ಹಕ್ಲೆ ಪೋಂಕ್

ಕುಂದಾಪುರ ಕನ್ನಡದಲ್ಲಿ ಹಕ್ಲೆಪೋಂಕ್ ಎಂಬ ವಿಶಿಷ್ಟ ಪದಪ್ರಯೋಗವಿದೆ ಹಕ್ಲೆ ಎಂದರೆ ಜಿರಳೆ ಪೋಂಕ್ ಅಂದರೆ ಕುಹಕ ತಂತ್ರಗಾರಿಕೆ ಯಾರಾದರೂ ಸಿಕ್ಕ ಅವಕಾಶಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡರೆ ಅಂಥವರನ್ನು ಹಕ್ಲೆ ಪೋಂಕ್ ಎಂದು ಸಂಭೋದಿಸಲಾಗುತ್ತದೆ.

ಕಾಸರಕೋಡು ಬಂದರು ನಿರ್ಮಾಣ ಕಾಮಗಾರಿಗಾಗಿ ರಸ್ತೆ ನಿರ್ಮಿಸಲು ಖಾಸಗಿ ಬಂದರು ನಿರ್ಮಾಣ ಯೋಜನೆಯ ಪೃಭತಿಗಳು ನ್ಯಾಯಾಲಯ ನೀಡಿದ ತಡೆಯಾಜ್ಞೆಯಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ತಮ್ಮ ಅನೂಕೂಲಕ್ಕಾಗಿ ಬಳಸಿಕೊಂಡು ಮೀನುಗಾರರ ಮನೆ ತೆರವು ಮಾಡಿದ ದುಷ್ಟ ಕಾರ್ಯತಂತ್ರ ಗಳನ್ನು ಹಕ್ಲೆ ಪೋಂಕ್ ಎಂದು ಕರೆಯಬಹುದು ಇಲ್ಲೊಂದು ಸೂಕ್ಷ್ಮ ವಿಷಯವಿದೆ ಜಿರಳೆ ಸಾಮಾನ್ಯ ವಾಗಿ ಟಿವಿ ಎಲೆಕ್ಟ್ರಾನಿಕ್ ಉಪಕರಣಗಳು ಮುಚ್ಚಿದ ಪಾತ್ರೆ ಮತ್ತಿತರ ವಸ್ತುಗಳ ಒಳಗೆ ಹೊಕ್ಕಲು ಮೊದಲು ತನ್ನ ಮೀಸೆಗಳನ್ನು ತೂರಿಸುತ್ತದೆ ಅದರ ಮೀಸೆ ಆ ವಸ್ತುಗಳ ಒಳಗೆ ಹೋದರೆ ಅದರ ಇಡೀ ದೇಹ ಒಳಗೆ ಹೋಗುತ್ತದೆ ಈ ಹಕ್ಲೆ ಎಂಬ ಶಬ್ದವನ್ನು ಪದೇ ಪದೇ ತೊಂದರೆ ಕೊಡುವವರನ್ನು ಸಂಭೋದಿಸಲು ಬಳಸುವುದುಂಟು ಈ ಹಕ್ಲೆ ಪೋಂಕ್ ಸಂಭೋದನೆ ಹೋಲಿಕೆ ಕಾಸರಗೋಡು ಮೀನುಗಾರರ ಮನೆತೆರವು ಮಾಡಿದ ಪೃಭತಿಗಳಿಗೆ ಚೆನ್ನಾಗಿ ಅನ್ವಯವಾಗುತ್ತದೆ.

ಹಾಗೇಯೇ ಮುಖ್ಯವಾಗಿ ಮಾವಿನ ಮರದ ಮೇಲೆ ಎಲೆಗಳನ್ನು ಸೇರಿಸಿ ಗೂಡು ಕಟ್ಟುವ ಕೆಂಪು ಇರುವೆಗಳು ಸಸ್ಯ, ಹೇನು, ಮೀಲಿ, ತಿಗಣೆಗಳು ಮತ್ತು ಕೆಲವು ಜೀರುಂಡೆಗಳಿಗೆ ತಾವು ತಂದ ಆಹಾರವನ್ನು ನೀಡಿ ಸಾಕಿಕೊಂಡಿರುತ್ತವೆ ಈ ಸಾಕಿಕೊಂಡಿರುವ ಗುಲಾಮರು ಸ್ರವಿಸುವ ಸಿಹಿ ದ್ರವದ ಹನಿಗಳನ್ನು ಕೆಂಪು ಇರುವೆಗಳು ಸೇವಿಸುತ್ತವೆ ಇರುವೆ ಸಾಕುವ ಈ ಗುಲಾಮರ ಮುಖ್ಯ ಕೆಲಸವೆಂದರೆ ಗೂಡಿನ ಸುತ್ತ ಮುತ್ತ ನಡೆಯುವ ವಿದ್ಯಮಾನಗಳ ವರದಿಯನ್ನು ಇರುವೆಗಳಿಗೆ ಒಪ್ಪಿಸುವುದು ಮತ್ತು ಇತರ ಸಾಧು ಇರುವೆಗಳ ಗೂಡಿನಲ್ಲಿರುವ ಆಹಾರಗಳನ್ನು ಅಪಹರಿಸಿಕೊಂಡು ಬರಲು ಇರುವೆಗಳಿಗೆ ಸುಳಿವು ನೀಡುವುದು ಈ ಗುಲಾಮರ ಉದಾಹರಣೆಯನ್ನು ಖಾಸಗಿ ಬಂದರು ನಿರ್ಮಾಣ ಯೋಜನೆಯ ಪೃಭತಿಗಳ ಏಜೆಂಟರಿಗೆ ಹೋಲಿಕೆ ಮಾಡಬಹುದಾಗಿದೆ.

ಇನ್ನು ಜಿರಳೆಗಳ ಬಗ್ಗೆ ಹೇಳುವುದಾದರೆ ಸುಮಾರು 300 ದಶಲಕ್ಷ ವರ್ಷಗಳಿಂದಲೂ ತಮ್ಮ ಆಸ್ತಿತ್ವ ಉಳಿಸಿಕೊಂಡು ಬಂದಿದ್ದರೂ ಅವುಗಳ ಸ್ವಭಾವಗಳಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲವಾದರೂ ಕೆಲವು ಶೀಂತ್ರಿ ಬುಧ್ದಿಯ ಮನುಷ್ಯರ ನಡವಳಿಕೆಯನ್ನು ಅದು ರೂಡಿಸಿಕೊಂಡಿರಬಹುದು ಮನುಷ್ಯ ಕಂಡು ಹಿಡಿಯುವ ಜಿರಳೆ ನಾಶಕ ಕೇವಲ ತಾತ್ಕಾಲಿಕ ಪರಿಣಾಮ ಬೀರುವುದೇ ಹೊರತು ಶಾಶ್ವತ ಪರಿಹಾರವಾಗುವುದಿಲ್ಲ ಅದರಲ್ಲೂ ಅದರ ಹಕ್ಲೆ ಪೋಂಕು ಬುದ್ಧಿ ಮನೆ ಹಾಳು ಮಾಡುವ ಮನುಷ್ಯ ರಿಗೆ ತುಂಬಾ ಪ್ರಿಯವಾಗಿರುವುದಂತೂ ಸತ್ಯ.

ಉಮಾಕಾಂತ ಖಾರ್ವಿ ಕುಂದಾಪುರ

2 thoughts on “ಹಕ್ಲೆ ಪೋಂಕ್

  1. ಈ ಲೇಖನವು ಕಸರ್ಕೋಡು ಹೊನ್ನಾವರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಉಧಾರಣೆಗಳೊಂದಿಗೆ ಬಹಳ ಆಳವಾದ ಅರ್ಥವನ್ನು ನೀಡಿದೆ.

    1. ಸರ್ ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏

Leave a Reply to ಉಮಾಕಾಂತ ಖಾರ್ವಿ ಕುಂದಾಪುರ Cancel reply

Your email address will not be published. Required fields are marked *