ಶ್ರೀಧರ ಖಾರ್ವಿ ಯವರಿಗೆ ಕೊಂಕಣಿ ಖಾರ್ವಿ ಜನಪದ ಸಂಗೀತ ಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ ಪ್ರಥಮ ವಿಶ್ವ ಕೊಂಕಣಿ ಅತ್ಯುತ್ತಮ ಸಂಗೀತ ಪ್ರಶಸ್ತಿ

ಆಧುನಿಕ ಜಗತ್ತಿನ ಪಾಶ್ಚಾತ್ಯ ಸಂಸ್ಕೃತಿಯ ದಾಳಿಗೆ ನಮ್ಮ ಅದೆಷ್ಟೋ ಸಂಸ್ಕೃತಿ ಪರಂಪರೆಗಳು ನಶಿಸಿ ಹೋಗುವ ಹಂತದಲ್ಲಿದೆ. ಇದರಲ್ಲಿ ಕೊಂಕಣಿ ಖಾರ್ವಿ ಸಮಾಜದ ಹೋಳಿ ಹಬ್ಬ ದ ಸಂಧರ್ಭ ದಲ್ಲಿ ಅನಾವರಣಗೊಳ್ಳುವ ಸಿಗ್ಮೋ ನಾಚ್ ಎಂಬ ಕೊಂಕಣಿ ಜನಪದ ಹಾಡು, ನೃತ್ಯ ಗಳು ಕೂಡಾ ಒಂದು. ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ ಈ ಅಪೂರ್ವ ಕಲಾ ಪ್ರಕಾರ ವನ್ನು ತನ್ನ ನಿರಂತರ ಪ್ರಯತ್ನ ದ ಫಲವಾಗಿ ಉಳಿಸಿ, ಬೆಳೆಸಿ ದೇಶದೆಲ್ಲೆಡೆ ಪ್ರಚುರ ಪಡಿಸಿದ ಕೀರ್ತಿ ಭಟ್ಕಳ ಬಂದರಿನ ಶ್ರೀಧರ ಮಂಜುನಾಥ ಖಾರ್ವಿ ಯವರಿಗೆ ಸಲ್ಲುತ್ತದೆ. ರಾಜ್ಯ ದ ಬೆಂಗಳೂರು, ಮೖಸೂರು, ತುಮಕೂರು, ಬೆಳಗಾವಿ, ಗೋವಾ, ದೆಹಲಿಗಳಲ್ಲಿ ಕೂಡಾ ಭಟ್ಕಳ ದ ಯುವಕರ ತಂಡವನ್ನು ಕಟ್ಟಿ ಕೊಂಡು ಅಭೂತಪೂರ್ವ ಪ್ರದರ್ಶನ ನೀಡಿರುತ್ತಾರೆ. ಕರಾವಳಿ ಉತ್ಸವ, ಕದಂಬ ಉತ್ಸವದಲ್ಲೂ ಕೂಡಾ ಇವರು ಸಿಗ್ಮೋ ನಾಚ್ ಕಲಾ ಪ್ರದರ್ಶನ ನೀಡಿರುತ್ತಾರೆ.

ಹೋಳಿ ಜನಪದಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡುತ್ತಿರುವ ಕೊಂಕಣಿ ಖಾರ್ವಿ ಕಲಾ ಮಾಂಡ್ ಭಟ್ಕಳ ಮಂಗಳೂರುನಲ್ಲಿ ಪ್ರಸ್ತುತ ಗಿನ್ನಿಸ್ ದಾಖಲೆ ಬರೆಯಲು ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ ದಲ್ಲಿ ಕೊಂಕಣಿ ಖಾರ್ವಿ ಸಮಾಜದ ಜನಪದ ಹಾಡುಗಳು ಪ್ರದರ್ಶನ ಗೊಳ್ಳಲಿದ್ದು, ನಾಳೆ ಬೆಳಿಗ್ಗೆ 10 ರಿಂದ 11 ಗಂಟೆಗೆ ಈ ಅಪೂರ್ವ ಕಲಾ ಪ್ರಕಾರ ಅನಾವರಣ ಗೊಳ್ಳಲಿದೆ.

ಹೋಳಿ ನೃತ್ಯಕ್ಕೆ ಹೆಜ್ಜೆ ಹಾಕುವ ಹಾಡಿನೊಂದಿಗೆ ನಮ್ಮ ಮೀನುಗಾರರ ಜೀವನ ಶೖಲಿಯನ್ನು ಶ್ರೀಧರ ಖಾರ್ವಿ ಯವರ ನೇತೃತ್ವದಲ್ಲಿ ಕಥಾ ನಿರೂಪಣೆ ಯೊಂದಿಗೆ ಪ್ರಸ್ತುತ ಗೊಳ್ಳಲಿದೆ. ಇದರ ಪೂರ್ವಭಾವಿ ಕಾರ್ಯಕ್ರಮ ದಂಗವಾಗಿ ಸಿಗ್ಮೋನಾಚ್ ಕಲಾ ಪ್ರಕಾರ ಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುವ ಶ್ರೀ ಧರ ಖಾರ್ವಿ ಯವರನ್ನು ನಿನ್ನೆ ಮಾಂಡ್ ಸೊಬಾಣ್ ವತಿಯಿಂದ ಕೊಂಕಣಿ ಖಾರ್ವಿ ಜನಪದ ಸಂಗೀತ ಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ ಪ್ರಥಮ ವಿಶ್ವ ಕೊಂಕಣಿ ಅತ್ಯುತ್ತಮ ಸಂಗೀತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಕೊಂಕಣಿ ಖಾರ್ವಿ ಸಮಾಜಕ್ಕೆ ಸಿಕ್ಕಿರುವ ಗೌರವವಾಗಿದೆ. ಕೊಂಕಣಿ ಜನಪದ ಹಾಡು ನೃತ್ಯ ಕಲಾ ಪ್ರಕಾರ ವನ್ನು ಅನವರತ ಕಾಪಾಡಿಕೊಂಡು ಬಂದಿರುವ ಶ್ರೀಧರ ಖಾರ್ವಿ ಯವರಿಗೆ ಖಾರ್ವಿ ಆನ್ಲೈನ್ ಗೌರವ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

Leave a Reply

Your email address will not be published. Required fields are marked *