ಮುಖವಾಡಗಳ ಮರೆಯಲ್ಲಿ ಸಮಾಜದ್ರೋಹಿ ಚಿಂತನೆಗಳು

ನಾಯಕ ರೂಪುಗೊಳ್ಳುವುದು ಜನರ ಬೆಂಬಲದಿಂದ ಸಮಾಜದ ಕೃಪಾಕಟಾಕ್ಷದಿಂದ ಹೀಗೆ ರೂಪುಗೊಂಡ ನಾಯಕರು ಕೊನೆ ತನಕವೂ ತನ್ನನ್ನು ಬೆಳೆಸಿ ಹರಸಿದ ಸಮಾಜದ ಜನರ ಋಣದಲ್ಲಿರುತ್ತಾನೆ ಅವನಿಂದ ಸಮಾಜ ಉಪಕೃತಗೊಂಡಲ್ಲಿ ಕೊನೆ ತನಕವೂ ಸಮಾಜ ಅವನನ್ನು ಹೃದಯಪೂರ್ವಕವಾಗಿ ಗೌರವಿಸುತ್ತದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆ ನಾಯಕ ಸಮಾಜದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಆತ ಸಮಾಜದ ಕಣ್ಣಲ್ಲಿ ಖಳನಾಯಕನಾಗಬೇಕಾಗುತ್ತದೆ ಬೆಳೆಸಿ ಹಾರೈಸಿದ ಜನ ಸಮುದಾಯಗಳ ಪಾಲಿಗೆ ಮೀರ್ ಸಾಧಿಕ್ ನಾಗಿ ಗುರುತಿಸಲ್ಪಡುತ್ತಾನೆ ವೇದಿಕೆಯ ಮೇಲೆ ಸಮಾಜದ ಆಚಾರ ವಿಚಾರ ಅಭಿವೃದ್ಧಿ ಇತ್ಯಾದಿ, ಇತ್ಯಾದಿ ವಿಷಯಗಳ ಬಗ್ಗೆ ಪುಖಾಂನುಪುಂಖ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸುವ ನಕಲಿ ನಾಯಕರು ಹೊನ್ನಾವರ ಕಾಸರಗೋಡು ವಾಣಿಜ್ಯ ಬಂದರು ನಿರ್ಮಾಣ ಸಂಬಂಧ ನಡೆದ ಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರ ಮಾಹಿತಿಗಳನ್ನು ಸಂಬಂಧಪಟ್ಟವರಿಗೆ ನೀಡುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ.

ಸಮಾಜದ ಎದುರು ಆತನ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿದ್ದು ಸಮಾಜ ದ್ರೋಹಿಯ ಮುಖಕ್ಕೆ ಜನ ಛಿ ಥೂ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಸಮಾಜ ತಾಯಿಯಂತೆ ತಾಯಿಗೆ ದ್ರೋಹ ಬಗೆದವರು ಎಂದಿಗೂ ಬರ್ಕತ್ ಆಗಿಲ್ಲ ಹೇಳ ಹೆಸರಿಲ್ಲದೆ ನಿರ್ನಾಮವಾಗಿದ್ದಾರೆ ಎಂಬ ಸತ್ಯವನ್ನು ಆ ನಾಯಕ ಮನಗಾಣಬೇಕಾಗಿದೆ ಬಂದರು ನಿರ್ಮಾಣ ಯೋಜನೆಯ ಪೃಭತಿಗಳಿಂದ ಆತನಿಗೆ ಮೃಷ್ಟಾನ್ನ ಭೋಜನ ಪ್ರಾಪ್ತಿಯಾಗಿರುವುದರಿಂದ ಆ ನಾಯಕನ ಸಮಾಜ ದ್ರೋಹಿ ಚಿಂತನೆಗಳಿಗೆ ಬಲ ಬಂದಿದೆ ಎಂದು ಜನ ಅಭಿಪ್ರಾಯ ಪಡುತ್ತಾರೆ ಆತ ಸಮಾಜ ಸೇವೆ ಮಾಡದಿದ್ದರೂ ಪರವಾಗಿಲ್ಲ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡದಿರಲಿ ಎಂದು ಹಾರೈಸುತ್ತಿದ್ದಾರೆ ಅದರ ಜೊತೆಗೆ ದೇವರು ಆತನಿಗೆ ಒಳ್ಳೆಯ ಬುದ್ದಿ ಕರುಣಿಸಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.

www.kharvionline.com

5 thoughts on “ಮುಖವಾಡಗಳ ಮರೆಯಲ್ಲಿ ಸಮಾಜದ್ರೋಹಿ ಚಿಂತನೆಗಳು

  1. “ಹೊನ್ನಾವರ ಕಾಸರಗೋಡು ವಾಣಿಜ್ಯ ಬಂದರು ನಿರ್ಮಾಣ ಸಂಬಂಧ ನಡೆದ ಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರ ಮಾಹಿತಿಗಳನ್ನು ಸಂಬಂಧಪಟ್ಟವರಿಗೆ ನೀಡುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ.” –
    ಇದು ತುಂಬ ಬೇಸರದ ವಿಷಯ … ಇಂತವರು ಒಂದು ನೆನಪು ಇಡಬೇಕು … ನಾವು ಇಹ ಲೋಕ ಯಾತ್ರೆ ಮುಗಿಸಿ ಹೋಗುವಾಗ ನಮ್ಮಗೆ ಹೆಗಲು ನೀಡುವುದು ಇದೆ ಸಮಾಜದ ನಾಲ್ಕು ಬಂಧುಗಳು … ಕಣ್ಣೀರಿಟ್ಟು ನೆನ್ನಪು ಮಾಡಿಕೊಳ್ಳುವುದು ಇದೆ ಸಮಾಜದ ಬಾಂಧವರು … ಯಾವದೇ ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕರಲ್ಲ ಎಂದು

  2. ಸಮಾಜ ದ್ರೋಹಿಗಳಿಗೆ ಕಪಾಳಮೋಕ್ಷ ಮಾಡಿದಂತಿದೆ ಈ ಲೇಖನ. ಮುಖವಾಡ ಧರಿಸಿ ಜಾಸ್ತಿ ದಿನ ನಾಟಕ ಮಾಡಲು ಆಗುವುದಿಲ್ಲ.

  3. ಸಮಾಜ ಘಾತುಕ ಹಿತ ಶತ್ರುಗಳು ನಮ್ಮ ಸಮಾಜದಲ್ಲಿ ಇದ್ದಾರೆ ಎಂದು ತಿಳಿದು ತುಂಬಾ ನೋವಾಯಿತು. ಸಮಾಜದ ಹಿತ ಶತ್ರು ಯಾರೆಂದು ನನಗೆ ತಿಳಿದು ಬಂದಿಲ್ಲ. ಆ ವ್ಯಕ್ತಿ ಯಾರೇ ಆಗಿರಲಿ , ಹೃದಯ ಶ್ರೀಮಂತಿಕೆ ಇರುವ ನಮ್ಮ ಖಾರ್ವಿ ಸಮಾಜ ನಿಮ್ಮ ಅಪರಾಧವನ್ನು ಕ್ಷಮಿಸಿ, ಮುಂದಿನ ದಿನಗಳಲ್ಲಿಯಾದರೂ ತಾಯಿಯಷ್ಟೇ ಪವಿತ್ರ ಸಂಬಂಧ ಇರುವ ಮತ್ತು ಪ್ರೀತಿ ತೋರಿಸಿದ ಖಾರ್ವಿ ಸಮಾಜಕ್ಕೆ ತೊಂದರೆಯಾಗದ ರೀತಿಯಲ್ಲಿ ಮುಂದುವರಿಯುವ ಜವಾಬ್ದಾರಿಯುತ ಕರ್ತವ್ಯ ನಿಮ್ಮದಾಗಿದೆ.

  4. ಇತ್ತೀಚಿಗೆ ನಮ್ಮ ಸಮಾಜದಲ್ಲಿ ಸಮಾಜಿಕ ವಿದ್ರೋಹಗಳು ಜಾಸ್ತಿ ಆಗುತ್ತಿದೆ. ಒಂದೋ ತಮ್ಮ ನೀಚ ಸ್ವಾರ್ಥಕ್ಕಾಗಿ, ಒಂದೋ ಯಾರನ್ನೋ ಓಲೈಸಲಿಕ್ಕಾಗಿ, ಇಲ್ಲಾ ಒಣ ಪ್ರತಿಷ್ಠೆಗಾಗಿ.
    ಅಂತವರು ಒಂದು ನೆನಪಿಟ್ಟುಕ್ಕೊಳ್ಳ ಬೇಕು, ತಮ್ಮ ಇಂತಾ ಮುಖವಾಡದ ಬದುಕು ಒಂದಲ್ಲಾ ಒಂದು ದಿನ ಜಗಜ್ಜಾಹೀರಾಗುತ್ತದೆ. ಆ ಸಮಯದಲ್ಲಿ ತಾವು ಹೇಗೆ ನಮ್ಮ ಸಮಾಜಕ್ಕೆ ಮುಖ ತೋರಿಸುವುದು ಎಂದು.. ಇನ್ನಾದರು ಜನ ನಿಮಗೆ ಉಗಿಯುವುದಕ್ಕಿಂತ ಮುಂಚೆ ಎಚ್ಚತ್ತುಕ್ಕೊಳ್ಳಿ.

  5. ಇತ್ತೀಚಿಗೆ ನಮ್ಮ ಸಮಾಜದಲ್ಲಿ ಸಮಾಜಿಕ ವಿದ್ರೋಹಗಳು ಜಾಸ್ತಿ ಆಗುತ್ತಿದೆ . ಒಂದೋ ತಮ್ಮ ನೀಚ ಸ್ವಾರ್ಥಕ್ಕಾಗಿ, ಒಂದೋ ಯಾರನ್ನೋ ಓಲೈಸಲಿಕ್ಕಾಗಿ, ಇಲ್ಲಾ ಒಣ ಪ್ರತಿಷ್ಠೆಗಾಗಿ.
    ಅಂತವರು ಒಂದು ನೆನಪಿಟ್ಟುಕ್ಕೊಳ್ಳ ಬೇಕು, ತಮ್ಮ ಇಂತಾ ಮುಖವಾಡದ ಬದುಕು ಒಂದಲ್ಲಾ ಒಂದು ದಿನ ಜಗಜ್ಜಾಹೀರಾಗುತ್ತದೆ. ಆ ಸಮಯದಲ್ಲಿ ತಾವು ಹೇಗೆ ನಮ್ಮ ಸಮಾಜಕ್ಕೆ ಮುಖ ತೋರಿಸುವುದು ಎಂದು.. ಇನ್ನಾದರು ನಮ್ಮ ಜನ ನಿಮಗೆ ಉಗಿಯುವುದಕ್ಕಿಂತ ಮುಂಚೆ ಎಚ್ಚತ್ತುಕ್ಕೊಳ್ಳಿ.

Leave a Reply to Ram Prasanna Cancel reply

Your email address will not be published. Required fields are marked *