ಕೆ ಕೆ ಫ್ರೆಂಡ್ಸ್ ರವರ ಸಮಾಜ ಸೇವಾ ಕೈಂಕರ್ಯ, ಒಂದು ಲಕ್ಷದ ಒಂದು ರೂಪಾಯಿ ಸಮರ್ಪಣೆ

ಕೆ ಕೆ ಫ್ರೆಂಡ್ಸ್ ಖಾರ್ವಿಕೇರಿ ಕುಂದಾಪುರ ಇದರ ಸಮಾಜಮುಖಿ ಸೇವಾ ಕೈಂಕರ್ಯಗಳ ನಿದರ್ಶನವಾಗಿ ಶುಕ್ರವಾರ ಶುಭ ದಿನದಂದು ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಒಂದು ಲಕ್ಷದ ಒಂದು ರೂಪಾಯಿಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದಾರೆ. ಶೂನ್ಯದಲ್ಲಿ ಪರಿಪೂರ್ಣತೆಯನ್ನು ತುಂಬಿಕೊಂಡು ಹತ್ತು ಹಲವು ಮಾನವೀಯ ಮೌಲ್ಯ ಮತ್ತು ಸಮಾಜ ಮುಖಿ ಸೇವಾ ಕೈಂಕರ್ಯಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡಿರುವ ಕೆ ಕೆ ಫ್ರೆಂಡ್ಸ್ ನೂರಾರು ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿ, ಹಲವಾರು ಕ್ರೀಡಾ ಕ್ರೀಡಾಕೂಟಗಳನ್ನು ಆಯೋಜಿಸಿ ಕ್ರೋಢೀಕರಿಸಿದ ಮೊತ್ತವನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಹಲವು ಸಮಾಜ ಸೇವಾ ಕೈಂಕರ್ಯಗಳನ್ನು ಮಾಡಿ ಇತರರಿಗೆ ಮಾದರಿಯಾಗಿದೆ.ಶ್ರೀ ಮಹಾಕಾಳಿ ಅಮ್ಮನವರು ಇವರ ಸೇವಾ ಸತ್ಕರ್ಮಗಳಿಗೆ ಅನುಗ್ರಹಿಸಲಿ ಮತ್ತು ಕೆ ಕೆ ಫ್ರೆಂಡ್ಸ್ ರವರ ಸಮಾಜ ಸೇವಾ ಕೈಂಕರ್ಯಗಳು ಮುಂದೆ ಮತ್ತಷ್ಟು ಉತ್ಕರ್ಷ ಪಡೆಯಲಿ ಎಂದು ಶುಭ ಹಾರೈಸುತ್ತೇವೆ

Leave a Reply

Your email address will not be published. Required fields are marked *