ಕರಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ತಮ್ಮ ಕ್ರೀಯಾಶೀಲತೆಯಿಂದ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆ, ಸಾಂಸ್ಕೃತಿಕ ಪರಂಪರೆಯ ಕಂಪನ್ನು ಪಸರಿಸುತ್ತಿರುವ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 24 ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಬೆಂಗಳೂರಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ತಾರೀಕು 04-01-2026 ರಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತ್ತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಯುತ ರಾಜೇಶ್ ಎಂ ಸೊರಬ, Asst. CDR, NSG ( Bomb Disposal Team) New Delhi ಇವರು ವಹಿಸಿದ್ದರು. ಅವರು ಮಾತನಾಡಿ ನಮ್ಮ ಖಾರ್ವಿ ಸಮಾಜದ ಬಂಧುಗಳು ಬೆಂಗಳೂರು ನಗರದಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವದು ಶ್ಲಾಘನೀಯ ಎಂದರು. ಈ ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿಕ್ಷಕರು ಎನ್.ಸಿ.ಸಿ. ಕಮಾಂಡರ್ ಜಿ.ಆರ್. ತಾಂಡೇಲರವರು ಮಾತನಾಡಿ ಬೆಂಗಳೂರುದಂತಹ ಮಹಾನಗರದಲ್ಲಿ ಉದ್ಯೋಗ ದಲ್ಲಿ ನಿರತರಾಗಿ, ಕಳೆದ 24ವರ್ಷಗಳಿಂದ ಕೊಂಕಣಿ ಖಾರ್ವಿ ವಿದ್ಯಾನಿಧಿಯನ್ನು ಆರಂಭಿಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಅವರ ಶೈಕ್ಷಣಿಕ ಪ್ರಗತಿಗೆ ಸ್ಫೂರ್ತಿ ನೀಡುತ್ತಿರುವುದು ನಾವೆಲ್ಲ ಹೆಮ್ಮೆಪಡುವ ವಿಷಯವಾಗಿದೆ. ಮತ್ತು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ಪಡೆದು ಖಾರ್ವಿ ಸಮಾಜದ ಗೌರವ ಹೆಚ್ಚಿಸಬೇಕೆಂದರು. ಈ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿರುವ ಕೊಂಕಣಿ ಖಾರ್ವಿ ವಿದ್ಯಾನಿಧಿ ಘಟಕದ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಶ್ರೀಯುತ ರಾಘವೇಂದ್ರ ಕೊಗ್ಗ ಖಾರ್ವಿ, ಮುಖ್ಯ ವ್ಯವಸ್ಥಾಪಕರು, ಹೆಲಿಕಾಪ್ಟರ್ MRO ವಿಭಾಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ,ಬೆಂಗಳೂರು ಇವರು ಅತಿಥಿಯಾಗಿ ಭಗವಹಿಸಿದ ಅವರು ಮಾತನಾಡಿ, ಕೊಂಕಣಿ ಖಾರ್ವಿ ವಿದ್ಯಾನಿಧಿಯ ಘಟಕದವರು ನೀಡುವ ಪ್ರತಿಭಾ ಪುರಸ್ಕಾರದಲ್ಲಿ ಹಿಂದೆ ನಾನೂ ಸಹ ಫಲಾನುಭವಿಯಾಗಿದ್ದೆ, ಈಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವದು ತುಂಬಾ ಸಂತೋಷವಾಗಿದೆ ಎಂದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡು ಸಂಗೀತ, ನೃತ್ಯ ಪ್ರದರ್ಶನಗಳು ನಡೆಯಿತು, ಪ್ರಾರ್ಥನೆ, ಸೌಜನ್ಯ ಆರ್ ಖಾರ್ವಿ, ಶುಭಸಂದೇಶ ಸುರೇಶ್ ಕುಮಾರ್ ಗಂಗೊಳ್ಳಿ ವಾಚನ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಹಾಗೂ ಪ್ರತಿಭಾ ಪುರಸ್ಕಾರ ನಿರೂಪಣೆಯನ್ನುಅಂಶು ಪುಂಡಲೀಕ ಖಾರ್ವಿ, ಆಯುಷ್ ಲೋಕೇಶ್ ಖಾರ್ವಿಯವರು ನಡೆಸಿಕೊಟ್ಟರು. ಶ್ರೀ ರವಿರಾಮ್ ಖಾರ್ವಿಯವರ ಅಧ್ಯಕ್ಷರು ಕೊಂಕಣಿ ಖಾರ್ವಿ ವಿದ್ಯಾವೇದಿಕೆ ಇವರು ಸ್ವಾಗತ ಭಾಷಣ ಮಾಡಿದರು, ಹರೀಶ್ ನಾಯ್ಕ್ ವರದಿ ವಾಚನ ಮಾಡಿದರು ವಿದ್ಯಾರ್ಥಿ ವೇತನವ ವಿತರಣಾ ಕಾರ್ಯಕ್ರಮ ಮತ್ತು ನಿರೂಪಣೆಯನ್ನು ಸತೀಶ್ ಖಾರ್ವಿ, ರವಿ ಕೋಡಿ ಮತ್ತು ಗಣಾಯಿ ಚಂದ್ರ ಖಾರ್ವಿಯವರು ನಡೆಸಿಕೊಟ್ಟರು.
ಸಭಿಕರ ಭಾಷಣ ಬಿ. ಎ. ಖಾರ್ವಿ, ಮೇಧಾವಿನಿ ಸುರೇಶ್, ಮಮತಾ ಸುಬ್ರಾಯ ಖಾರ್ವಿಯವರು ಪ್ರಸ್ತುತ ಪಡಿಸಿದರು. ದಾನಿಗಳ ಹೆಸರನ್ನು ರಾಘವೇಂದ್ರ ಕೋಟಾನ್ ರವರು ವಾಚನ ಮಾಡಿದರು ಕಾರ್ಯಕ್ರಮ ನಿರೂಪಣೆಯನ್ನು ಜ್ಯೋತಿ ಮಿಥುನ್ ಗಂಗೊಳ್ಳಿಯವರು ಸಾಂಗವಾಗಿ ನಡೆಸಿಕೊಟ್ಟರು, ಕೊನೆಯಲ್ಲಿ ವಂದನಾರ್ಪಣೆಯನ್ನು ಚಂದ್ರ ಖಾರ್ವಿ ಅವರು ನೆರವೇರಿಸಿ ಕೊಟ್ಟರು, ಸಾರ್ಥ್ಯಕದ ಕಾರ್ಯಕ್ರಮ ಹೃದಯಂಗಮವಾಗಿ ಸಂಪನ್ನಗೊಂಡಿತ್ತು.