ಶ್ರೀ ಮಹಾಕಾಳಿ ದೇವಸ್ಥಾನ ದಲ್ಲಿ ನಾಳೆ 2 ನೇ ಅಂತದ 45+ ಹಾಗೂ ಅನುಬಂಧ 1 ಮತ್ತು 2 ರ ಅನ್ವಯ 18+ ಇರುವರಿಗೆ ಲಸಿಕಾ ಅಭಿಯಾನ ನಡೆಯಲಿದೆ: ಶ್ರೀ ಸುನೀಲ್ ಖಾರ್ವಿ.
ಕುಂದಾಪುರ: ವ್ಯಾಕ್ಸಿನೇಷನ್ ಅಭಿಯಾನದ ಅಂಗವಾಗಿ ದಿನಾಂಕ 21/06/2021 ನೇ ಸೋಮವಾರ ದಂದು ಶ್ರೀ ಮಹಾಕಾಳಿ ದೇವಸ್ಥಾನ ಸಭಾಂಗಣ ದಲ್ಲಿ ಸರಕಾರಿ ಆಸ್ಪತ್ರೆ ವೈದಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ , ನ್ಯೂಡಲ್ ಅಧಿಕಾರಿ ಡಾ. ದಿನಕರ್ ಶೆಟ್ಟಿ, ಕುಂದಾಪುರ ಪುರಸಭಾ ಅಧ್ಯಕ್ಷ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ವೈದಾಧಿಕಾರಿ ಡಾ. ರಾಜೇಶ್ವರಿ, ಡಾ. ರಶ್ಮಿ ಶೆಟ್ಟಿ, ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯನಂದ ಖಾರ್ವಿ, ಮುಕ್ತೇಶರರಾದ ಶ್ರೀ ಪಾಂಡು ಸಾರಂಗ್, ವಿದ್ಯಾರಂಗ ಮಿತ್ರ ಮಂಡಳಿ ಅದ್ಯಕ್ಷರಾದ ಶ್ರೀ ಅರುಣ್ ಖಾರ್ವಿ ಇವರ ಉಪಸ್ಥಿತಿ ಯಲ್ಲಿ ಸಹಾಯಕ ಕಮಿಷಿನರ್ ರಾಜು ಕೆ. ಲಸಿಕೆ ಅಭಿಯಾನ ಕ್ಕೆ ದೀಪಾ ಬೆಳಗಿಸಿ ಚಾಲನೆ ನೀಡಿದರು.
200 ಜನ ಫಲಾನುಭವಿಗಳಿಗೆ ಲಸಿಕೆ ನೀಡಲಾಯಿತು. ಸರ್ಕಾರಿ ಆಸ್ವತ್ರೆ ವೈಧಾದಿಕಾರಿಗಳು, ನರ್ಸ್ ಗಳು, ಆಶಾ ಕಾರ್ಯಕರ್ತರು, ಶಿಕ್ಷಕರು ಹಾಗೂ ಸಹಾಯಕರು, ಶ್ರೀ ಮಹಾಕಾಳಿ ದೇವಸ್ಥಾನ ದ ಆಡಳಿತ ಮಂಡಳಿ ಸದಸ್ಯರು, ವಿದ್ಯಾರಂಗ ಮಿತ್ರ ಮಂಡಳಿಯ ಸದಸ್ಯರ ಸಹಕಾರದಿಂದ ಲಸಿಕ ಕಾರ್ಯ ಕೊವೀಡ್ ನಿಯಮದನ್ವಯ ಶಿಸ್ತು ಬದ್ದವಾಗಿ ನೆಡೆಯಲಾಯಿತು.
ದಿನಾಂಕ 23/06/2021 ರ ಬುಧವಾರ ದಂದು ಕೂಡ ಲಸಿಕ ವಿತರಣೆ ನಡೆಯಲಿದ್ದು ಅನುಬಂಧ 1 ಮತ್ತು 2 ರ ಅನ್ವಯ 18+ ವಯಸ್ಸಿನ ಹಾಗೂ 45+ ವಯಸ್ಸಿನ ಮೊದಲು ಬಂದ 200 ಜನ ಫಲಾನುಭವಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಅಭಿಯಾನ ದ ಸಂಯೋಜಕರಾದ ಸುನೀಲ್ ಖಾರ್ವಿ ಯವರು ತಿಳಿಸಿದ್ದಾರೆ.