ಶ್ರೇಷ್ಠ ಸಾಧನೆಯ ವಿದ್ಯಾಕ್ಷೇತ್ರ, ಅಗಣಿತ ಪ್ರಶಸ್ತಿ ಪುರಸ್ಕೃತ ಕ್ರೀಡಾಕ್ಷೇತ್ರ, ಅನುಪಮ ಸಾಧನೆಯ ಸಾಂಸ್ಕೃತಿಕ ಕ್ಷೇತ್ರ, ರಸಧಾರೆ ಸೃಷ್ಟಿಸುವ ಕಾವ್ಯಸಾಹಿತ್ಯ ಲೋಕ, ಕೀರ್ತಿ ಕಲಶದ ಸಿನಿಮಾ ಕ್ಷೇತ್ರ ಹೀಗೆ ಈ ಅಪೂರ್ವ ಸಾಧನೆಗೈದ ಕನಸುಕಂಗಳ ಹುಡುಗನ ಯಶೋಗಾಥೆ ನೀಲಿಮೆಯಹರವಿನಂತೆ ಅನಂತ ಅನನ್ಯ. ಈ ಕನಸುಕಂಗಳ ಹುಡುಗನೇ ಶರತ್ ಖಾರ್ವಿ ದಾಕುಹಿತ್ಲು ಗಂಗೊಳ್ಳಿ.
ತಂದೆ ಭಾಸ್ಕರ ಖಾರ್ವಿ, ತಾಯಿ ಸುಶೀಲಾ ಕಠಿಣ ಪರಿಶ್ರಮದ ಮೀನುಗಾರರ ಕುಟುಂಬ ಬಾಲ್ಯ ದಿಂದಲೇ ಪಾದರಸದಂತೆ ಚಟುವಟಿಕೆಗಳ ವ್ಯಕ್ತಿತ್ವದ ಶರತ್ ಖಾರ್ವಿಗೆ ಶಾಲಾ ಕಾಲೇಜು ದಿನಗಳಲ್ಲಿ ಸಂದ ಪ್ರಶಸ್ತಿ ಪುರಸ್ಕಾರಗಳ ಸಂಖ್ಯೆ ನೂರಾರು. ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನ್ ಮೆಂಟ್ ನಲ್ಲಿ ಬೆಳ್ಳಿ ಪದಕ ಎರಡು ಬಾರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉಡುಪಿ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಹೆಮ್ಮೆಯ ಕ್ರೀಡಾಪಟು. ಮೈಸೂರು ವಿಭಾಗದಲ್ಲಿ ದಸರಾ ಪಂದ್ಯಾವಳಿಯಲ್ಲಿ ಪ್ರತಿನಿಧಿಯಾಗಿ ಪಾಲ್ಗೊಂಡ ಅನುಭವ ಇದಲ್ಲದೇ ಅನೇಕ ಮುಕ್ತ ಟೂರ್ನಿಗಳಲ್ಲಿ ಪ್ರಶಸ್ತಿ ಪುರಸ್ಕೃತ ಶಾಲಾ ಕಾಲೇಜು ತಾಲೂಕು ಮಟ್ಟದ ಮತ್ತು ಮುಕ್ತ ಕ್ವಿಜ್ ಸ್ಪರ್ಧೆ ಗಳಲ್ಲಿ ಸತತ ಏಳು ವರ್ಷಗಳ ಕಾಲ ಸ್ಪರ್ಧಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳ ಸರಮಾಲೆ.
ಶೈಕ್ಷಣಿಕ ಕ್ಷೇತ್ರದ ಸಾಧನೆ ಬಗ್ಗೆ ಹೇಳುವುದಾದರೆ ಕಾಮರ್ಸ್ ವಿಭಾಗದಲ್ಲಿ ಡಿಸ್ಟಿಂಕ್ಶನ್ ಜೊತೆಗೆ ಟಾಪರ್ ಹಾಗೂ ಕುಂದಾಪುರ ತಾಲೂಕಿನಲ್ಲಿ ಬಿಸಿನೆಸ್ ಮತ್ತು ಎಕ್ಂಟ್ಸ್ ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹೆಗ್ಗಳಿಕೆಗೆ ಶರತ್ ಖಾರ್ವಿ ಪಾತ್ರರಾಗಿದ್ದಾರೆ. ಇದು ನಮ್ಮ ಸಮಾಜದ ಹೆಮ್ಮೆಯ ಶರತ್ ಖಾರ್ವಿಯ ಅಭೂತಪೂರ್ವ ಸಾಧನೆ ಪ್ರಸ್ತುತ ಬೆಂಗಳೂರುನಲ್ಲಿ ಬ್ಯಾಂಕಿಂಗ್ ಅನಾಲಿಸ್ಟ್ ವೃತ್ತಿಯಲ್ಲಿರುವ ಶರತ್ ಖಾರ್ವಿ ಯವರ ಬಹುಮುಖ ಸಾಧನೆಯ ಚೈತ್ರ ಯಾತ್ರೆ ಬಣ್ಣದ ಸಿನಿಮಾ ಲೋಕದಲ್ಲೂ ರಂಗಪ್ರವೇಶ ಮಾಡಿತು. ಇವರ ಸಾಹಿತ್ಯ ಪ್ರಭೆಯಲ್ಲಿ ಕೆಲವು ಕಿರುಚಿತ್ರಗಳು ಮತ್ತು ವೀಡಿಯೋ ಸಾಂಗ್ ಗಳು ಅದ್ಬುತವಾಗಿ ಮೂಡಿ ಬಂದವು. ಶರತ್ ಖಾರ್ವಿ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಚಿಟ್ಟೆಯ ಹಾಗೆ ವೀಡಿಯೋ ಸಾಂಗ್, ಪ್ರೇಮಾಯಾಣ ಕುಂದಾಪುರ ಕನ್ನಡದ ಕಿರುಚಿತ್ರ ವೀಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಇದಕ್ಕೆಲ್ಲ ಕಲಶಪ್ರಾಯವೆಂಬಂತೆ ಇವರ ಮತ್ತೊಂದು ಕಿರುಚಿತ್ರ ಬ್ಲ್ಯಾಕ್ and ವೈಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಈ ಕಿರುಚಿತ್ರದಲ್ಲಿ ವೈಶಿಷ್ಟ್ಯತೆ ಗಳ ಬಗ್ಗೆ ಹೇಳುವುದಾದರೆ ಇಲ್ಲಿ ಪಡಿಮೂಡಿರುವ ದೃಶ್ಯ ಕಾವ್ಯ ಗಳಲ್ಲಿ ಕಲೆಯ ಅಂತಕರಣದ ಸ್ಥಾನದಲ್ಲಿ ಅಮೂರ್ತ ಭಾವಗಳಿಗೆ ಅನನ್ಯತೆಯ ಜೀವ ತುಂಬುವ ಕಲಾತ್ಮಕ ದೃಷ್ಟಿ ಕೋನ ವಿರಾಜಮಾನವಾಗಿದೆ. ಶರತ್ ಖಾರ್ವಿಯ ಕಿರುಚಿತ್ರ ಮತ್ತು ವೀಡಿಯೋ ಸಾಂಗ್ ದೃಶ್ಯ ಗಳಲ್ಲಿ ನವಿರು ನವಿರಾದ ಕ್ರಿಯಾತ್ಮಕ ಪ್ರೇರಣೆಗಳು ಅಭೂತಪೂರ್ವವಾಗಿ ಅನಾವರಣಗೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ತನ್ನ ಅದ್ಭುತವಾದ ಸಾಹಿತ್ಯ ದಿಂದ ಶರತ್ ಖಾರ್ವಿ ನಿರ್ದೇಶನದಲ್ಲಿ ತನ್ನದೇ ಆದ ಅಚ್ಚನ್ನು ಒತ್ತಿ , ಒಂದು ಆಕಾರವನ್ನು ಕೊಟ್ಟು, ಇಡೀ ಚಿತ್ರಕ್ಕೆ ತನ್ನದೇ ಆದ ಅನನ್ಯ ಸ್ವರೂಪ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಅಪಾರ ಸ್ಪರ್ಧೆಯ ಸಿನಿಮಾ ಉದ್ಯಮದ ನಡುಮಧ್ಯೆ ನಿರ್ದೇಶಕ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಳ್ಳಬೇಕು. ಈ ವಾತಾವರಣದಲ್ಲಿ ನಿರ್ದೇಶಕ ತನ್ನ ಕಾಲುಗಳನ್ನು ದೃಡವಾಗಿ ನೆಲದ ಮೇಲೆ ಇಟ್ಟಿದ್ದಾಗ ಮಾತ್ರ ತಲೆಯನ್ನು ಆಕಾಶದ ಮೋಡಗಳಲ್ಲಿ ಹುದುಗಿಸಿರಲು ಸಾಧ್ಯ. ಈ ಅಭೂತಪೂರ್ವ ಕಲೆ ಶರತ್ ಖಾರ್ವಿಗೆ ಸಿದ್ದಿಸಿದೆ. ತಾನು ಇಷ್ಟೆಲ್ಲಾ ಎತ್ತರಕ್ಕೆ ಬೆಳೆದರೂ ಸಮಾಜ ತನ್ನನ್ನು ಗುರುತಿಸಿಲ್ಲ ಎಂಬ ಕೊರಗು ಶರತ್ ಖಾರ್ವಿಯನ್ನು ಕಾಡಿರುವುದಂತೂ ಸುಳ್ಳಲ್ಲ. ಕೊಂಕಣಿ ಖಾರ್ವಿ ಸಮಾಜ ಹೆಮ್ಮೆ ಪಡುವಂತಹ ಅಪೂರ್ವ ಸಾಧನೆಯನ್ನು ಸಕಲಕಲಾವಲ್ಲಭ ಶರತ್ ಖಾರ್ವಿ ಮಾಡಿದ್ದಾನೆ.
ಇವರ ಸೃಜನಶೀಲ ಮನಸ್ಸಿಗೆ ಸಾಕ್ಷಿ ಯಾಗಿ ಮನಮುಗಿಲು ಎಂಬ ಸಣ್ಣ ಸಣ್ಣ ಕವಿತಾ ಸಂಕಲನ ಕೂಡಾ ಪ್ರಕಟಗೊಂಡಿದೆ. ಪಂಚಗಂಗಾವಳಿಯ ಪುಣ್ಯ ತಟದಲ್ಲಿ ಹುಟ್ಟಿದ ಅನನ್ಯ ಸಾಧನೆಯ ಅದ್ಬುತ ಪ್ರತಿಭೆ ಶರತ್ ಖಾರ್ವಿಯ ಕೀರ್ತಿ ಜಗತ್ತಿನಾದಂತ್ಯ ಹರಡಲಿ ಎಂದು ಖಾರ್ವಿ ಆನ್ಲೈನ್ ಸಂಭ್ರಮ ಸ್ವಾಗತಗಳ ಶುಭವನ್ನು ಹಾರೈಸುತ್ತದೆ. ಖಾರ್ವಿ ಸಮಾಜ ಶರತ್ ಖಾರ್ವಿ ಯವರ ಅಭೂತಪೂರ್ವ ಸಾಧನೆಯಿಂದ ಧನ್ಯವಾಗಿದೆ.
ಸುಧಾಕರ್ ಖಾರ್ವಿ
www.kharvionline.com
ನಂದನವನದಿ ತುಂಟ ಗೋಪಿ
ಬೆಣ್ಣೆ ತಿನ್ನುತ್ತ ಮುಖಕೆ ಮೆತ್ತಿ
ಹಾಲ್ಗೆನ್ನೆ ಸುಳಿಯ ಮಿಂಚು
ನಗಲು ನೀಲಶ್ಯಾಮನು…..
ಕೊಳಲನೆತ್ತಿ ಬೆರಳಿಗೊತ್ತಿ
ಮೌನಧ್ಯಾನದಿ ರಾಗ ಬಿತ್ತಿ
ರಾಧೆ ಎದೆಯಲಿ ಪ್ರೀತಿ ಹೊತ್ತಿ
ನಗಲು ನೀಲಶ್ಯಾಮನು…..
ನೀಲಿಗಗನದಂತೆ ಮುಖವೂ
ಮುದ್ದು ನಗುವಿನಲ್ಲಿ ಸುಖವೂ
ನವಿಲುಗರಿಯು ನಾಚಿತೊಮ್ಮೆ
ನಗಲು ನೀಲಶ್ಯಾಮನು…..
ಗೋಪಿಕೆಯರ ಹೃದಯ ಕದ್ದು
ಧರ್ಮಯುದ್ಧವನ್ನು ಗೆದ್ದು
ವದನ ತುಂಬಿ ಮಂದಹಾಸ
ನಗಲು ನೀಲಶ್ಯಾಮನು
ಶರತ್ ಖಾರ್ವಿ
ಶೈನಿಂಗ್ ಶರತ್ ಖಾರ್ವಿ. ಸರ್ವಾಂಗೀಣ ಸಾಧನೆಯ ಮೇರುಶಿಖರ.ಕೊಂಕಣಿ ಖಾರ್ವಿ ಸಮಾಜದ ಹೆಮ್ಮೆಯ ಪುತ್ರನಿಗೆ ಶುಭಹಾರೈಕೆಗಳು👌👌👌👍👍👍👍👍🙏🙏🙏🙏🙏👋👋👋👋👋👌👍👍👌👋👋👋👋👋🎉🎉🎉💐💐💐💐💐💐💐🎉🎉🎉
ಶುಭವಾಗಲಿ ಶರತ್ ಶ್ರೀ ತಾಯಿ ಮಹಾಕಾಳಿ ಅಮ್ಮನವರ ಆಶೀರ್ವಾದ ದಿಂದ ಇನ್ನೂ ಉತ್ತಮ ಸಾಧನೆ ಮಾಡುವಂತಗಲಿ .
Keep it up bro🤩🫶