ಕೊಂಕಣಿ ಖಾರ್ವಿ ಕಲಾ ಮಾಂಡ್ ಇದರ 25 ನೇ ವರ್ಷದ ಸವಿನೆನಪಿಗಾಗಿ ಕೊಂಕಣಿ ಖಾರ್ವಿ ಸಮಾಜ ಭಟ್ಕಳ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕೊಂಕಣಿ ಖಾರ್ವಿ ಸಮಾಜದ ಅದ್ವಿತೀಯ ಆಸ್ಮಿತೆಯಾದ ಹೋಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ತಾರೀಕು 28.2.2026 ರಂದು ರಾಜ್ಯ ಮತ್ತು ಪರರಾಜ್ಯದಲ್ಲಿ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಒಗ್ಗೂಡಿವಿಕೆಯಲ್ಲಿ ಭಟ್ಕಳ ಬಂದರು ಕಡಲತೀರದಲ್ಲಿ ಸಿಗ್ಮಾ ಪೊರಬ್ 2026 ಅನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಈಚೆಗೆ ಲಾಂಛನ ಅನಾವರಣಗೊಳಿಸಲಾಯಿತು.
ಸಮಾಜದ ಅಧ್ಯಕ್ಷರಾದ ಸುಬ್ರಾಯ ಖಾರ್ವಿ, ಉಪಾಧ್ಯಕ್ಷರಾದ ಕೇಶವ ಖಾರ್ವಿ, ಹಿರಿಯರಾದ ನಾರಾಯಣ ಖಾರ್ವಿ, ಸಮಾಜದ ಮುಖಂಡರಾದ ತಿಮ್ಮಪ್ಪ ಖಾರ್ವಿ, ರತ್ನಾಕರ ಖಾರ್ವಿ, ರಾಜೇಂದ್ರ ಖಾರ್ವಿ, ಜನಾರ್ಧನ ಖಾರ್ವಿ, ಮೋಹನ್ ದಾಸ್ ಖಾರ್ವಿ ತಿಮ್ಮಪ್ಪ ಖಾರ್ವಿ, ಗ್ರಾ.ಪಂ ಸದಸ್ಯರಾದ ಅನಿಲ್ ಖಾರ್ವಿ, ಕೊಂಕಣಿ ಖಾರ್ವಿ ವಿವಿದ್ದೋದೇಶ ಸೊಸೈಟಿಯ ಸಿಬ್ಬಂದಿ ಶ್ರೀಧರ್ ಖಾರ್ವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯ ಮತ್ತು ಪರರಾಜ್ಯದಲ್ಲಿ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಒಗ್ಗೂಡಿವಿಕೆಯಲ್ಲಿ ಭಟ್ಕಳ ಬಂದರು ಕಡಲತೀರದಲ್ಲಿ ಸಿಗ್ಮಾ ಪೊರಬ್ ಎಂಬ ವೇದಿಕೆಯಲ್ಲಿ ಆಯಾ ಊರಿನ ಕೊಂಕಣಿ ಖಾರ್ವಿ ಸಮಾಜದ ಜನಪದ ಹಾಡುಗಳು,ನೃತ್ಯ,ಲಾವಣಿ,ಕೋಲಾಟ,ದಾಲೋರ್ ಮುಂತಾದ ಕಲಾ ಪ್ರಕಾರಗಳನ್ನು ಪದರ್ಶಿಸಲು ಆಹ್ವಾನಿಸಲಾಗಿದೆ.
ಆಧುನಿಕ ಸಂಗೀತವನ್ನು ಹೋಳಿಹಬ್ಬದ ಜನಪದ ಹಾಡುಗಳಲ್ಲಿ ಮಿಳಿತಗೊಳಿಸದೇ ಶುದ್ಧ ಜನಪದೀಯ ಶೈಲಿಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಹೋಳಿಹಬ್ಬದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ನಮ್ಮ ಹೆಮ್ಮೆಯ ಕೊಂಕಣಿ ಜನಪದ ಹೋಳಿ ಹಬ್ಬದ ನೃತ್ಯ,ಕುಣಿತಗಳ ಕಲಾಪ್ರಕಾರಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಈ ಮೂಲಕ ಕೈ ಜೋಡಿಸೋಣ ಎಂದು ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಇಡೀ ದಕ್ಷಿಣ ಭಾರತದಲ್ಲೀಯೇ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆ ಅದ್ವಿತೀಯವಾಗಿದ್ದು, ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ಜನಪದ ಹಾಡು ನೃತ್ಯಗಳ ಭಂಡಾರವನ್ನು ಸಮಸ್ತ ಜಗತ್ತು ಈ ಸಂದರ್ಭದಲ್ಲಿ ಬೆರಗುಗಣ್ಣುಗಳಿಂದ ನೋಡುತ್ತಿರುತ್ತದೆ. ಬನ್ನಿ ಸಮಾಜ ಭಾಂದವರೇ ಕೊಂಕಣಿ ಖಾರ್ವಿ ಕಲಾ ಮಾಂಡ್ 25 ನೇ ವರ್ಷ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ನಮ್ಮ ಜನಪದ ಕಲಾಪ್ರಕಾರಗಳನ್ನು ಜಗತ್ತಿನ ತುಂಬಾ ಹೆಮ್ಮೆಯಿಂದ ಅನಾವರಣಗೊಳಿಸಲು ಸಿದ್ಧರಾಗೋಣ ಎಂದು ಕೊಂಕಣಿ ಖಾರ್ವಿ ಕಲಾ ಮಾಂಡ್ ಅಧ್ಯಕ್ಷರಾದ ಶ್ರೀಧರ್ ಖಾರ್ವಿಯವರು ವಿಜ್ಞಾಪನೆ ಮಾಡಿಕೊಂಡಿದ್ದಾರೆ.
ವರದಿ: ಸುಧಾಕರ ಖಾರ್ವಿ
www.kharvionline.com