About us.

kharvionline.com ಡಿಜಿಟಲ್ ಪೋರ್ಟಲ್ ಆಗಿದ್ದು, ಇದರ ಮೂಲಕ  ನಮ್ಮ ಈ  ಸಮುದಾಯವನ್ನು ತಂತ್ರಜ್ಞಾನ ಸಂವಹನ ಮಾರ್ಗ ಬಳಸಿ, ಹತ್ತಿರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ.
ಈ ಡಿಜಿಟಲ್ ಉಪಕ್ರಮದ ಉದ್ದೇಶವೆಂದರೆ, ಖಾರ್ವಿ ಸಮುದಾಯದಯಕ್ಕೆ ಸಂಬಂಧಿಸದಂತೆ  ದೇಶ ವಿದೇಶದಲ್ಲಿ ನೆಲೆಸಿರುವ ಸದಸ್ಯರಿಗೆ ಸ್ಥಳೀಯ ಸಮಾಜಕ್ಕೆ ಸಂಬಂಧಿಸದ ಸುದ್ಧಿ ಸಮಾಚಾರಗಳು, ವ್ಯಕ್ತಿಕ ಸಾಧನೆಗಳು ಮತ್ತಿತರ  ದೈನಂದಿನವಿಷಯಗಳ ಬಗ್ಗೆ ಸುದ್ದಿಯನ್ನು ಹಂಚಿಕೊಳ್ಳುವುದು.

kharvionline.com ಮೂಲಕ ನಮ್ಮ ಹೊಸ ತಲೆಮಾರಿನವರಿಗೆ ನಮ್ಮ ಖಾರ್ವಿ ಸಮಾಜದ ವಿಭಿನ್ನ ಪ್ರಾಂತ್ಯದವರ ಸಂಸ್ಕೃತಿ, ಸಂಪ್ರದಾಯ, ಜೀವನಶೈಲಿ, ಪಾಕಪದ್ಧತಿಗಳ ಪರಿಚಯ ಹಾಗೆ ಇಂದಿನ ಜಗತ್ತಿನಲ್ಲಿ ಅಗತ್ಯವಿರುವ ವಿಷಯಗಳದ ಆರೋಗ್ಯ ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ವಿಮರ್ಶೆ, ವಿಶ್ವ ಜ್ಞಾನ ಹೀಗೆ ಅನೇಕ ಉತ್ತಮ ವಿಷಯಗಳನ್ನು ಅನ್ವೇಷಿಸಲು ಮತ್ತು ತಿಳಿದುಕೊಳ್ಳುವ ಒಂದು ವೇದಿಕೆ.
ಹಾಗಾಗಿ ಈ ಮೂಲಕ, ಪ್ರತಿಯೊಬ್ಬ ಕೊಂಕಣಿ ಖಾರ್ವಿಸಮಾಜ ಭಾಂದವರನ್ನು ಈ ಪೋರ್ಟಲ್‌ನ ಬೆಳವಣಿಗೆಗಾಗಿ ಭಾಗವಹಿಸಲು ನಾನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.

Kharvionline.com ಅನ್ನು ಯಶಸ್ವಿಗೊಳಿಸಲು ನಿಮ್ಮ ಸಲಹೆಗಳು, ನಿಮ್ಮ ಸುತ್ತ ಮುತ್ತ ಆಗುವ ಸ್ಥಳೀಯ ಸುದ್ದಿಗಳು ಹಾಗು ಸಂಭ್ರಮಾಚರಣೆಗಳು,ಮುಖ್ಯ ಘಟನೆಗಳು ಮತ್ತು ವಿಭಿನ್ನವಿಚಾರಗಳನ್ನು ಹಂಚಿಕೊಳ್ಳಲು ಸಹ ವಿನಂತಿಸುತೇನೆ.

Kharvionline.com ಇದರ ಮೂಲ ಉದ್ದೇಶ …  ನಮ್ಮ ಈ ಪುಟ್ಟ ಸಮುದಾಯವನ್ನು, ಒಂದೇ ಸೂರಿನಡಿ ಇರುವ ಒಂದು ಏಕೀಕೃತ ಕುಟುಂಬವನಾಗಿ ಮಾಡುವದು

ಯಾವುದೇ ರೀತಿಯ ವಿಷಯಗಳು, ಲೇಖನಗಳು ಮತ್ತು ದೈನಂದಿನ ಸುದ್ದಿಗಳನ್ನು ಹಂಚಿಕೊಳ್ಳಲು ದಯವಿಟ್ಟು ನಮಗೆ sudhamudra@gmail.com ಗೆ ಮೇಲ್ ಮಾಡಿ..

 

ಧನ್ಯವಾದಗಳು


ಸುಧಾಕರ್ ಖಾರ್ವಿ
kharvionline