ತ್ರಾಸಿ ಮರವಂತೆಯ ಬೀಚ್ ಹೆದ್ದಾರಿಯಲ್ಲಿ ಅನಧಿಕೃತ ಪಾರ್ಕಿಂಗ್
ವಿಶ್ವವಿಖ್ಯಾತ ತ್ರಾಸಿ ಮರವಂತೆಯ ಶ್ರೀ ವರಾಹ ಸ್ವಾಮಿ ದೇವಸ್ಥಾನ ಎದುರಿಗೆ ಇರುವ ಹೆದ್ದಾರಿಯ ಯೂಟರ್ನ್ ನಲ್ಲಿಯೇ ವಾಹನಗಳು ಅನಧಿಕೃತವಾಗಿ ಪಾರ್ಕಿಂಗ್ ಮಾಡುತ್ತಿದ್ದು, ಸಂಚಾರ ವ್ಯವಸ್ಥೆಗೆ ಸಂಚಕಾರ ತಂದೊಡ್ಡಿದೆ ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ ಇಲ್ಲಿನ ಸುಪ್ರಸಿದ್ದ ವರಾಹ ಸ್ವಾಮಿ ದೇಗುಲ ಕೇಂದ್ರ ಸ್ಥಾನವಾಗಿದ್ದು ಇದು ಪ್ರೇಕ್ಷಕರ ನೆಚ್ಚಿನ ಸ್ಪಾಟ್ ಪಾಯಿಂಟ್ ಆಗಿದೆ ಇಲ್ಲಿ ಬಹುಮುಖ್ಯವಾದ ಯೂಟರ್ನ್ ವ್ಯವಸ್ಥೆ ಇರುತ್ತದೆ ವಾಹನಗಳಿಗೆ ಮತ್ತು ಜನರಿಗೆ ಎರಡು ಕಡೆ ಹೋಗಲು ವ್ಯವಸ್ಥೆಗೊಳಿಸಲಾದ ಈ ಯೂಟರ್ನ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ದೊಡ್ಡ ದೊಡ್ಡ ವಾಹನಗಳು ಪಾರ್ಕಿಂಗ್ ಮಾಡುತ್ತದೆ ಇದರಿಂದ ಜನರಿಗೆ ಮತ್ತು ವಾಹನಗಳಿಗೆ ಆ ಕಡೆ ಈಕಡೆ ಹೋಗಲು ತುಂಬಾ ತೊಂದರೆಯಾಗುತ್ತಿದ್ದು, ಶರವೇಗದಲ್ಲಿ ಎದುರುಗಡೆಯಿಂದ ವಾಹನಗಳು ಬರುವುದು ತಿಳಿಯುವುದಿಲ್ಲ.
ಮರವಂತೆ ಬೀಚ್ ರಾಷ್ಟ್ರೀಯ ಹೆದ್ದಾರಿಯ ಎರಡೂ ಪಾರ್ಶ್ವಗಳಲ್ಲಿ ಪ್ರತಿನಿತ್ಯ ವಾಹನಗಳ ಪಾರ್ಕಿಂಗ್ ಕಾರಣದಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಆದಿತ್ಯವಾರ ಇದು ತಾರಕಕ್ಕೇರುತ್ತದೆ. ಮೊದಲೇ ಜನದಟ್ಟಣೆಯ ರಾಷ್ಟ್ರೀಯ ಹೆದ್ದಾರಿ ಅದರ ಮಧ್ಯೆ ಯೂಟರ್ನ್ ನಲ್ಲಿ ವಾಹನಗಳ ಅನಧಿಕೃತ ಪಾರ್ಕಿಂಗ್. ಇದು ತೀವ್ರ ಚಿಂತನೆಯ ವಿಷಯವಾಗಿದ್ದು,ಈ ಸಮಸ್ಯೆ ಉಲ್ಬಣಗೊಂಡು ಅಪಘಾತಗಳು ಹೆಚ್ಚಾಗುವ ಸಂಭವ ಇದೆ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕಠಿಣ ಕ್ರಮ ಕೈಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕೆಂದು ಖಾರ್ವಿ ಆನ್ಲೈನ್ ಆಗ್ರಹಿಸುತ್ತದೆ.
ವರದಿ : kharvionline.com