ಕೊಂಕಣಿ ಖಾರ್ವಿ ಸಮಾಜ, ಅಂತರ್ಜಾತಿ ವಿವಾಹ ಸೃಷ್ಟಿಸಿದ ಗಂಭೀರ ಸಾಮಾಜಿಕ ಸಮಸ್ಯೆ

ನಮ್ಮ ಸಮಾಜದ ಹೆಣ್ಣು ಮಕ್ಕಳ ಅಂತರ್ಜಾತಿ ವಿವಾಹ ಸೃಷ್ಟಿಸಿದ ಗಂಭೀರ ಸಾಮಾಜಿಕ ಸಮಸ್ಯೆ ಹಲವು ಶತಮಾನಗಳ ಕಾಲದ ಸಾಮಾಜಿಕ ಅಸಮಾನತೆ, ದಬ್ಬಾಳಿಕೆ ದೌರ್ಜನ್ಯಗಳನ್ನು ಮೆಟ್ಟಿ ನಿಂತು ಕೊಂಕಣಿ ಖಾರ್ವಿ ಸಮಾಜ ಇಂದು ವಿವಿಧ ಕ್ಷೇತ್ರಗಳಲ್ಲಿ ಕೆಚ್ಚೆದೆಯಿಂದ ಮುನ್ನಡೆಯುತ್ತಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇಂತಹ ಸಂಕ್ರಮಣ ಕಾಲದಲ್ಲಿ ನಮ್ಮ ಸಮಾಜದ ಹೆಣ್ಣು ಮಕ್ಕಳು ಸಮಾಜದ ಆಸ್ಮಿತೆಯನ್ನು ಮರೆತು ಅಂತರ್ಜಾತಿ ವಿವಾಹವೆಂಬ ಬಲೆಯೊಳಗೆ ಸಿಲುಕುತ್ತಿರುವುದು ಸಮಾಜದ ಪಾಲಿಗೆ ಬಹು ದೊಡ್ಡ ತೊಡಕಾಗಿ ಪರಿಣಮಿಸಿದೆ.

ಇಂದು ಕೊಂಕಣಿ ಖಾರ್ವಿ ಸಮಾಜದ ಯುವತಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದು, ಮಹಾನಗರಗಳಲ್ಲಿ ಉನ್ನತ ಸಂಬಳ ಪಡೆಯುವ ಹುದ್ದೆಯಲ್ಲಿದ್ದಾರೆ. ಅವರು ಸಹಜವಾಗೇ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಸೂಕ್ತ ವರನನ್ನು ಪ್ರೇಮ ವಿವಾಹ ಆಗುತ್ತಿದ್ದಾರೆ. ಇಂದು ಉದ್ಯೋಗ ನಿಮಿತ್ತ ಯುವಕ ಯುವತಿಯರು ಬೆಂಗಳೂರಿನ ಹಾದಿ ಹಿಡಿದಿದ್ದಾರೆ. ಇದು ಬದುಕಿನ ಅನಿವಾರ್ಯತೆ ಕೂಡ. ಆದರೆ ಈ ರೀತಿ ಅಂತರ್ಜಾತಿ ವಿವಾಹ ಆಗುತ್ತಿರುವುದರಿಂದ ಇಂದು ಕೊಂಕಣಿ ಖಾರ್ವಿ ಯುವಕರು ವಧುಗಳ ಕೊರತೆಯನ್ನು ಎದುರಿಸುತಿದ್ದಾರೆ.

ಕೊಂಕಣಿ ಖಾರ್ವಿ ಸಮಾಜದ ಜನಸಂಖ್ಯೆಯ ಅನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದು ನಮ್ಮ ಸಮಾಜದ ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣುಮಕ್ಕಳು ಸಿಗದೇ ಇರುವ ಗಂಭೀರ ಸಾಮಾಜಿಕ ಸಮಸ್ಯೆ ಸೃಷ್ಟಿಯಾಗಿದೆ ಇದಕ್ಕೆ ಮುಖ್ಯ ಕಾರಣ ನಮ್ಮ ಸಮಾಜದ ಹೆಣ್ಣು ಮಕ್ಕಳು ಅನ್ಯ ಸಮಾಜದ ಗಂಡುಮಕ್ಕಳೊಂದಿಗೆ ಅಂತರ್ಜಾತಿ ವಿವಾಹವಾಗುತ್ತಿರುವುದು ಈ ಸಾಮಾಜಿಕ ಸಮಸ್ಯೆ ಉಂಟಾಗಲು ಮುಖ್ಯವಾಗಿ ಎರಡು ಕಾರಣವಿದ್ದು, ನಮ್ಮ ಸಮಾಜದ ಹೆತ್ತವರ ಬಡತನ ಒಂದು ಕಾರಣವಾದರೆ ಮತ್ತೊಂದು ಕಾರಣವೆಂದರೆ ವಿದ್ಯಾವಂತ ಹೆಣ್ಣುಮಕ್ಕಳ ಪರಸ್ಪರ ಆಕರ್ಷಣೆಯ ಜೊತೆಗೆ ಪ್ರಗತಿಪರ ಮನೋಭಾವ.

ರಾತ್ರಿ ಹಗಲು ಎನ್ನದೇ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಬೆವರು ಸುರಿಸಿ ದುಡಿಯುವ ಹೆತ್ತವರನ್ನೇ ಧಿಕ್ಕರಿಸಿ ಸ್ವೇಚ್ಚೆಯಿಂದಾಗಿ ಅನ್ಯ ಸಮಾಜದ ಯುವಕರನ್ನು ಮದುವೆಯಾಗುತ್ತಿರುವ ನಮ್ಮ ಸಮಾಜದ ಹೆಣ್ಣು ಮಕ್ಕಳು ನಮ್ಮ ಸಮಾಜದ ಅಸ್ಮಿತೆಗೆ ಸವಾಲಾಗುತ್ತಿದ್ದಾರೆ. ಇದೊಂದು ಸಮಸ್ಯೆಯ ಒಂದು ಮುಖವಾದರೆ ಸಮಸ್ಯೆಯ ಇನ್ನೊಂದು ಮುಖ ನಮ್ಮ ಸಮಾಜದ ಬಡವರ ಹೆಣ್ಣುಮಕ್ಕಳು, ಹೆತ್ತವರ ಸುಪರ್ದಿಯಲ್ಲಿಯೇ ಅನ್ಯ ಸಮಾಜದ ಗಂಡುಮಕ್ಕಳನ್ನು ಮದುವೆಯಾಗುತ್ತಿರುವುದು ನಮ್ಮ ಸಮಾಜದ ಬಡ ಕುಟುಂಬಗಳನ್ನು ಟಾರ್ಗೆಟ್ ಮಾಡಿಕೊಂಡು ಅನ್ಯ ಸಮಾಜದ ಯವಕರು ನಮ್ಮ ಸಮಾಜದ ಬಡ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿರುವ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಇಂದಿಗೂ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಹಿಂದೂ ಸಮಾಜದ ಪ್ರಬಲ ಜಾತಿಗಳು ಇಲ್ಲಿ ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಿರುವ ಮುಖ್ಯ ಭೂಮಿಕೆಯಲ್ಲಿರುವುದು ಗಮನಾರ್ಹ ಸಂಗತಿ.

ಮೀನುಗಾರಿಕೆ ನಮ್ಮ ಸಮಾಜದ ಮುಖ್ಯ ಉದ್ಯೋಗ ತಂದೆ ಮೀನು ಹಿಡಿಯಲು ಹೋದರೆ ತಾಯಿ ಮಾರ್ಕೆಟ್ ನಲ್ಲಿ ಮೀನು ಮಾರುತ್ತಾಳೆ ಎಲ್ಲಾ ಸಂಕಷ್ಟ ನೋವುಗಳನ್ನು ಸಹಿಸಿಕೊಂಡು ಹೆತ್ತವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು, ಒಳ್ಳೆಯ ಉದ್ಯೋಗ ದೊರಕಿಸುವಲ್ಲಿ ಬಹಳ ಪರಿಶ್ರಮ ಪಡುತ್ತಾರೆ ಆದರೆ ಆಗುವುದೇ ಬೇರೆ. ಉನ್ನತ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವ, ನಗರೀಕರಣ ಪ್ರಭಾವದ ಜೊತೆಗೆ ಪರಸ್ಪರ ಆಕರ್ಷಣೆಗಳಿಗೆ ಒಳಗಾಗಿ ಹೆತ್ತವರು, ಸಮಾಜ, ಮನೆತನ ಹಿರಿಯರ ಕಟ್ಟುಪಾಡುಗಳನ್ನು ಕಿತ್ತೊಗೆದು ಅನ್ಯ ಸಮಾಜದ ಯುವಕರನ್ನು ಮದುವೆಯಾಗಿ ಸಮಾಜದ ಗಂಡು ಹೆಣ್ಣಿನ ಜನಸಂಖ್ಯಾ ಅನುಪಾತಕ್ಕೆ ಧಕ್ಕೆ ತಂದಿರುವ ವಿಷಮ ಸನ್ನಿವೇಶ ಪ್ರಸ್ತುತ ಉದ್ಬವವಾಗಿದೆ. ಹಿಂದೂ ಸಮಾಜದ ಹಲವು ಜಾತಿಗಳ ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹವಾಗಿ ತಮ್ಮ ಸಮಾಜದ ಅಸ್ಮಿತೆ ಕ್ಷೀಣಿಸುತ್ತಿರುವ ವಿಚಾರವನ್ನು ಮನಗಂಡು ಆ ಸಮಾಜದ ಪ್ರಮುಖರು ಗಂಭೀರವಾಗಿ ಚಿಂತನೆ ಮಾಡಿ ಬಹಳ ಕಟ್ಟುನಿಟ್ಟಿನ ಮತ್ತು ಸುಧಾರಣಾ ಕ್ರಮವನ್ನು ಕೈಗೊಂಡರು. ಅದರ ಪರಿಣಾಮವಾಗಿ ಆ ಹಿಂದುಳಿದ ಸಮಾಜದ ಹೆಣ್ಣು ಮಕ್ಕಳು ಅದೇ ಸಮಾಜದ ಸುಪರ್ದಿಗೆ ಒಳಪಟ್ಟು ಸ್ವಸಮಾಜದ ಗಂಡುಮಕ್ಕಳನ್ನು ಮದುವೆಯಾಗುವ ಸನ್ನಿವೇಶ ಸೃಷ್ಟಿಯಾಯಿತು. ಅಷ್ಟರವರಿಗೆ ಆ ಹಿಂದುಳಿದ ಸಮಾಜದ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿದ್ದ ಪ್ರಬಲ ಜಾತಿಯ ಕಣ್ಣು ನಮ್ಮ ಸಮಾಜದ ಹೆಣ್ಣು ಮಕ್ಕಳ ಕಡೆಗೆ ತಿರುಗಿತು.

ಕೊಟ್ಟ ಹೆಣ್ಣು ಕುಲದ ಹೊರಗೆ ಎಂಬ ಗಾಧೆ ಮಾತಿದೆ ಆದರೆ ಅಂತರ್ಜಾತಿ ವಿವಾಹವಾದರೆ ಕುಲ ಮಾತ್ರವಲ್ಲ, ಒಂದು ಸಮಾಜದ ವಂಶವೃಕ್ಷ ನಾಶವಾಗಿ, ಸಮಾಜದ ಆಸ್ಮಿತೆಯೇ ಇಲ್ಲವಾಗುತ್ತದೆ ಇದು ನಿಜಕ್ಕೂ ಗಂಭೀರ ವಿಚಾರ ಪ್ರಸ್ತುತ ಈ ಗಂಭೀರ ಸಾಮಾಜಿಕ ಸಮಸ್ಯೆ ನಮ್ಮ ಸಮಾಜವನ್ನು ಇನ್ನಿಲ್ಲದಂತೆ ಭಾಧಿಸುತ್ತಿದ್ದು, ಸಮಾಜದ ಹೆಣ್ಣು ಮಕ್ಕಳ ಹೆತ್ತವರು, ಸಮಾಜದ ಗಣ್ಯರು, ಚಿಂತಕರು ಈ ದಿಸೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡು ಶತಮಾನಗಳ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ವೈಶಿಷ್ಟ್ಯಪೂರ್ಣ ಜೀವನ ಶೈಲಿಯನ್ನು ವಿಧೇಯಿಸಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆಯನ್ನು ಜತನದಿಂದ ಕಾಪಾಡಿಕೊಳ್ಳುವ ಅನಿವಾರ್ಯತೆಯ ಕಾಲಘಟ್ಟದಲ್ಲಿದಲ್ಲಿದ್ದೇವೆ.

ಖಾರ್ವಿ ಸಮಾಜದ ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹ ಆಗುತ್ತಿರುವ ಈ ಸಾಂಧರ್ಭಿಕ ಸನ್ನಿವೇಶದ ಕುರಿತಂತೆ ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಹಿರಿಯರೊಬ್ಬರು ತಮ್ಮಸ್ವಾನುಭವವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಅವರು ಬಾಡಿಗೆ ಮನೆಯಲ್ಲಿ ಇದ್ದಾಗ ಮೇಲಿನ ಅಂತಸ್ತಿನಲ್ಲಿ ಪ್ರಬಲ ಜಾತಿಯ ಕುಟುಂಬವೊಂದು ವಾಸ್ತವ್ಯ ಮಾಡುತ್ತಿತ್ತು ಈ ಹಿರಿಯರ ಮಗಳನ್ನು ಮೇಲಿನ ಅಂತಸ್ತಿನಲ್ಲಿದ್ದ ಅನ್ಯ ಸಮಾಜದ ಕುಟುಂಬದ ಹುಡುಗನೊಂದಿಗೆ ಮದುವೆ ಮಾಡಿ ಕೊಡುವಂತೆ ಭಿನ್ನವಿಸಿಕೊಂಡಾಗ ಹಿರಿಯರು ತಮ್ಮ ಮಗಳ ಅಭಿಪ್ರಾಯವನ್ನು ಕೇಳಿದರು ತಂದೆಯ ಮಾತಿಗೆ ವಿನಯದಿಂದಲೇ ಉತ್ತರಿಸಿದ ಮಗಳು ಅಪ್ಪ ನನ್ನ ಖಾರ್ವಿ ಸಮಾಜದ ಅನನ್ಯವಾದ ಸಂಸ್ಕೃತಿ ಆಚರಣೆಗಳನೆಲ್ಲ ಧಿಕ್ಕರಿಸಿ ತಾನು ಅಂತರ್ಜಾತಿ ವಿವಾಹವಾಗಲಾರೆ ನನ್ನ ಸಮಾಜದ ಹುಡುಗನನ್ನೇ ನಾನು ಮದುವೆಯಾಗುತ್ತೇನೆ ಅನ್ಯ ಸಮಾಜದ ಹುಡುಗನನ್ನು ವಿವಾಹವಾಗಿ ನಮ್ಮ ಸಂಸ್ಕೃತಿ ಆಚರಣೆಗಳಿಂದ ಮತ್ತು ಭಾಂದವ್ಯಗಳಿಂದ ವಿಮುಖವಾಗಲು ನನಗೆ ಇಷ್ಟವಿಲ್ಲ ಸಮಾಜದ ಅಭಿವೃದ್ಧಿಗಾಗಿ ಕ್ಷಣಕ್ಷಣಕ್ಕೂ ಚಿಂತನೆ, ಹೋರಾಟ ಮಾಡುತ್ತಿರುವ ನಿನ್ನ ಶ್ರೇಷ್ಠ ವ್ಯಕ್ತಿತ್ವಕ್ಕೆ ನಾನು ಕುಂದು ತರಲಾರೆ, ಸಮಾಜಕ್ಕೊಂದು ಮಾದರಿಯಾಗಿರುವ ನಿಮ್ಮ ಬದುಕು ವ್ಯಕ್ತಿತ್ವ ನಮಗೆಲ್ಲಾ ಪ್ರೇರಣೆಯಾಗಿರುವ ನಾನು ಎಲ್ಲವನ್ನು ತೊರೆದು ಅಂತರ್ಜಾತಿ ವಿವಾಹವಾಗುವುದು ಸಮಂಜಸವಲ್ಲ ಎಂದು ತನ್ನ ಹೃದಯದ ಮಾತುಗಳನ್ನು ನಿಖರವಾಗಿ ವ್ಯಕ್ತಪಡಿಸಿದಳು ಮತ್ತು ನಮ್ಮದೇ ಸಮಾಜದ ಹುಡುಗನನ್ನು ಮದುವೆಯಾಗಿ ಸುಖವಾಗಿದ್ದಾಳೆ. ಖಾರ್ವಿ ಸಮಾಜದ ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹವಾಗುತ್ತಿರುವ ಈ ಕಳವಳಕಾರಿ ಸಂದರ್ಭದಲ್ಲಿ ಈ ಹಿರಿಯರು ತಮ್ಮ ಮಗಳು ಖಾರ್ವಿ ಸಮಾಜದ ಘನತೆ, ಹಿರಿಮೆ ಮತ್ತು ಸ್ವಾಭಿಮಾನವನ್ನು ಅತ್ಯಂತ ಅಭಿಮಾನದಿಂದ ಅನಾವರಣಗೊಳಿಸಿದ ಈ ಘಟನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ಅಂತರ್ಜಾತಿ ವಿವಾಹದ ಸಂಕೀರ್ಣ ವ್ಯವಸ್ಥೆಯೊಳಗೆ ಸಿಲುಕಿ ನಮ್ಮ ಸಮಾಜದ ಹೆಣ್ಣುಮಕ್ಕಳು ಸಮಾಜದಿಂದ ವಿಮುಖರಾಗುತ್ತಿರುವ ಅತಿ ಸೂಕ್ಷ್ಮ ಮತ್ತು ಗಂಭೀರ ಸಾಮಾಜಿಕ ಸಮಸ್ಯೆಯ ಬಗ್ಗೆ ಮತ್ತು ಇದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಸಮಾಜದ ಜನರ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಖಾರ್ವಿ ಆನ್ಲೈನ್ ನೊಂದಿಗೆ ಹಂಚಿಕೊಳ್ಳಬೇಕಾಗಿ ವಿನಂತಿ.

ಸುಧಾಕರ್ ಖಾರ್ವಿ
www.kharvionline.com

One thought on “ಕೊಂಕಣಿ ಖಾರ್ವಿ ಸಮಾಜ, ಅಂತರ್ಜಾತಿ ವಿವಾಹ ಸೃಷ್ಟಿಸಿದ ಗಂಭೀರ ಸಾಮಾಜಿಕ ಸಮಸ್ಯೆ

  1. Yes, we should take initiative about this

    Take necessary awareness and side effects of our caste

Leave a Reply

Your email address will not be published. Required fields are marked *