ಅಂತರಾಷ್ಟ್ರೀಯ ಬೀಚ್ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ನೇತೃತ್ವದಲ್ಲಿ. ಹಾಗೂ ಲಯನ್ಸ್ ಕ್ಲಬ್ ತ್ರಾಸಿ,ಗಂಗೊಳ್ಳಿ, ಖಾರ್ವಿ ಆನ್ಲೈನ್.ಕಾಮ್ ವತಿಯಿಂದ ತ್ರಾಸಿ ಮರವಂತೆ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಸುಬ್ರಹ್ಮಣ್ಯ ಹರ್ಕೇರಿ ಮಾತನಾಡಿ ಸಮುದ್ರ ಜೈವಿಕ ವೈವಿಧ್ಯತೆಯ ತಾಣಗಳ ಆಗರವಾಗಿದ್ದು ಅದನ್ನು ಸಂರಕ್ಷಿಸುವ ಅಗತ್ಯ ಇದೆ, ಈ ನಿಟ್ಟಿನಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ವತಿಯಿಂದ ನಿಯಮಿತವಾಗಿ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ಕೆ ಲಯನ್ಸ್ ಕ್ಲಬ್ ಮತ್ತು ಖಾರ್ವಿ ಆನ್ಲೈನ್ ನ ಸಹಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಿವೇಕಾನಂದ ಪೂಜಾರಿ ಹಾಗೂ ಪದಾಧಿಕಾರಿಗಳು, ಕರಾವಳಿ ಕಾವಲು ಪೊಲೀಸ್ ಠಾಣೆಯ ಎ. ಎಸ್ ಐ ಭಾಸ್ಕರ್ ಮತ್ತು ಸಿಬ್ಬಂದಿಗಳು, ಕೆ. ಎನ್. ಡಿ ಯವರು ಹಾಜರಿದ್ದು ತ್ರಾಸಿ SLRM ಘಟಕದ ಸಿಬ್ಬಂದಿ ಕಸ ವಿಲೇವಾರಿಗೆ ಸಹಕರಿಸಿದರು.