ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಕೀರ್ತಿಶೇಷ ನರಸಿಂಹ ಆರ್ಕಾಟಿ – ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಕೀರ್ತಿಶೇಷ ನರಸಿಂಹ ಆರ್ಕಾಟಿ -ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕೋಡಿ ಕನ್ಯಾಣದಲ್ಲಿ ದಿನಾಂಕ 29 ಮಾರ್ಚ್ 2026 ಆದಿತ್ಯವಾರ ಸಂಜೆ ಗಂಟೆ 5:00 ಕ್ಕೆ ಸರಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಮಂಟಪದಲ್ಲಿ ಕೊಂಕಣಿ ಖಾರ್ವಿ ಲೋಕವೇದ್ ಕಲಾ ಮಾಂಡ್, ಬ್ರಹ್ಮಾವರ. ಇದರ ಪ್ರಸ್ತುತಿಯಲ್ಲಿ ಶ್ರೀ ನರಸಿಂಹ ಆರ್ಕಾಟಿ ಜೀವನ ಚರಿತ್ರೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ವಿಶಿಷ್ಟವಾಗಿ ನೆರವೇರಿತು.

ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಗುರುವಂದನಾ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಬಿ. ಮಾಧವ ಖಾರ್ವಿ ವಹಿಸಿದರು. ದೀಪ ಪ್ರಜ್ವಲನೆಯನ್ನು ಕ.ಸಾ.ಪ. ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾದ, ಶಾರದಾ ರೆಸಿಡೆನ್ಸಿ ಸ್ಕೂಲ್ ಉಡುಪಿ ಇದರ ಪ್ರಾಂಶುಪಾಲರಾದ ಶ್ರೀ ಯು. ವಿದ್ಯಾವಂತ ಆಚಾರ್ಯ, ಪುಸ್ತಕದ ಸಂಕಲನಕಾರರಾ ಶ್ರೀ ಆಲ್ಫೋನ್ಸಸ್ ಡಿಸೋಜಾ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಗೀತಾ ಗೋಪಾಲ ಖಾರ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರರಾವ್, ವಿಶ್ರಾಂತ ಶಿಕ್ಷಣಾಧಿಕಾರಿ ಶ್ರೀ ಕೆ ಕೃಷ್ಣಮಾಸ್ಟರ್, ಆತ್ಮರಾಮ್ ಆರ್ಕಟ್ ದೈಹಿಕ ಶಿಕ್ಷಕರಾದ ಶ್ರೀ ವಿಜಯ ಕೆ ನಾಯರಿ, ಕೊಂಕಣಿ ಖಾರ್ವಿ ಲೋಕವೇದ್ ಕಲಾ ಮಾಂಡ್ ನ ಅಧ್ಯಕ್ಷರಾದ ಶ್ರೀ ಕೆ ರಾಮಚಂದ್ರ ಖಾರ್ವಿ ಹಾಗೂ ನೆರೆದ ನರಸಿಂಹ ಆರ್ಕಾಟಿ ಅಭಿಮಾನಿ ಬಂಧುಗಳ ಸಮ್ಮುಖದಲ್ಲಿ ಶ್ರೀ ರವಿ ಟಿ. ನಾಯಕ್ ಅಧ್ಯಕ್ಷರು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘ (ರಿ) ಇದರ ಅಧ್ಯಕ್ಷರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನೆರವೇರಿಸಿದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಧೀರೇಂದ್ರ ನಾಯಕ್ ಸ್ವಾಗತಿಸಿದರು. ಖಜಾಂಚಿ ಶ್ರೀ ಸದಾನಂದ ಖಾರ್ವಿ ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನ ಕರಾವಳಿಯ ಮುತ್ಸದ್ದಿ ಹಾಗೂ ಕರಾವಳಿಯ ಗಾಂಧಿ ಎಂದು ಸಂಭೋದಿಸಲ್ಪಡುವ ಕೀರ್ತಿಶೇಷ ನರಸಿಂಹ ಆರ್ಕಾಟಿ ಅವರ ಬಗ್ಗೆ ತಿಳಿಸುತ್ತಾ ಸಂಸ್ಥೆ ಉದಯವಾದ ಸದುದ್ದೇಶ ವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಎಲ್ಲಾ ಅತಿಥಿ ಅಭ್ಯಾಗತರು ಆರ್ಕಾಟರ ಹೋರಾಟದ ಜೀವನ ಹಾಗೂ ಅವರು ಇಂದಿನ ತಲೆಮಾರಿಗೆ ಬಿಟ್ಟುಹೋದ ಜೀವನದ ಮೌಲ್ಯವನ್ನು ತಿಳಿಸಿದರು.

ಕೊಂಕಣಿ ಖಾರ್ವಿ ಲೋಕವೇದ್ ಮಾಂಡ್ ಎನ್ನುವ ಸಾಂಸ್ಕೃತಿಕ ಸಂಸ್ಥೆಯ ಪರಿಕಲ್ಪನೆಯನ್ನು ಕೊಟ್ಟು ನಿರಂತರ ಸಂಸ್ಥೆಯಲ್ಲಿ ದುಡಿದ ಹಾಗೂ ನರಸಿಂಹ ಆರ್ಕಾಟಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಊರಿನ ರಸ್ತೆಗೆ ಅವರ ಹೆಸರನ್ನು ಸೂಚಿಸಿ ಕೆಲಸ ಮಾಡಿ ಅಪಾರ ಹಿತೈಷಿಗಳು ಮತ್ತು ಬಂಧುಗಳನ್ನು ಅಗಲಿದ ದಿ. ಕುಂದಾಪುರ ನಾರಾಯಣ ಖಾರ್ವಿ ಯವರಿಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಪುಸ್ತಕದ ಸಂಕಲನಕಾರರಾದ ಶ್ರೀ ಆಲ್ಫೋನ್ಸಸ್ ಡಿಸೋಜಾ ಇವರನ್ನು ಗೌರವಿಸಲಾಯಿತು. ಶ್ರೀ ಮಡಿ ವಿಶ್ವನಾಥ ಖಾರ್ವಿ ಧನ್ಯವಾದ ಸಮರ್ಪಣೆ ಮಾಡಿದರು. ಕುಮಾರಿ ಪ್ರಗತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *