳು ಕೂಡಾ ಸೇರ್ಪಡೆಗೊಂಡವು ಸುನಾಮಿ ಸಂಭವಿಸಿದ ಕೆಲವು ತಿಂಗಳು ಕಾಲ ಮೀನುಗಾರರು ಸುನಾಮಿ ಭೀತಿಯಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದರು ಪರಿಣಾಮವಾಗಿ ಈ ಮೀನುಗಳ ಪ್ರಮಾಣ ಅಪಾರವಾಗಿ ವೃದ್ಧಿಯಾಯಿತು.
ಅಂಡಮಾನ್ ನಲ್ಲಿ ಭೀಕರ ಸುನಾಮಿ ಸಂಭವಿಸುವ ಕೆಲವೇ ಗಂಟೆಗಳ ಮೊದಲು ಕಡಲಾಳದ ತೀಕ್ಷ್ಷಣೆಯಿಂದ ಗಾಬರಿಗೊಂಡ ಈ ಮೀನುಗಳು ಸಮುದ್ರದಲ್ಲಿ ಭಾರಿ ಎತ್ತರಕ್ಕೆ ವಿಲಕ್ಷಣವಾಗಿ ಜಿಗಿಯುತ್ತಿದ್ದವು ಇದನ್ನು ಕಂಡ ಈ ದ್ವೀಪ ಸಮೂಹದ ಮೂಲನಿವಾಸಿಗಳು ಅಪಾಯದ ಮೂನ್ಸೂಚನೆಯಿಂದ ಕಾಡಿಗೆ ಓಡಿ ಹೋಗಿ ಜೀವ ಉಳಿಸಿಕೊಂಡರು ಭೂಕಂಪ ಸುನಾಮಿ ಯಂತಹ ನೈಸರ್ಗಿಕ ವಿಕೋಪಗಳ ಮೂನ್ಸೂಚನೆ ಮೊದಲು ಪ್ರಾಣಿ ಪಕ್ಷಿ ಜಲಚರಗಳಿಗೆ ಸಿಗುತ್ತದೆ ಎಂಬ ಅಂಶ ಮತ್ತಷ್ಟೂ ದೃಡೀಕೃತಗೊಂಡಿತು ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳಿಗೆ ಜೀವಿ ಪರಿಸರ ಪ್ರಕ್ರಿಯೆಗಳು ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸಿ ಹೊಸ ಸಮತೋಲನ ಕಾಪಾಡಿಕೊಳ್ಳುವುದು ಪ್ರಕೃತಿಯಲ್ಲಿ ನಿರಂತರವಾಗಿ ನಡೆದಿರುವ ಕ್ರಿಯೆ ಸಮುದ್ರ ವಾಸಿಯಾಗಿರುವ ಈ ಸುನಾಮಿ ಮೀನುಗಳನ್ನು ಕೃತಕವಾಗಿ ಬೆಳಸಲು ಸಾಧ್ಯವಿಲ್ಲ ಎಂಬ ವಾದವನ್ನು ಸುಳ್ಳಾಗಿಸಿ ಹೈದರಾಬಾದ್ ಮತ್ತು ಕೇರಳದಲ್ಲಿ ಈ ಮೀನುಗಳನ್ನು ಕೃತಕವಾಗಿ ಯಶಸ್ವಿಯಾಗಿ ಬೆಳೆಸಲಾಗಿದೆ ಉತ್ತಮ ಬೆಲೆ ಬಾಳುವ ಈ ಸುನಾಮಿ ಮೀನುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ
ಉಮಾಕಾಂತ ಖಾರ್ವಿ ಕುಂದಾಪುರ