ಖಾರ್ವಿ ಸಮಾಜ ಬಾಂಧವರಲ್ಲಿ ವಿನಮ್ರ ವಿಜ್ಞಾಪನೆ..

ಸುಮಾರು 400 ವರ್ಷಗಳಿಕ್ಕಿಂತಲೂ ಸುಧೀರ್ಘ ಇತಿಹಾಸವಿರುವ ನಮ್ಮ ಸಮಾಜ ಸ್ಥಾಪಿತ ಹಿತ ಶಕ್ತಿಗಳ ಸಂಚಿನಿಂದಾಗಿ ಸಾಗುತ್ತಿರುವ ದಾರಿ ಮನಸ್ಸಿಗೆ ಬೇಸರ ತರುವಂತಿದೆ.

ಖಾರ್ವಿ ಸಮಾಜದ ಆಸ್ಮಿತೆಯನ್ನು ಬುಡಮೇಲು ಮಾಡುವಂತಹ ಕೆಲವೊಂದು ಸಂಚು ನಡೆಯುತ್ತಿದ್ದು ಸಮಾಜದೊಳಗಿನ ಕೆಲವು ಸ್ಥಾಪಿತ ಹಿತ ಶಕ್ತಿಗಳು ಅಕ್ರಮ ಕೂಟ ಕಟ್ಟಿಕೊಂಡು, ಕೇವಲ ತಮ್ಮ ಪ್ರತಿಷ್ಠೆ ಮತ್ತು ವೈಯಕ್ತಿಕ ದ್ವೇಷ ಸಾಧನೆಗಾಗಿ ಕತ್ತಿ ಮಸೆಯುತ್ತಿದ್ದಾರೆ. ಈ ಪರಪೀಡಕರ ಗುರಿ ಸಮಾಜದ ಧಾರ್ಮಿಕ ,ವಿದ್ಯಾ ಮತ್ತು ಸಾಂಸ್ಕೃತಿಕ ಸಂಸ್ಥೆಗಳಾಗಿರುವುದು ವಿಷಾದನೀಯ ಸಂಗತಿ. ಯಾರದ್ದೋ ಹೆಗಲ ಮೇಲೆ ಬಂದೂಕಿನ ಗುರಿ ಇಟ್ಟುಕೊಂಡು ಸಮಾಜದ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಲೊರಟ ಇಂತಹ ಅತಿ ಬುದ್ಧಿವಂತ ಸ್ಥಾಪಿತ ಹಿತ ಶಕ್ತಿಗಳಿಗೆ ತಕ್ಕ ಪಾಠ ಕಲಿಸದಿದ್ದರೆ ನಮ್ಮ ಸಾಮಾಜಿಕ ವ್ಯವಸ್ಥೆ ಹದಗೆಡುವುದು ಶತಸಿದ್ದ. ನಮ್ಮ ಹಿರಿಯರ, ಚಿಂತಕರ, ಸಮಾಜ ಬಂಧುಗಳ ಅಪರಿಮಿತ ಶ್ರಮಗಳಿಂದ ಖಾರ್ವಿ ಸಮಾಜ ಅಭಿವೃದ್ಧಿಯ ಕಡೆಗೆ ಮುನ್ನುಗ್ಗುತ್ತಿರುವ ಈ ಸಾಂಧರ್ಭಿಕ ಸನ್ನಿವೇಶದಲ್ಲಿ ಕೆಲವೇ ಮಂದಿ ಸ್ಥಾಪಿತ ಹಿತ ಶಕ್ತಿಗಳು ಸದಾಕಾಲ ಒಂದಲ್ಲಾ ಒಂದು ಕಿರಿಕ್ ಮಾಡುತ್ತಾ ಸಮಾಜದ ಸ್ಯಾಸ್ಥ್ಯ ಹಾಳುಗೆಡುಹುತ್ತಿರುವುದು, ಖಾರ್ವಿ ಸಮಾಜದ ಹಿನ್ನೆಡೆಗೆ ಬಲು ದೊಡ್ಡ ಕಾರಣವಾಗಬಲ್ಲದು.

ನಮ್ಮೊಂದಿಗೆ ಸಾಂಪ್ರದಾಯಿಕ ಮೀನುಗಾರರಾಗಿ ಗುರುತಿಸಿಕೊಂಡಿರುವ ಇತರ ಮೀನುಗಾರ ಸಮಾಜಗಳು ಇಂದು ಆರ್ಥಿಕವಾಗಿಯೂ, ರಾಜಕೀಯವಾಗಿಯೂ, ಶೈಕ್ಷಣಿಕವಾಗಿಯೂ ಅತ್ಯಂತ ಸುದೃಡವಾಗಿದೆ. ಆ ಸಮಾಜದ ಆಂತರಿಕ ವ್ಯವಸ್ಥೆಯ ಸಮಾನ ಮನಸ್ಸಿನ ದೃಡವಾದ ಇಚ್ಛಾಶಕ್ತಿಗಳೇ ಇದಕ್ಕೆ ಕಾರಣವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಸಮಾಜದ ಅಭಿವೃದ್ಧಿಯ ಕನಸುಗಳು ಕೆಲವೇ ಮಂದಿ ಸ್ಥಾಪಿತ ಹಿತ ಶಕ್ತಿಗಳಿಂದಾಗಿ ನೂಚ್ಚುನೂರಾಗುತ್ತಿದೆ. ಇಂದು ಕೊಂಕಣಿ ಖಾರ್ವಿ ಸಮಾಜವನ್ನು ಕರಾವಳಿ ತೀರ ಪ್ರದೇಶದಿಂದ ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕೂಡಾ ನಡೆಯುತ್ತಿದ್ದು, ನಮ್ಮ ನೆಲ, ಜಲವನ್ನು ಕಳೆದುಕೊಳ್ಳುವಂತಹ ಆತಂಕಕಾರಿ ವಿದ್ಯಮಾನಗಳ ಕಾರ್ಮೋಡ ಆವರಿಸಿದೆ. ಈ ದಾರುಣ ಪರಿಸ್ಥಿತಿಯನ್ನು ಶಮನಗೊಳಿಸದೇ ಇದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಖಾರ್ವಿ ಸಮಾಜ ನಾಮಾವಶೇಷಗೊಳ್ಳುವ ಭೀತಿ ಆವರಿಸಿದೆ. ಆ ಕರಾಳ ಇತಿಹಾಸಕ್ಕೆ ಖಾರ್ವಿ ಸಮಾಜ ಜ್ವಲಂತ ಸಾಕ್ಷಿಯಾಗಲಿದೆ.

ಈ ಬೆಳವಣಿಗೆ ಇದೇ ರೀತಿ ಮುಂದುವರಿದರೆ ನಮ್ಮ ಸಾಮಾಜಿಕ ವ್ಯವಸ್ಥೆ ಅಧೋಗತಿಗೆ ಇಳಿಯುವುದರಲ್ಲಿ ಸಂಶಯವಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಸೆಟೆದು ನಿಂತು ಖಾರ್ವಿ ಸಮಾಜದ ಆಸ್ಮಿತೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ನಮ್ಮ ಪೂರ್ವಿಕರ ತ್ಯಾಗ, ಬಲಿದಾನಗಳನ್ನು ಸ್ಮರಿಸಿಕೊಂಡು, ಸಮಾಜದಲ್ಲಿ ಅನಾವಶ್ಯಕ ಗೊಂದಲ, ಅಶಾಂತಿಗಳನ್ನು ಸೃಷ್ಟಿಸುತ್ತಿರುವ ಸ್ಥಾಪಿತ ಹಿತ ಶಕ್ತಿ ಸಮಾಜ ಪೀಡಕರ ವಿರುದ್ಧ ಜನಾಂದೋಲನ ರೂಪುಗೊಳ್ಳಬೇಕು. ಇದಕ್ಕೆ ಖಾರ್ವಿ ಸಮಾಜ ಭಾಂಧವರು ಏಕಮನಸ್ಕರಾಗಿ, ಇಂತಹ ಸ್ಥಾಪಿತ ಹಿತ ಶಕ್ತಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕು. ಅಂತಹ ಕಾಲ ಕೂಡಿ ಬಂದಿದೆ. ಸಭ್ಯತೆಯ ಪರಧಿ ಮೀರಿ ಅಸಂಗತ ಸನ್ನಿವೇಶಗಳನ್ನು ಸೃಷ್ಟಿಸಿ ಸಮಾಜದ ಅಭಿವೃದ್ಧಿಗೆ ಮಾರಕವಾಗಿ ರೂಪುಗೊಂಡಿರುವ ಸಮಾಜದ ಅಭಿವೃದ್ಧಿಗೆ ಮಾರಕವಾಗಿ ರೂಪುಗೊಂಡಿರುವ ಇಂತವರ ವಿರುದ್ಧ ಖಾರ್ವಿ ಸಮಾಜ ಭಾಂಧವರು ಸಮಾನ ಮನಸ್ಕರಾಗಿ ಹೋರಾಟ ಮಾಡೋಣ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಸಿಕೊಳ್ಳುತ್ತಿದ್ದೇನೆ.

ಸುಧಾಕರ್ ಖಾರ್ವಿ
Team kharvionline.com

2 thoughts on “ಖಾರ್ವಿ ಸಮಾಜ ಬಾಂಧವರಲ್ಲಿ ವಿನಮ್ರ ವಿಜ್ಞಾಪನೆ..

  1. ಸತ್ಯ ವಾದ ಮಾತು ಸುಧಾ, ಕೆಟ್ಟ ಸ್ವಾರ್ಥ ಹಾಗೂ ದುರಾಲೋಚನೆ ಯಿಂದ ಸುಂದರ ವಾಗಿ ಅರಳುವ ನಮ್ಮ ಸಮಾಜ ದ ಭವಿಷ್ಯ ದ ಉತ್ತಮ ಯೋಜನೆ ಗಳನ್ನು ಹೊಸಕಿ ಹಾಕುವ ಪ್ರಯತ್ನ

  2. ಖಾರ್ವಿ ಸಮಾಜದ ಪ್ರಗತಿಗೆ ಅಡ್ಡಿಯಾಗಿರುವ ನಕಾರಾತ್ಮಕ ಶಕ್ತಿಗಳ ಬಗ್ಗೆ ನೀವು ಸೂಚಿಸಿದಂತೆ ಖಾರ್ವಿ ಸಮಾಜವು ಒಟ್ಟಾಗಿ ನಿಲ್ಲಬೇಕು.

    ಮೊದಲನೆಯದಾಗಿ, ಸಮಾಜವು ಈ ಹಿತಶಕ್ತಿಯನ್ನು ನೇರವಾಗಿ ಬೆರಳು ತೋರಿ ಅವರ ತಪ್ಪನ್ನು ಹೇಳಬೇಕು, ಅವರು ಎಷ್ಟು ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ.

    ನಾವು ಗಮನಿಸಬೇಕಾದ 2 ನೇ ವಿಷಯ, ಈ ಹೋರಾಟ ಜೀವಿಗಳ ಸಂಘವು ತಾವಾಗಿಯೇ ಸಮಾಜದ ಬೆಳೆವಣಿಗೆಗೆ ಇತ್ತೀಚಿನ ದಿನಗಳಲ್ಲಿ ಕೊಡುಗೆ ನೀಡಿದ ಯಾವುದೇ ನಿದರ್ಶನಗಳನ್ನು ನಾವು ನೋಡಿಲ್ಲ.

    ಉದಾಹರಣೆಗೆ – ಈ ಹಿತಶಕ್ತಿ ರೆಬೆಲ್ ಸ್ಟಾರ್ಸ್” ಸಂಘವು ಕಾಸರಗೋಡಿನಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಒಂದು ಚಕರ ಕೂಡ ಎತಿಲ್ಲ.
    ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಅವರದು ಸಂಪೂರ್ಣವಾಗಿ ವೈಯಕ್ತಿಕ ಅಜೆಂಡಾ ಹೊರತು ಸಮುದಾಯದ ಅಭಿವೃದ್ಧಿಗೆ ಯಾವುದೇ ಸಂಬಂಧವಿಲ್ಲ ಎಂದು.

    ಅಷ್ಟೇ ಅಲ್ಲ, ಈ ಹೋರಾಟ ಜೀವಿಗಳು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿರುವ ಇತರರಿಗೆ ಕೆಲಸ ಮಾಡಲು ಬಿಡುವುದಿಲ್ಲ.
    ಖಾರ್ವಿ ಸಮಾಜದ ಸಂಘಟನೆಗಳು ಮತ್ತು ದೇವಾಲಯ ಸಮಿತಿಗಳ ಸದಸ್ಯರು ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಲು ಈ ನಕಾರಾತ್ಮಕ ತಂಡದಿಂದ ಆಗುತ್ತಿರುವ ತಪ್ಪನ್ನು ತಿದ್ದಲೇ ಬೇಕು.

    ಈ ಬಗ್ಗೆ ಖಾರ್ವಿ ಸಮಾಜದ ಮಾತೃ ಸಂಘಟನೆ ಸಂಪೂರ್ಣ ಮೌನ ವಹಿಸಿರುವುದು ಬೇಸರದ ಸಂಗತಿ.
    ಮುಂದಿನ ದಿನಗಲಲ್ಲಿ, ಸಮಾಜಕ್ಕೆ ಮಾರ್ಗದರ್ಶನ ಮತ್ತು ಭರವಸೆಯನ್ನು ನೀಡಲು ಅವರು ಪರಿಹಾರವನ್ನು ಸೂಚಿಸುತ್ತಾರೆ ಎಂದು ಭಾವಿಸುತ್ತೇವೆ. ಇಲ್ಲವಾದಲ್ಲಿ ಮಾತೃ ಸಂಘಟನೆಯಲ್ಲಿನ “ಮಾತೃ” ಎಂಬ ಪದವು ಅದರ ಅರ್ಥ ಮತ್ತು ಮೌಲ್ಯವನ್ನು ಕಳೆದುಕೊಳ್ಳುತ್ತದೆ.

Leave a Reply

Your email address will not be published. Required fields are marked *