ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಸಂಪನ್ನ

ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ ಇದರ ಗಣೇಶೋತ್ಸವ ಸಮಿತಿಯ ಗಣಪತಿ ಕುಂದಾಪುರ ತಾಲೂಕಿನಲ್ಲೇ ಮಹಾರಾಜ ಗಣಪತಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇಡೀ ಕುಂದಾಪುರ ತಾಲೂಕಿನಲ್ಲೇ ಅತಿ ವಿಜೃಂಭಣೆಯ ಪೂಜೆ, ಸಂಕಲ್ಪ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಶ್ರೀ ಮಹಾಕಾಳಿ ದೇವಸ್ಥಾನದ ಬೆಳ್ಳಿಯ ಗಣಪತಿ ಎಂದೇ ಸುಪ್ರಸಿದ್ದವಾಗಿದೆ ಇದರ 34 ನೇ ವರ್ಷದ ಗಣೇಶೋತ್ಸವವು ಪುಣ್ಯನದಿ ಪಂಚಗಂಗಾವಳಿಯಲ್ಲಿ ವಿಸರ್ಜನೆಯೊಂದಿಗೆ ಭಕ್ತಿಪ್ರದವಾಗಿ ಸಂಪನ್ನಗೊಂಡಿತ್ತು.

ಪಂಚದಿನಾತ್ಮಕವಾಗಿ ವೈಭವದ ಉತ್ಸವದ ರೂಪದಲ್ಲಿ ಅನಾವರಣಗೊಂಡ ಗಣೇಶೋತ್ಸವ 11.9.2024 ರಂದು ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯುವುದರ ಜೊತೆಗೆ,ವೈಭವದ ವಿಸರ್ಜನೆ ಪುರ ಮೆರವಣಿಗೆ ಕುಂದಾಪುರ ಶಾಸ್ತ್ರಿ ವೃತ್ತದ ಮಾರ್ಗವಾಗಿ ಪಂಚಗಂಗಾವಳಿ ನದಿಯಲ್ಲಿ ಜಲಸ್ಥಂಭನ ಕಾರ್ಯ ನಡೆಯಿತು ಸಂಜೆ ರಂಗಿನ ಓಕುಳಿಯಲ್ಲಿ ಭಾನು ಕೆಂಪೇರಿದಾಗ ಸಾವಿರಾರು ಜನರ ಅಮ್ಗೆಲೆ ಗಣಪತಿ ಎನ್ನುವ ಹರ್ಷೋದ್ಗಾರಗಳ ನಡುವೆ ಭೋರ್ಗರೆದು ಹರಿಯುವ ಪಂಚಗಂಗಾವಳಿಯಲ್ಲಿ ಗಣಪತಿಯ ಭವ್ಯ ಮೂರ್ತಿ ಲೀನಗೊಂಡಿತ್ತು.

ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಖಾರ್ವಿಯವರ ಅಧ್ಯಕ್ಷತೆಯ ಹುರುಪಿನಲ್ಲಿ, ಕಾರ್ಯದರ್ಶಿಗಳಾದ ಸುನಿಲ್ ಖಾರ್ವಿಯವರ ಕ್ರಿಯಾಶೀಲತೆ ಮತ್ತು ಸಮಿತಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಹಾಗೂ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಉಸ್ತುವಾರಿಯೊಂದಿಗೆ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತ್ತು ಮತ್ತು ಸಮಾಜ ಭಾಂಧವರ, ಊರ ನಾಗರಿಕರ ಹೃತ್ಪೂರ್ವಕ ಸಹಾಯ ಸಹಕಾರವು ವಿಶೇಷವಾಗಿ ಮೇಳೈಸಿ 34ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಯಶಸ್ವಿಯಾಯಿತು.

www.kharvionline.com

Leave a Reply

Your email address will not be published. Required fields are marked *