ಪ್ರತಿ ವರ್ಷಕ್ಕೊಮ್ಮೆ ನಿನ್ನ ನೋಡಿದಾಗ ಅಂತರಂಗದ ಮೃದಂಗ ಧ್ವನಿಸಿ ಹೊರ ಹೊಮ್ಮೊತ್ತದೆ ರಾಗ ಅನುರಾಗ ತನುವಿನಾಳದ ಬ್ರಂಗ ಬಯಸಿದೆ ಪ್ರತಿದಿನ ನಿನ್ನ ಸಂಗ, ಭಕ್ತಿ ಭಾವದಲಿ ನಿನ್ನ ಎದೆಗಪ್ಪಿ ಸೇವಿಸಿದಾಗ ಏನಿತೋ ಹರ್ಷ, ಯಾವ ಸುಮದ ಗಂಧವೋ ಇಷ್ಟು ಸೆಳೆದು ವರ್ಷಗಳು ಹುರುಳಿದರು ಆರದ ನಿನ್ನ ಸುಗಂಧವೋ.
ಅಮ್ಮತದ ರುಚಿ ನೋಡಿಲ್ಲ ಆದರೆ ಯಾವ ಪುಣ್ಯವೊ ನಮ್ಮ ಅಮ್ಮನವರ ದೇವರ ಪ್ರಸಾದ ಪ್ರತಿ ವರ್ಷ ಸೇವಿಸುವ ಭಾಗ್ಯವನ್ನ ಆ ತಾಯಿ ನೀಡುರುವಳು, ಎಲ್ಲಕ್ಕಿಂತ ರುಚಿ
ನಮ್ಮ ಹಿತ್ಲುಗದ್ದೆ ಮನೆ ಪಂಜುರ್ಲಿ ದೇವಸ್ಥಾನದ ಅನ್ನ ಪ್ರಸಾದ ಹಾಗೂ ಅಮ್ಮನವರ ದೋಸೆ ಪ್ರಸಾದ ಎಷ್ಟಿದ್ದರೇನು ಬಂತು ಹಣ ಈ ಭಾಗ್ಯವ ಸವಿಯದಿದ್ದರೇ. ಚಿಕ್ಕದಿರುವಾಗನಿಂದಲೂ ವರ್ಷಕ್ಕೊಮ್ಮೆ ಬರುವ ಅಮ್ಮನವರ ಜಾತ್ರಾ ಮಹೋತ್ಸವ ತಪ್ಪಿದ್ದೇ ಇಲ್ಲಾ, ದೇವರಿಗೊಂದು ಭಕ್ತಿ ಭಾವದ ನಮನ ಆದರೆ ಪ್ರಸಾದ ಕೊಡುವ ಸಮಯದಲ್ಲಿ ವಿಪರೀತ ಕೆಲಸ ದ ನಿಮಿತ್ತ ಪ್ರಸಾದ ತಗೆದು ಕೊಳ್ಳಲು ಸಾಧ್ಯವಾಗದಿದ್ದರೂ ಕೂಡಾ ನನ್ನ ಹಿತೈಷಿಗಳ ಮೂಲಕ ನನಗೆ ಪ್ರಸಾದ ಸಿಗುವುದು ಇಂದಿಗೂ ತಪ್ಪಿಲ್ಲಾ.
ನಾವು ಚಿಕ್ಕದಿರುವಾಗ, ದೇವಸ್ಥಾನದ ಒಳಗೆ ಕುಳ್ಳಿರಿಸಿ ದೊಸೆ ಪ್ರಸಾದ ನೀಡುತ್ತಿದ್ದರು, ದೇವಸ್ಥಾನದ ಹೊರಗಡೆ ಸಾಲೊಸಾಲು. ಎಷ್ಟು ಜನ ಕೂರಬಹುದೊ ಅಷ್ಟು ಜನರಿಗೆ ಮಾತ್ರ ಒಳಗಡೆ ಪ್ರವೇಶ ಅಂತಹ ಜನಜಂಗುಳಿ ಮಧ್ಯೆ ಅಮ್ಮನವರ ಪ್ರಸಾದ ಸ್ವೀಕರಿಸಿ ತಾಯಿಗೊಂದು ನಮಿಸುವುದು ನಮ್ಮ ಭಾಗ್ಯ ಹಾಗೂ ಆ ಸಮಯದಲ್ಲಿ ದೊಸೆ ಪ್ರಸಾದ ಇನ್ನೂ ಬೇಕೆಂದರೆ ಎರಡು ರೂಪಾಯಿ ಐದು ರೂಪಾಯಿ ಹತ್ತು ರೂಪಾಯಿ ಹಣ ನೀಡಿದರೆ ಮತ್ತೇ ಪ್ರಸಾದ ಸಿಗುತ್ತಿತ್ತು, ಆದರೆ ಅಂತಹ ಸಮಯದಲ್ಲಿ ನಮಗೆ ಹಣಕೊಟ್ಟು ಪ್ರಸಾದ ಸ್ವೀಕರಿಸುವ ಬಲ ಇಲ್ಲವಾಗಿತ್ತು ಅದೇನೇ ಇರಲಿ, ಆ ಒಂದು ದೊಸೆ ಪ್ರಸಾದ ಸಿಕ್ಕಿದ ಕೂಡಲೇ ಕೆಲವರು ಅಲ್ಲೇ ದೇವಸ್ಥಾನದ ವಠಾರದಲ್ಲಿ ಸೇವಿಸುತ್ತಿದ್ದರು, ನಾನು ಮಾತ್ರ ಸೀದಾ ಮನೆಗೆ ಬಂದು ನನ್ನ ಅಮ್ಮನ ಜೊತೆ ಪ್ರಸಾದ ಸೇವಿಸುತ್ತಿದ್ದೇ ಯಾಕಂದರೆ ಅಮ್ಮ ಕೂಡಾ ಪ್ರಸಾದ ತಿನ್ನಲಿ ಎಂದು, ಇವಾಗಿನ ದಿನಗಳಲ್ಲಿ ನನ್ನ ಅಮ್ಮ ನನಗೆ ಪ್ರಸಾದ ತಕ್ಕೊಂಡು ಬರುತ್ತಿರುವರು.
ಕಾಲಗಳು ಉರುಳಿದಂತೆ, ಕಾಲಕ್ಕೆ ತಕ್ಕಂತೆ, ಬದಲಾವಣೆ ಜಗದ ನಿಯಮದಂತೆ, ಪ್ರಸಾದ ಕೊಡುವ ರೀತಿ ಕೂಡಾ ಬದಲಾಯಿತು, ಹಣ ನೀಡಿ ಪ್ರಸಾದ ಸ್ವೀಕರಿಸುವ ರೀತಿ ನಿಂತಿತು, ಕೂತು ಪ್ರಸಾದ ಸ್ವೀಕರಿಸುವ ರೀತಿ ಕೂಡಾ ನಿಂತಿತು, ಇವಾಗ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸುವ ಮಾದರಿ, ನಿನ್ನೇ ಸಾವಿರಾರು ಜನ ಪ್ರಸಾದ ಸ್ವೀಕರಿಸಿದರು ಎಂದು ಕೇಳಲ್ಪಟ್ಟೇ, ಎಷ್ಟೇ ಜನ ಬರಲಿ ತುಂಬಾ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೊಂದು ಪ್ರಣಾಮಗಳು.
ನಿಜವಾಗಿಯೂ ಹೇಳಬೇಕೆಂದರೆ, ಆವಾಗಿನಿಂದ ಹಿಡಿದು ಇವಾಗಿನ ತನಕ ಅಲ್ಲಿ ಕಾರ್ಯ ಮಾಡುವ ನಮ್ಮ ಸಹೋದರ, ಸಹೋದರಿಯರು, ಮಾತೆಯರಿಗೂ ನನ್ನದೊಂದು ಪ್ರಣಾಮಗಳು, ಅಷ್ಟು ಅಚ್ಚುಕಟ್ಟಾಗಿ ಅವರು ನಿರ್ವಹಿಸುವ ಪರಿ ದೇವರ ವಿಷಯದಲ್ಲಿ – ಆಚರಣೆಯಲ್ಲಿ, ನಮ್ಮ ಊರ ಪರವೂರ ಕೊಂಕಣ ಖಾರ್ವಿ ಸಮಾಜ ಬಾಂಧವರ ಒಗ್ಗಟ್ಟು ಅಮೋಘ, ಅಪ್ರತಿಮ, ಅನ್ಯನ್ಯ.
ಜಾತ್ರೆ ಎಂದರೆ ಜಾತ್ರೆಯೇ ಅದಕ್ಕೆ ಸರಿಸಾಟಿ ಇಲ್ಲಾ, ಪರ್ಯಾಯವೂ ಇಲ್ಲಾ.
ಜಾತ್ರೆ ಅವಿರತ, ಅವಿಶ್ರಾಂತ, ಅನಂತ, ಯಾರು ಇರುವರೋ, ಇರುವುದಿಲ್ಲವೋ, ವರುಷ ಕಳೆದಂತೆ ಹೊಸ ಕ್ಯಾಲೆಂಡರ್ ನಲ್ಲಿ ಜಾತ್ರೆಗಳ ದಿನಾಂಕ ಮತ್ತು ನೆನಪುಗಳ ಮೆರವಣಿಗೆ ಮಾತ್ರ ನಿಗದಿ ಆಗಿರುತ್ತದೆ. ಅಮ್ಮನವರ ಪ್ರಸಾದದ ಬಗ್ಗೆ ಅಮ್ಮನವರ ಬಗ್ಗೆ ಬರೆಯುವುದಾದರೆ ಎಷ್ಟು ಬೇಕಾದರೂ ಬರೆಯಬಹುದು, ಅದು ಮುಗಿಯದು…… ಎಲ್ಲವನ್ನೂ ನೀಡಿರುವವಳು ಅವಳೇ, ತಾಯೇ ನಿನಗೊಂದು ಸಾಷ್ಟಾಂಗ ನಮಸ್ಕಾರ.
ಎಲ್ಲರಿಗೂ ಒಳ್ಳೆಯದಾಗಲಿ
ಶಶಿಕಾಂತ್ ಗಂಗೊಳ್ಳಿ.
ತಮ್ಮ ಬರವಣಿಗೆ ಉತ್ತಮವಾಗಿದೆ ಇದು ನಿರಂತರವಾಗಿರಲಿ ಎಂದು ನಮ್ಮ ಅಪೇಕ್ಷೆ
ಸಾಮಾನ್ಯ ಕಾರ್ಯಕರ್ತ
ನಮೋ ರಾಘವೇಂದ್ರ ಖಾರ್ವಿ ಗಂಗೊಳ್ಳಿ