ಬಣ್ಣದ ಕನಸು ಹೊತ್ತು ಬಣ್ಣದ ಸಿನಿಮಾ ಲೋಕಕ್ಕೆ ಹೊರಟ ಸುರೇಂದ್ರ ಕುಮಾರ್ ಗಂಗೊಳ್ಳಿ

ಬಣ್ಣದ ಕನಸು ಹೊತ್ತು ಬಣ್ಣದ ಸಿನಿಮಾ ಲೋಕಕ್ಕೆ ಹೊರಟ ಪ್ರತಿಭಾವಂತ ಕಲಾವಿದ ಸುರೇಂದ್ರ ಕುಮಾರ್ ಗಂಗೊಳ್ಳಿ

ಶಾಲಾ ದಿನಗಳಿಂದಲೂ ಬರವಣಿಗೆ, ಸಿನಿಮಾ, ನಾಟಕ ಹೀಗೆ ವಿಭಿನ್ನ ಹವ್ಯಾಸಗಳ ಹಿಂದೆ ಬಿದ್ದವರು ಸುರೇಂದ್ರ ಕುಮಾರ್ ಸಿನಿಮಾ ಕ್ರೇಜ್ ಇವರನ್ನು ಬೆಂಗಳೂರುಗೆ ಹೋಗುವಂತೆ ಮಾಡಿತು ಅಮಲುಗಣ್ಣಿನ ಆಜಾನುಬಾಹು ಸುರೇಂದ್ರ ಕುಮಾರ್ ನಿರ್ದೇಶಕ ಫಣಿ ರಾಮಚಂದ್ರ ರನ್ನು ಆಕರ್ಷಿದರು ಚಿಕ್ಕ ಪುಟ್ಟ ಪಾತ್ರಗಳನ್ನ ಮಾಡುತ್ತಲೇ ನಿರ್ದೇಶನ ಕಡೆ ವಾಲಿದ ಸುರೇಂದ್ರ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಟೀಂ ನಲ್ಲಿ ಸ್ಥಾನ ಗಿಟ್ಟಿಸಿಕೊಂಡು “ರಾಧಾ” ಸೀರಿಯಲ್ ನಲ್ಲಿ ಸಹ ನಿರ್ದೇಶಕರಾಗಿ ವರ್ಕ್ ಮಾಡುತ್ತಾರೆ. ನಂತರ ಸಿಗಂಧೂರು Chowdeshawari ಕಿರು ಚಿತ್ರ ನಿರ್ದೇಶನ, ಕೆಲವೊಂದು ಹಾಸ್ಯಸೀರಿಯಲ್ ನಲ್ಲಿ ನಟನೆ, ತೆಲುಗು ಸಿನಿಮಾದಲ್ಲಿ ಪೋಲಿಸ್ ಆಫೀಸರ್, ಕೆಲವು ಸಿನಿಮಾ ಗಳಲ್ಲಿ ಚಿಕ್ಕ ಪಾತ್ರದಲ್ಲಿ ಗುರುತಿಸಿಕೊಂಡ ಇವರಿಗೆ ಒಂದು ಐಡೆಂಟಿಟಿ ಸಿಗುವ ಪಾತ್ರಕ್ಕಾಗಿ ಹಂಬಲಿಸುತ್ತಿದ್ದಾರೆ.

ನೋಡಲು ಭೂಗತ ಜಗತ್ತಿನ ದೊರೆ ಕೊತ್ವಾಲ್ ತರಹ ಇರುವ ಇವರ Curly Hair ಸ್ಟೈಲ್ ಹಾಗು ಆಕರ್ಷಕ ಕಣ್ಣುಗಳು Negative Role ಗೆ ಹೇಳಿ ಮಾಡಿಸಿದಂತಿದೆ ಒಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವ ಸುರೇಂದ್ರ ಈಗಾಗಲೇ ಹಲವಾರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅಮಲುಗಣ್ಣಿನ Handsome ನಟ ಸುರೇಂದ್ರ ಕುಮಾರ್ ಇವರನ್ನು ಒಮ್ಮೆ ನಿರ್ದೇಶಕ ಫಣಿ ರಾಮಚಂದ್ರ ರವರು ಒಂದು ಶಾಟ್ ನಲ್ಲಿ ಇವರ ಪೆರಫಾರ್ಮನ್ಸ್ ನೋಡಿ ನನಗೆ ಅಂಬರೀಷ್ ನೆನಪಾದರು ಎಂದಿದ್ದರು. ಇದು ಸುರೇಂದ್ರ ಪ್ರತಿಭೆಗೆ ಸಿಕ್ಕ ಒಂದು ಸರ್ಟಿಫಿಕೇಟ್.

ಶಾಲಾ ದಿನಗಳಿಂದಲೂ ಸಿನಿಮಾ ನಾಟಕದ ಗೀಳು ಜೊತೆಗೆ ಸಿನಿಮಾ ಲೇಖನ ಬರೆಯುವ ಹವ್ಯಾಸ ಹೀಗೆ ತಾನು ಕೂಡ ಒಂದು ದಿನ ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಡ ಬೇಕು ಎನ್ನುವ ಚಿಕ್ಕ ಕನಸು ಹೆಮ್ಮರವಾಗಿ ಬೆಳೆದು ಆ ಒಂದು ದಿನ ಬೆಂಗಳೂರ್ ಬಸ್ ಹತ್ತಿದ ಸುರೇಂದ್ರ ತನ್ನ ಕನಸು ನನಸು ಮಾಡಿಕೊಳ್ಳಲು ಹೋರಾಟ ನಡೆಸಿದ್ದು ಅದು ಈಗ ಫಲ ನೀಡುವಂತಿದೆ ಕೆಲವು ಅವಕಾಶ ದೊರೆತರೂ ಇವರ ಪ್ರತಿಭೆಗೆ ಒಂದು ಬ್ರೇಕ್ ಸಿಗುವ ಚಾಲೆಂಜಿಂಗ್ ರೋಲ್ ಸಿಗುವ ಬೇಕಿದೆ.

ವಿಷ್ಣುವರ್ಧನ್, ಸಾಯಿ ಕುಮಾರ್, ರವಿಚಂದ್ರನ್, ಶಿವಣ್ಣ, ಸಂಚಾರಿ ವಿಜಯ,ಒರಟ ಪ್ರಶಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿ ಕೊಂಡಿದ್ದು ಇವರ ಹೆಮ್ಮೆ ಹಲವು ಟಿವಿ ಸೀರಿಯಲ್ ನಲ್ಲಿ ಅಭಿನಯ, ನಿರ್ದೇಶನ ಹೀಗೆ ಪುಟ್ಟ ಊರಿನ ಕಲಾವಿದ ಸಾಧನೆಯ ಹೆಜ್ಜೆಯ ಸದ್ದು ಮಾಡುತಿರುದು ಹೆಮ್ಮೆಯ ಸಂಗತಿ.

All the Best Surendra Kumar

ರವಿ ಕುಮಾರ್ ಗಂಗೊಳ್ಳಿ

2 thoughts on “ಬಣ್ಣದ ಕನಸು ಹೊತ್ತು ಬಣ್ಣದ ಸಿನಿಮಾ ಲೋಕಕ್ಕೆ ಹೊರಟ ಸುರೇಂದ್ರ ಕುಮಾರ್ ಗಂಗೊಳ್ಳಿ

  1. Surendra Sir… really happy to see that our people have spread their wings across multiple industries.
    Your foothold in the Industry is even more appreciable because it is an industry where one cannot survive without Godfather … but still, you have been part of it for such a long time.

    Wishing you good luck in all your future endeavors Sir.

Leave a Reply to Ram Prasanna Cancel reply

Your email address will not be published. Required fields are marked *