ಸಣ್ಣ ಕಥೆ ಗಳ ಸರದಾರ ಜನಾರ್ಧನ ಗಂಗೊಳ್ಳಿ.

ಆಕಸ್ಮಿಕವಾಗಿ ಮೊಳೆತು ಬಿಟ್ಟ ಬರವಣಿಗೆಯ ಆಸಕ್ತಿ ಕೆಲವೇ ಸಮಯದಲ್ಲಿ ಅದು ಹೆಮ್ಮರವಾಗಿ ಬೆಳೆದು ಹಲವು ಪುಸ್ತಕಗಳನ್ನೆ ಬರೆಯುವ ತನಕ ಮುಟ್ಟಿಸಿತು.

ಇವರ ಸಣ್ಣ ಕಥೆಗಳ ಸಂಕಲನ “ಕಥಾ ಗುಚ್ಛ” ನಿಜಕ್ಕೂ so wonderful book. ಸಂಯುಕ್ತ ಕರ್ನಾಟಕ ದಲ್ಲಿ ಇವರ ಸಣ್ಣ ಕಥೆಗಳು ಪ್ರಕಟಗೊಂಡು ಜನ ಮೆಚ್ಚುಗೆ ಪಡೆದಿತ್ತು. ವಿವಿಧ ಕಥೆಗಳ ಸರಪಣಿ, ಬರವಣಿಗೆಯ ಮೆರವಣಿಗೆಯಲ್ಲಿ ಇವರ ಕಥೆಗಳು ಓದುಗರ ಮನಸ್ಸಿನಲ್ಲಿ ರಂಗವಲ್ಲಿ ಮೂಡಿಸುತ್ತದೆ. ಕಥಾ ಗುಚ್ಛ 3 ಭಾಗ ದಲ್ಲಿ ಪ್ರಕಟ ಗೊಂಡಿತು. ನಂತರ “ಕಾವೇರಿ ನೀ ಹೇಳು.”ನೀತಿ ಕಥೆ, ಇವರು ಬರೆದ “ಪ್ರಕ್ರತಿ ನೀ ಎಷ್ಟು ಅದ್ಭುತ”ಇದು ಅತೀ ದೊಡ್ಡ ಕಾದಂಬರಿ. ವಿಭಿನ್ನ ಸ್ಪರ್ಶ ನೀಡಿ ಬರೆದ ಪುಸ್ತಕ ಇದು. ಹೀಗೆ ತೆರೆ ಮರೆಯಲ್ಲಿ ನಿಂತು ತನ್ನ ಪ್ರತಿಭೆ ಮೆರೆದ ಜನ ಮೆಚ್ಚಿದ ಕಥೆಗಾರ ಜನಾರ್ಧನ್ ಕಲೈಕಾರ್ ಜನಾರ್ಧನ್ ಗಂಗೊಳ್ಳಿ

ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ. ಮಗು ಮನಸ್ಸಿನ ವ್ಯಕ್ತಿ. ಯಾರಿಗೂ ನೋವು ಮಾಡದೆ ತನ್ನದೇ ಬರವಣಿಗೆ ಯಲ್ಲಿ ಮುಳುಗಿ ಹೋಗುವ ಸಾಮಾಜಿಕ ಕಳಕಳಿ ಇರುವ ಸಜ್ಜನ. ಓದುವುದರೊಂಡಿಗೆ ಸಂಗೀತ ಆಲಿಸುದು ಇವರ ಹವ್ಯಾಸ.

ಖಾರ್ವಿ ಸಮಾಜದ ಒಬ್ಬ ಪ್ರತಿಭಾವಂತ ಕಥೆಗಾರ ಶ್ರೀ.ಜನಾರ್ಧನ್ ಗಂಗೊಳ್ಳಿ ಯವರನ್ನು ಸಮಾಜ ಸರಿಯಾಗಿ ಗುರುತಿಸಲಿಲ್ಲ ಎನ್ನುವುದು ತುಂಬಾ ದುಃಖದ ವಿಷಯ.ಈ ನೋವು ಅವರಲ್ಲಿ ಇದ್ದರೂ ವಿಷಾದದ ನಗುವೊಂದನ್ನು ಬಿಸಾಕುತ್ತ ಮತ್ತೆ ಬರವಣಿಗೆಯಲ್ಲಿ ಕಳೆದು ಹೋಗುತ್ತಾರೆ.

ಖಾರ್ವಿ ಸಮುದಾಯದಲ್ಲಿ ಅದೆಷ್ಟೋ ಪ್ರತಿಭೆಗಳು ತೆರೆ ಮರೆಯಲ್ಲಿ ಇದ್ದಾರೆ. ಹುಡುಕಿ ಸಪೋರ್ಟ್ ಮಾಡುವ, ಗುರುತಿಸುವ ಒಂದು “ಅಶ್ವಮೇಧ ಯಾಗ” ನಡೆಯ ಬೇಕಿದೆ.

ರವಿ ಕುಮಾರ್ ಗಂಗೊಳ್ಳಿ

Leave a Reply

Your email address will not be published. Required fields are marked *