ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಕೃತಜ್ಞತಾ ಪತ್ರ

ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ

ಕೃತಜ್ಞತಾ ಪತ್ರ

ಆತ್ಮೀಯ ಸಮಾಜ ಬಾಂಧವರೇ,

ಶ್ರೀಮತ್ಪರಮಹಂಸೇತ್ಯಾದಿ ಬಿರುದಾವಳೀ ವಿರಾಜಮಾನರಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪರಮ ಪವಿತ್ರ ಚರಣಾರವಿಂದಕ್ಕೆ ಸಾಷ್ಟಾಂಗ ನಮನಗಳು.

ಆದರಣಿಯ ಸಮಾಜ ಬಾಂಧವರೇ..,

ದಿನಾಂಕ: 2 ಆಗಸ್ಟ್ 2026 ಆದಿತ್ಯವಾರ ಶ್ರೀ ಶಾರದಾ ಪೀಠ ಶೃಂಗೇರಿಯಲ್ಲಿ ಗುರುವಂದನಾ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಳಪಟ್ಟಂತ ನಮ್ಮ ಎಲ್ಲಾ ಸಮಾಜ ಬಾಂಧವರು ಕುಂದಾಪುರ ಪ್ರಾಂತೀಯ ಧರ್ಮದರ್ಶಿಗಳಾದ ಶ್ರೀ ಲೋಕೇಶ ಅಡಿಗ ಇವರ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಗುರುವಂದನೆ ಮಾಡಿ ನಮ್ಮ ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಅನುಗ್ರಹ, ಆಶೀರ್ವಚನ ಪಡೆದು ಸಂದೇಶವನ್ನು ಆಲಿಸಿ ಧನ್ಯರಾಗಿದ್ದೇವೆ. ಶೃಂಗೇರಿ ಶಾರದಾ ಮಾತೆಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗಿದ್ದೇವೆ.

ಗುರುಗಳು ನಮ್ಮನ್ನು ತಮ್ಮ ವಿಶೇಷ ಪ್ರೀತಿಗೆ ಪಾತ್ರರಾದಂತಹ ಸಮಾಜ ಎಂದು ಸಂಬೋಧಿಸುವಾಗ ನಮ್ಮ ಮೇಲೆ ಅವರಿಗಿರುವ ವಿಶೇಷ ಕಾಳಜಿ ಪ್ರೀತಿ ವ್ಯಕ್ತವಾಗುತ್ತದೆ. ಆದಿಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಂತ ಈ ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಶಿಷ್ಯವರ್ಗ ನಾವು ಎಂಬ ವಿಚಾರ ನಮಗೆ ಅತ್ಯಂತ ಹೆಮ್ಮೆ ಅನಿಸುತ್ತದೆ. ಹಿಂದಿನಿಂದಲೂ ಆಚರಿಸಿಕೊಂಡು ಬಂದು ಅನುಷ್ಠಾನ ಮಾಡಲ್ಪಟ್ಟ ಗುರು-ಶಿಷ್ಯರ ಬಂಧ ಹೀಗೆ ವಿಶಿಷ್ಟವಾಗಿ ಮುಂದಿನ ದಿನದಲ್ಲಿ ಆಚರಿಸಲ್ಪಡಲಿ ಎನ್ನುವುದೇ ನಮ್ಮ ಆಶಯ. ಈ ವರ್ಷ ಆದಿತ್ಯವಾರ ನಮಗೆ ಗುರುವಂದನೆಗೆ ವ್ಯವಸ್ಥೆ ಮಾಡಿಕೊಡಲಾಯಿತು. ಮುಂದಿನ ವರ್ಷ ಚಾತುರ್ಮಾಸ್ಯದ ಪ್ರಥಮ ಶನಿವಾರ ನಮಗೆ ಗುರುವಂದನ ಇರುತ್ತದೆ ಎನ್ನುವ ಮಾನಸಿಕವಾದ ಸಿದ್ಧತೆಯನ್ನು ನಾವು ಇಂದಿನಿಂದಲೇ ಮಾಡಬೇಕಾಗುತ್ತದೆ. ಮುಂದಿನ ಸಾರಿ ನಾವೆಲ್ಲ ಇದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕು; ವಿಶೇಷವಾಗಿ ಗುರುಗಳಿಂದ ಅಭಿನಂದನೆಗೆ ಅರ್ಹರಾಗಬೇಕು. ಈ ಸಾರಿ ನಮ್ಮ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಯಶಸ್ಸಿಗೆ ಕಾರಣೀಭೂತರು ಸಮಸ್ತ ಸಮಾಜ ಭಾಂಧವರು.

ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಪಟೇಲರುಗಳು ಇವರಿಗೆ ತುಂಬು ಹೃದಯದ ಧನ್ಯವಾದಗಳು. ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನ, ಕೊಂಕಣಿ ಖಾರ್ವಿ ಸಮಾಜ, ಖಾರ್ವಿಕೇರಿ ಕುಂದಾಪುರ ಇದರ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಮುಕ್ತೇಸರರು ಇವರಿಗೆ ತುಂಬು ಹೃದಯದ ಧನ್ಯವಾದಗಳು. ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಗಂಗೊಳ್ಳಿ ಇಲ್ಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ.

ಶ್ರೀರಾಮ ಮಂದಿರ ಕಂಚುಗೋಡು ಇಲ್ಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳು. ಕುಂದಾಪುರ ಕೋಡಿ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಮುಖಂಡರಿಗೆ ಧನ್ಯವಾದಗಳು. ಬಸ್ರೂರು ಕೊಂಕಣಿ ಖಾರ್ವಿ ಸಮಾಜದ ಮುಖಂಡರುಗಳಿಗೆ ಧನ್ಯವಾದಗಳು. ಕೋಡಿ ಕನ್ಯಾಣ ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳು. ಸಾಸ್ತಾನ ಕೋಡಿತಲೆ ಕೊಂಕಣಿ ಖಾರ್ವಿ ಸಮಾಜದ ಪಟೇಲರು ಹಾಗೂ ಸಮಿತಿಯ ಪದಾಧಿಕಾರಿಗಳಿಗೆ ಧನ್ಯವಾದಗಳು. ಶ್ರೀ ದುರ್ಗಾದೇವಿ ಮಹಾಕಾಳೀ ಅಮ್ಮನವರ ದೇವಸ್ಥಾನ ಕೊಂಕಣಿ ಖಾರ್ವಿ ಸಮಾಜ ಕೋಡಿಬೆಂಗ್ರೆ ಇದರ ಅಧ್ಯಕ್ಷರು ಪಟೇಲರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳು.

ಮಂಗಳೂರು ಬೆಂಗ್ರೆ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ವಿಶೇಷವಾಗಿ ಧನ್ಯವಾದಗಳು ಸಲ್ಲಿಸುತ್ತೇವೆ. ಮಲ್ಪೆ ಪಡುಕರೆ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತಾ.. ವಿಶೇಷವಾಗಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವಿದ್ಯಾರಂಗ ಮಿತ್ರಮಂಡಳಿ (ರಿ.) ಕುಂದಾಪುರ , ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗಂಗೊಳ್ಳಿ ಮತ್ತು ವಿದ್ಯಾವೇದಿಕೆ ಬೆಂಗಳೂರು ಇದರ ಅಧ್ಯಕ್ಷರು/ಪದಾಧಿಕಾರಿಗಳಿಗೂ ಹಾಗೂ ಸ್ವಯಂಸೇವಕರಾಗಿ ಕೈಜೋಡಿಸಿದ ಸಮಾಜದ ನಮ್ಮ ಪ್ರೀತಿಯ ಸಹೋದರರಿಗೆ ಸೋದರಿಯರಿಗೆ ವಿಶೇಷವಾದ ಧನ್ಯವಾದಗಳು. ಕಾರ್ಯಕ್ರಮದಲ್ಲಿ ಭಾಗಿಯಾದ ಸಮಾಜದ ಮಹನೀಯರು, ಮಾತಾಭಗಿನಿಯರು ಮತ್ತು ತರುಣ-ತರುಣಿಯರಿಗೆ ಧನ್ಯವಾದವನ್ನು ಸಲ್ಲಿಸುತ್ತಾ. ಮುಂದೆಯೂ ಕೂಡ ಈ ಕಾರ್ಯಕ್ರಮವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಮಾಡೋಣ ಎನ್ನುವ ಅಭಿಲಾಷೆಯಿಂದ ಈ ಕೃತಜ್ಞತಾ ಪತ್ರವನ್ನು ನಿಮಗೆ ಬಹಳ ಪ್ರೀತಿಯಿಂದ ಸಮರ್ಪಿಸುತ್ತಿದ್ದೇವೆ.

ಭವದೀಯ..,

ಇತೀ ತಮ್ಮ ವಿಶ್ವಾಸಿ

ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ

ಹಾಗೂ ಪದಾಧಿಕಾರಿಗಳು

ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಕೃತಜ್ಞತಾ ಪತ್ರ

Leave a Reply

Your email address will not be published. Required fields are marked *