ನಮ್ಮೊಂದಿಗೆ ಅಮ್ಮಇದ್ದಾಳೆ

ಕುಂದಾವರ್ಮ ರಾಜರು ಆಳಿದ ಸುಪ್ರಸಿದ್ದ ತಾಣ ನಮ್ಮ ಈ ಕುಂದಾಪುರ ಸೌಪರ್ಣಿಕಾ, ವಾರಾಹಿ, ಕುಬ್ಜೆ, ಕೆದಕೆ, ಚಕ್ರೆ ಈ ಐದು ಪವಿತ್ರ ನದಿಗಳು ಹರಿಯುವ ಪುಣ್ಯ ಪಂಚಗಂಗಾವಳಿ ನದಿಯು ಉಗಮವಾಗುವ ಸುಂದರ ತಾಣವು ಹೌದು ಈ ನಮ್ಮ ಕುಂದಾಪುರ.

ಪರಶುರಾಮರು ಸ್ರಷ್ಡಿಸಿದ ಕರಾವಳಿ ತೀರದ ಒಂದು ಭಾಗವಾಗಿರುವ ಈ ನಮ್ಮೂರು ಹಲವಾರು ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳ ತವರುರು. ಇಂತಹ ಸುಂದರ ತಾಣ ಕುಂದಾಪುರ ದ ಮಧ್ಯಭಾಗದಲ್ಲಿ ಹರಿಯುವ ಪಂಚಗಂಗಾವಳಿ ನದಿಯ ತಟದಲ್ಲಿ ನೆಲೆಸಿದ್ದಾಳೆ ಭಕ್ತ ವತ್ಸಲೆ ಶ್ರೀ ಮಹಾಕಾಳಿ ಅಮ್ಮನವರು.

ಮೀನುಗಾರಿಕೆ ಉದ್ಯೋಗ ಮಾಡಿಕೊಂಡು ಜೀವನ ಕಂಡುಕೊಂಡ ಕಡಲಾ ಮಕ್ಕಳಾದ ಕೊಂಕಣಿ ಖಾರ್ವಿ ಸಮಾಜದ ಭಕ್ತರು ಗಂಗೋಳ್ಳಿ ಯ ಶ್ರೀ ನಗರ ಮಹಾಂಕಾಳಿ ದೇವಸ್ಥಾನ ದಿಂದ ತೆಂಗಿನ ಫಲ ರೂಪವಾಗಿ ಅಮ್ಮನವರನ್ನು ಇಲ್ಲಿಗೆ ಕರೆಸಿ ಪ್ರತಿಷ್ಠಾಪಿಸಿದರು ಎಂಬ ಉಲ್ಲೆಖ ಇದೆ.

ಅಂತಯೇ, ನಂತರದ ದಿನಗಳಲ್ಲಿ ಅಂದರೆ ಸುಮಾರು 80 ರ ದಶಕದಲ್ಲಿ ದಕ್ಷಿಣಾನ್ಮಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಶ್ರೀ ಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಅಮ್ರತ ಹಸ್ತಗಳಿಂದ ಶೀಲಾನ್ಯಾಸಗೊಂಡ ಶ್ರೀ ಮಹಾಕಾಳಿ ದೇವಸ್ಥಾನ ವು ಇಂದು ಭಕ್ತಿಯ ಧಾರ್ಮಿಕ ಕೇಂದ್ರವಾಗಿ ಊರ ಪರಊರ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ಕುಂದಾಪುರದ ಹ್ರದಯ ಭಾಗವಾದ ಶಾಸ್ತ್ರೀ ವ್ರತ್ತದಿಂದ ಒಳಪ್ರವೇಶಿಸಿ, ಪಾರಿಜಾತ, ಸರಕಾರಿ ಪದವಿ ಪೂರ್ವ ಕಾಲೇಜು, ಮಂಜುನಾಥ ಆಸ್ಪತ್ರೆ ಯ ಮಾರ್ಗವಾಗಿ ಹೊಸ ಬಸ್ ನಿಲ್ದಾಣದಿಂದ ಖಾರ್ವಿಕೇರಿಗೆ 0.4 km ಕ್ರಮಿಸಿದರೆ ಶ್ರೀ ಮಹಾಕಾಳಿ ದೇವಸ್ಥಾನ ಕಾಣಸಿಗುತ್ತದೆ.

ಇಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಬ್ರಹ್ಮ ಕಲಶ ನಡೆಯುವುದು ಪ್ರತೀತಿ ಅಂತೆಯೇ 1988 ರಲ್ಲಿ ಶ್ರೀ ಶ್ರೀ ಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರಿಂದ ಶೀಲಾನ್ಯಾಸಗೊಂಡು ಬ್ರಹ್ಮಕಲಶ ನೆರವೇರಿತು, ನಂತರ 2002 ರಲ್ಲಿ ಇವರ ಶಿಷ್ಯರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು ವೈಭವದ ಅಡ್ಡಪಲ್ಕಕ್ಕಿ ಉತ್ಸವದ ಮೂಲಕ ಸನ್ನಿಧಾನಕ್ಕೆ ಆಗಮಿಸಿ ತಮ್ಮ ಅಮ್ರತ ಹಸ್ತಗಳಿಂದ ಶಾಂತ ಸ್ವರೂಪಿಣಿ ಯಾ ನೂತನ ಮೂರ್ತಿ ಪ್ರತಿಷ್ಟಾಪಿಸಿ ಬ್ರಹ್ಮ ಕಲಶ ನೆರವೇರಿಸಿದರು.

ನಂತರ 2016 ರಲ್ಲಿ ಇವರ ಶಿಷ್ಯರುಗಳಾದ ಶ್ರೀ ವಿಧುಶೇಕರ ಭಾರತೀ ಮಹಾಸ್ವಾಮಿಗಳವರ ಅಮ್ರತ ಹಸ್ತಗಳಿಂದ ಬ್ರಹ್ಮ ಕುಂಭಾಭಿಷೇಕ ನೆರವೇರಿತು. ಶೃಂಗೇರಿ ಶ್ರೀ ಶಾರದಾ ಪೀಠದ ಗುರು ಪರಂಪರೆಯ ಈ ಮೂವರು ಗುರುಗಳಿಂದಲೂ ಈ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದು ಅತೀ ವಿಶೇಷವಾಗಿದೆ ಮತ್ತು ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಶಕ್ತಿಕೇಂದ್ರವಾಗಿರುದರ ಸಾಕ್ಷಿಯಾಗಿದೆ.

ವರುಷದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರವೇರುವ ಈ ಸನ್ನಿಧಾನದಲ್ಲಿ ದಿನಂಪ್ರತಿ ಅಮ್ಮನವರ ಅಲಂಕಾರಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ, ಅಂತೇಯೇ ಅಮ್ಮನವರು ಅಲಂಕಾರ ಪ್ರಿಯಾಳು ಹೌದು. ದ್ರಷ್ಟಿ ದೋಷ, ಕೆಟ್ಟ ದೋಷಗಳಿಂದ ಮುಕ್ತಿ ಪಡೆಯಲು ದ್ರಷ್ಟಿ ಕಾಯಿ ಸೇವೆ ವಿಶೇಷವಾಗಿದೆ. ಅಮ್ಮನವರ ಎದುರಿನಲ್ಲಿ ಕುಳಿಸಿ ತೆಂಗಿನ ಫಲ ಸುತ್ತರಿಸಿ ಸನ್ನಿಧಾನದ ಗಡಿಯಲ್ಲಿ ಒಡೆಯಲಾಗುತ್ತದೆ, ಇದರಿಂದ ಕೆಟ್ಟ ದೋಷಗಳು ನಿವಾರಣೆಯಾಗುದುಂಟು. ಹಾಗೂ ತುಪ್ಪದ ದೀಪಾ ಸೇವೆಯಿಂದ ಬದುಕಿನಲ್ಲಿ ಯಶಸ್ಸು ಲಭಿಸುತ್ತದ್ದೆ ಎಂಬ ನಂಬಿಕೆ ಇದೆ ತುಪ್ಪದ ದೀಪವನ್ನು ಭಕ್ತರೆ ಅಮ್ಮನವರ ಮುಂದೆ ಬೆಳಗಿಸುತ್ತಾರೆ.

ದುಷ್ಟ ಶಕ್ತಿಯ ನಿಗ್ರಹ ಹಾಗೂ ಶಿಷ್ಟರ ಪಾಲನೆಗಾಗಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಒಂಬತ್ತು ಅವತಾರದ ಬಣ್ಣದಿಂದ ಅಮ್ಮನವರು ಅಲಂಕೃತ ಗೊಳ್ಳುತ್ತಾರೆ, ವಿಜಯ ದಶಮಿ ಹಾಗೂ ಪ್ರತಿಷ್ಟ ವರ್ಧಂತಿ ದಿನದಲ್ಲಿ ವೈಭವದ ಪಲ್ಲಕ್ಕಿ ಉತ್ಸವ ಜರಗುತ್ತದೆ, ಮಾತ್ರವಲ್ಲದೆ ಇತರ ದಿನಗಳಲ್ಲೂ ಹರಕೆ ರೂಪದಲ್ಲೂ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಅಲಂಕಾರ ಭೂಷಿತಳಾಗಿ ಕಂಗೊಳಿಸುವ ಅಮ್ಮನವರು ಇಷ್ಟಾರ್ಥ ಗಳನ್ನು ಸಿದ್ದಿಸುವ ಸಿದ್ದಿಧಾತೆ ಎಂದು ಹೃದಯ ತುಂಬಿದ ಭಕ್ತಿಯಿಂದ ಸನ್ನಿಧಾನದ ಮಹಿಮೆಯನ್ನು ಹೇಳುತ್ತಾರೆ ಇಲ್ಲಿ ಆಗಮಿಸುವ ಊರ ಪರ ಊರ ಭಕ್ತರು. ವರ್ಷಂಪ್ರತಿ ನಡೆಯುವ ಮಾರಿಜಾತ್ರೆ, ಪ್ರತಿಷ್ಠ ಮಹೋತ್ಸವ, ಗಣೇಶ ಚತುರ್ಥಿ ನವರಾತ್ರಿ ಯ ದಿನಗಳಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯುದಲ್ಲದೆ, ಹರಕೆಯ ರೂಪದಲ್ಲೂ ಪಲ್ಲಕ್ಕಿ ಉತ್ಸವ ಅನ್ನಸಂತರ್ಪಣೆಗಳು ನಡೆಯುವುದು ಅತೀ ವಿಶೇಷವಾಗಿದೆ.

ಗಾಳಿ ಮಳೆಯ ಏರಿಳಿತದಲ್ಲೂ ನದಿ ಕಡಲ ಮದ್ಯದಲ್ಲಿ ದುಡಿಯಲು ತೆರಳುವಾಗ ಅಮ್ಮನವರನ್ನು ನಮಸ್ಕರಿಸಿ ತೆರಳುತ್ತಾರೆ, ಇಲ್ಲಿ ನಂಬಿಕೊಂಡು ಬಂದ ಅದೇಷ್ಟೋ ಭಕ್ತರು ಹತ್ತು ಹಲವು ಸಮಸ್ಯೆಗಳಿಂದ ಒಳಿತನ್ನು ಕಂಡುಕೊಂಡು ಭಕ್ತಿಯಿಂದ ನಮ್ಮೊಂದಿಗೆ ಅಮ್ಮಇದ್ದಾಳೆ ಎಂದು ನಮಸ್ಕರಿಸುತ್ತಾರೆ.

ಬರಹ: ಎಸ್. ಸುನೀಲ್ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *