ಕುಂದಾಪುರ: ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಖಾರ್ವಿ ಮೇಲ್ಕೇರಿ ಹಾಗೂ ಬಹದ್ದೂರ್ ಶಾ ವಾರ್ಡ್ ನ ನಡುವೆ ಇರುವ ತೆರೆದ ತೋಡಿನಲ್ಲಿ ವಿಪರೀತ ತ್ಯಾಜ್ಯಗಳು ಕಸಕಡ್ಡಿಗಳು ಕೊಳೆತು ಕಪ್ಪಾಗಿ ಕಲುಷಿತವಾದ ಮಲಿನ ನೀರಿನಿಂದ ದುರ್ಗಂಧ ಬೀರುತ್ತದೆ ಈ ಕಪ್ಪಾದ ಕಲುಷಿತ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಆಗುತ್ತಿದ್ದು ಸಾಂಕ್ರಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಆನೆಕಾಲು ರೋಗ, ಕಾಲರಾ ಮುಂತಾದ ಹಲವಾರು ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ.
ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿ ಸುತ್ತಮುತ್ತಲಿನ ಮನೆಗಳಿಗೆ ಕಲುಷಿತ ನೀರು ನುಗ್ಗುತ್ತಿದ್ದು ಅಲ್ಲಿನ ನಿವಾಸಿಗಳು ಭಯದಿಂದ ಜೀವನ ನಡೆಸುವಂತಾಗಿದೆ.
ಇಲ್ಲಿ ಅನೇಕರು ರೋಗಿಗಳು ವಯಸ್ಸಾದವರು ಮಕ್ಕಳು ಇದ್ದು ಅನಾರೋಗ್ಯಕ್ಕೀಡಾದರೆ ಸಹ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ದಾರಿಯ
ವ್ಯವಸ್ಥೆ ಇಲ್ಲವಾಗಿದೆ.
ಇಂಥ ಪರಿಸ್ಥಿತಿಯಲ್ಲಿ ಬದುಕುವ ಇಲ್ಲಿನ ಜನರ ಆರೋಗ್ಯದ ಮತ್ತು ಜನರ ಬಹುವರ್ಷದ ಬೇಡಿಕೆಯಾದ ಈ ಸುಡುಗಾಡು ತೋಡನ್ನು ಸರಿಯಾದ ರೀತಿಯಲ್ಲಿ ಉಪಯೋಗಕ್ಕೆ ಬರುವಂತೆ ಅಂದರೆ ತೋಡಿನ ಮೇಲ್ಭಾಗಕ್ಕೆ ಚಪ್ಪಡಿಯನ್ನು ಹಾಕಿಸಿ ಬಹದ್ದೂರ್ ಶಾ ರಸ್ತೆಗೆ ಸಂಪರ್ಕ ಕಲ್ಪಿಸುವ ದಾರಿಯನ್ನು ಮಾಡಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಪರಿಹರಿಸಬೇಕಾಗಿ ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿದೆ.
www.kharvionline.com
ಕುಂದಾಪುರ ಖಾರ್ವಿ ಮೇಲ್ಕೇರಿ ಮತ್ತು ಬಹದ್ದೂರ್ ಶಾ ವಾರ್ಡನ ನಡುವೆ ಇರುವ ತೆರೆದ ಚರಂಡಿಯಿಂದಾಗಿ ಅಕ್ಕ ಪಕ್ಕದಲ್ಲಿ ವಾಸಿಸುವ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಮ್ಮ ಜನಪ್ರತಿನಿಧಿಗಳು ಅತೀ ಶೀಘ್ರವೇ ಕ್ರಮ ಕೈಗೊಂಡು ಈ ಭಾಗದ ಜನರ ಆರೋಗ್ಯ ಹಾಗೂ ಪರಿಸರವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕಳಕಳಿಯ ಪ್ರಾರ್ಥನೆ.
Thank you for your support.
ಈ ಭಾಗದ
ಪುರಸಭಾ ಸದಸ್ಯರೇ
ಪುರಸಭೆ ಯ ಕಸದ ಗಾಡಿಯಲ್ಲಿ ಧ್ವನಿವರ್ಧಕ ಮೂಲಕ ಡೆಂಗಿ ಜ್ವರ ಬರುತ್ತದೆ ಮನೆಯ ಅಕ್ಕಪಕ್ಕ ಸ್ವಚ್ಛವಾಗಿರಲಿ ಹಾಗೂ ಕಸವನ್ನು ವಿಂಗಡ ಮಾಡಿ ನೀಡಬೇಕು ಅಂತ ಬೆಳಿಗ್ಗೆಯೇ ಪುರಸಭೆಯ ಕಸದ ಗಾಡಿಯಲ್ಲಿ ಪ್ರಚಾರ ಮಾಡುತ್ತಿರಿ ಆದರೆ ಈ ಭಾಗದ ಚರಂಡಿ ಹಾಗೂ ಸುಡುಗಾಡು ತೋಡು ನಲ್ಲಿ ಗಲೀಜು ನೀರು ನಿಂತಲ್ಲೆ ನಿಂತು ಭಯಾನಕ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಇದರಿಂದ ಈ ಭಾಗದ ಸಾಕಷ್ಟು ಜನರು ಅನಾರೋಗ್ಯದಿಂದ ಜೀವಕ್ಕೆ ಅಪಾಯ ಆಗಿ ಇವತ್ತಿಗೂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಇನ್ನೂ ಮುಂದೆಯು ಇದೇ ಪರಿಸ್ಥಿತಿ ಇದ್ದಾರೆ ಖಂಡಿತವಾಗಿಯೂ ಕಾನೂನು ಹೋರಾಟ ಮಾಡಬೇಕಾಗುತ್ತದೆ
ಕುಂದಾಪುರ ಪುರಸಭೆಯಿಂದ ತುಂಬಾ ಬೇಜವಾಬ್ದಾರಿ ಆಡಳಿತ. ಆದಷ್ಟು ಬೇಗ ಇಲ್ಲಿಗೆ ಭೇಟಿ ನೀಡಿ ಕಾರ್ಯಪ್ರವರ್ತರಗಬೇಕು. ಬರಿ ಕಾರ್ಯಕ್ರಮಗಳಲ್ಲಿ ಮಾತುಗಳಲ್ಲಿ ಉಳಿದುಬಿಟ್ಟಿದೆ ಇಲ್ಲಿನ ಅಧಿಕಾರಿಗಳ ಕಾರ್ಯವೈಕರಿ.
This place in worst condition . It’s shows in those pictures I don’t know how those people nearby that canal are living!! Hell of Kundapur.
ಇಂತಹ ಅದೆಷ್ಟೊ ಸಂಗತಿಗಳು ಹೊರಬರಬೇಕಿದೆ. ಜನರು ಇನ್ನಾದರೂ ಇಂತಹ ವಿಷಯಗಳ ವಿರುದ್ದ ದ್ವನಿ ಎತ್ತಬೇಕಾಗಿದೆ ಅಸಮರ್ಥ ವ್ಯವಸ್ತೆಯ ಕುರಿತು ಹೊರಡಬೇಕಿದೆ.
Rip to those people who is responsible for this.
ಸುಡುಗಾಡು ತೊಡನ್ನು ಸರಿಯಾದ ರೀತಿಯಲ್ಲಿ ಹೂಳೆತ್ತದೇ ಸಂಗ್ರಹವಾದ ಕಸ ವಿಲೇವಾರಿ ಮಾಡದೆ ಸುಡುಗಡನ್ನಾಗಿ ಮಾಡಿಟ್ಟು ಅಲ್ಲಿನ ಜನಸಾಮಾನ್ಯರನ್ನು ಸಾಂಕ್ರಾಮಿಕ ರೋಗಗಳಿಂದ ಬಳಲಿಸಿ ಸುಡುಗಾಡಿಗೆ ಕಳಿಸುವಂತೆ ಕಾಣುತ್ತಿದೆ ಸಂಬಂದಪಟ್ಟ ಪುರಸಭಾ ಅಧಿಕಾರಿಗಳ ಒಲವು.
Nanu illina staliya nivasiyagiddu estu sala Idara bagge purasabe ge ogi omplaint madidru saha yavobba kuda illi tanka nodlikku saha bandilla matte bartarantu saha nambike illa en samasye parihara madtaro gotila yak ivrig agdidre kelsa madorigadru adhikara kodi.
Super Agi helidiri brother.. Innadru janaru echetukolbeku.
Idu Tumba Ghambira Samasye. Todina stiti shochaniyavagide. Samajika karyakartaru hagu sambandapattavaru gamana harisabeku.
ಇಂತಹ ಸಮಸ್ಯೆಗಳು ಬಗೆಹರಿಯದ ಹೊರತು ಗ್ರಾಮವಾಗಲಿ ನಗರಗಳು ಅಭಿವ್ರದ್ದಿ ಹೊಂದಲು ಸಾದ್ಯವಿಲ್ಲ ಸಮಸ್ಯೆಗಳ ಆಗರಗಳಾಗಿ ಇರುತ್ತವೆ.
Very Sad.. Worst condition ever
ಕೇರಿಯ ನಿವಾಸಿ ಹಾಗೂ ಪುರಸಭೆಯ ಉಪಾಧ್ಯಕ್ಷರಾದಂತಹ ಸಂದೀಪ್ ಖಾರ್ವಿ ಅವರು ಈ ಕೂಡಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡ್ತಿದೇವೆ.
ಈ ತೋಡಿನ ದುಸ್ತಿತಿ ಖಾರ್ವಿಕೇರಿಗೆ ಕಪ್ಪು ಚುಕ್ಕೆ ಆಗುವ ಎಲ್ಲಾ ರೀತಿಯ ಲಕ್ಷಣಗಳು ಕಾಣುತ್ತಿದೆ. ಆದ್ದರಿಂದ ದಯಮಾಡಿ ಪುರಸಭಾ ಸದಸ್ಯರೇ ಕಾರ್ಯಪ್ರವರ್ತರಗಬೇಕಾಗಿ ವಿನಂತಿ.
ಎಂತಹ ಅವ್ಯವಸ್ತೆ. ಮಳೆಗಾಲಕ್ಕೆ ತುಂಬಾ ತೊಂದರೆ ಆಗುವ ಸಾದ್ಯತೆ ತುಂಬಾ ಇದೆ.
ಇಡೀ ಕುಂದಾಪುರದ ಮಳೆಗಾಲದ ನೀರು ಈ ತೋಡಿನ ಮೂಲಕ ಹೋಗಿ ನದಿಗೆ ಹೋಗಿ ಸೇರುತ್ತದೆ ಮನೆ ಗೋಡೆ ಕುಸಿತಕ್ಕೆ ಅರ್ದದಷ್ಟು ತೋಡು ತುಂಬಿ ಬ್ಲಾಕ ಆಗಿದೆ. ಹಾಗೆ ಇದ್ರೆ ಸ್ತಳೀಯರಿಗೆ ತೊದರೆ ಕಟ್ಟಿಟ್ಟ ಬುತ್ತಿ.
Entaha ketta samajada adalitada madye naav badkta iddeve!! Bahala dharunavagide.
ಪುರಸಭಾ ಸದಸ್ಯರು ಶಾಸಕರ ಆಪ್ತ ಸಹಾಯಕರು ಶ್ರೀ ಸಂತೋಷ್ ಶಟ್ಟಿ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ ಯವರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿ ಸಂಭದಪಟ್ಟ ಅಧಿಕಾರಿಯೊಂದಿಗೆ ಸ್ಥಳದಲ್ಲೆ ಮಾತಾನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ
ಶೀಘ್ರ ಮುಂದಿನ ಅಭಿವೃದ್ಧಿಯ ಕುರಿತು ಶಾಸಕರ ಗಮನಕ್ಕೆ ತರುದಾಗಿಯು ಹೇಳಿದ್ದಾರೆ.
ಧನ್ಯವಾದಗಳು
ಇನ್ನೇನ್ ಮಳೆ ಸ್ಟಾರ್ಟ್ ಆಗಿದ್ರಿಂದ ಛಳಿಗೆ ಬೆಚ್ಚಗೆ ಮನೆಯಲ್ಲಿ ಕುತ್ ಕೊಂಡಿದರೆನೋ ಪುರಸಭಾ ಸದಸ್ಯರು. ಯಾರ್ ಮನೆ ಬಿದ್ದೊದ್ರೆ ನಮ್ಗೆನು ಅಂತ ಕೂತಿದ್ದಾರೆ. *ಯಾರೇ ಕೂಗಾಡಲಿ*.
ಮೋದಿ ಅವರ ಸ್ವಚ್ಚ್ ಭಾರತ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಪುರಸಭಾ ಸದಸ್ಯರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುವ ಚಿತ್ರಣ ಮೇಲಿನಿ ಚಿತ್ರಗಳಲ್ಲಿ ಬಹಳ ಸುಂದರವಾಗಿ ಕಾಣುತ್ತಿದೆ.
ತೋಡಿಗೆ ಚರಂಡಿಗಳಿಗೆ ಚಪ್ಪಡಿಯಿಲ್ಲ ಸೊಳ್ಳೆಗಳಿಗೆ ನಿಯಂತ್ರಣವಿಲ್ಲ ಜನರಿಗೆ ಓಡಾಡಲು ದಾರಿಯಿಲ್ಲ. ಮಳೆಯಲ್ಲಿ ಸಂಗ್ರಹವಾದ ನೀರು ಹರಿಯಲು ಮಾರ್ಗವಿಲ್ಲ. ಇದೇ ಇವರುಗಳು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು.
ಒಳ್ಳೆಯ ಕಾಮಗಾರಿ ನಡೆಸಿ ತೋಡನ್ನು ಸರಿಯಾದ ರೀತಿಯಲ್ಲಿ ಚಪ್ಪಡಿ ಹಾಕಿಸಿ ಮುಚ್ಚುವ ಮೂಲಕ ಸುತ್ತಮುತ್ತಲಿನ ಜನರಿಗೆ ಓಡಾಡಲು ದಾರಿಯಂತೆ ಮಾಡಿ ಇದರಿಂದ ಸೊಳ್ಳೆ ಕಾಟ ತಪ್ಪುತ್ತದೆ. ಮಳೆಗಾಲದಲ್ಲಿ ಚಿಕ್ಕ ಮಕ್ಕಳು ತೋಡಿನಲ್ಲಿ ಬಿದ್ದು ನದಿ ಸೇರುವ ಪ್ರಾಣಹಾನಿ ನಡೆಯುವ ಸಂಬವ ತಪ್ಪಿಸಿ. ಜನರ ಅನುಕೂಲ ಕಲ್ಪಿಸಲು ಅಧಿಕಾರ ನೀಡಿರುವುದೇ ಹೊರತು ಬೇಡಿಕೊಳ್ಳಲಿಕ್ಕಲ್ಲ.
ಸ್ಥಳೀಯ ಆಡಳಿತ ಆದಷ್ಟು ಬೇಗ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿ ..
ಪುರಸಭಾ ಉಪದ್ಯಕ್ಷರಾದ ಸಂದೀಪ್ ಖಾರ್ವಿ ಯವರ ಅಡಳಿತವಾದಿಯಲ್ಲಿ ಇಂತಹ ಸಮಸ್ಯೆಗಳನ್ನು ನೋಡಲು ಸಿಕ್ಕಿರುವುದು ಬಹಳ ನೋವುಂಟಾಗುವ ವಿಚಾರವಾಗಿದೆ. ಆದಷ್ಟು ಬೇಗ ಅವರು ಈ ಖಾರ್ವಿಕೇರಿಯ ಜನರ ನೋವಿಗೆ ಸ್ಪಂದಿಸುತ್ತಾರೆಂಬ ಆಶಯದಲ್ಲಿ ನಿವಾಸಿಗಳು.
ಪುರಸಭೆ ಇದರ ಬಗ್ಗೆ ತಕ್ಷಣ ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಿ
ಕುಂದಾಪುರ ಪುರಸಭೆಯ ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕ ಪ್ರತಿನಿಧಿಸುತ್ತಿರುವ ಎರಡು ವಾರ್ಡ್ ನಲ್ಲಿ ಇಂಥ ಗಂಭೀರ ಸಮಸ್ಯೆ ಎದುರಿಸುತ್ತಿರುವುದು ದುರಂತವೆ ಸರಿ . ತೋಡಿಗೆ ಚಪ್ಪಡಿ ಹಾಕಿ ಸಂಪರ್ಕಕ್ಕೆ ದಾರಿ ಮಾಡಿ ಕೊಡುವುದರ ಮೂಲಕ ಆ ಭಾಗದ ಜನರ ನೋವುಗಳಿಗೆ ಸ್ಪಂದಿಸಲಿ ..