ಯೋಗವು ಪ್ರಾಚೀನ ಭಾರತ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ವರ್ತನೆ ಹಾಗೂ ಸಂಯಮ ಮತ್ತು ಸಾಧನೆಗಳ ಏಕೀಕರಣವನ್ನು ಸಾಕಾರಗೊಳಿಸುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದ ಗ್ಯಾಜೆಟ್ಗಳು, ಆರಾಮ ಮತ್ತು ಅನುಕೂಲಕ್ಕಾಗಿ ನಮ್ಮನ್ನು ಸೆಳೆಯುತ್ತವೆ. ಆದರೆ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯದ ತೊಂದರೆಗಳಂತಹ ಅನೇಕ ರೋಗಗಳನ್ನು ಜೊತೆಗೆ ಇವು ಸದ್ದಿಲ್ಲದೇ ನಮ್ಮೆಡೆ ಕರೆತರುತ್ತದೆ.
ತಂತ್ರಜ್ಞಾನದ ವ್ಯಾಪಕ ಬಳಕೆಯು ಇಂದಿನ ಆಧುನಿಕ ಪ್ರಪಂಚದಲ್ಲಿನ ನಮ್ಮ ಜೀವನಶೈಲಿಯನ್ನಷ್ಟೇ ಅಲ್ಲ, ಆರೋಗ್ಯದ ಮೇಲೆಯೂ ಹಲವಾರು ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಿದೆ ಎಂದರೆ ತಪ್ಪಾಗಲಾರದು. ಈ ದಿನದ ದೈಹಿಕ ಮತ್ತು ಮಾನಸಿಕ ಅಸಮತೋಲನಾ ಸ್ಥಿತಿಯು ಅನಾರೋಗ್ಯಕ್ಕೆ ಕಾರಣವಾಗಿದೆ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು. ಹೀಗಿರುವಾಗ, ಪುರಾತನ ಭಾರತದ ಇತಿಹಾಸದಲ್ಲಿ ವ್ಯಾಖ್ಯಾನಿಸಲಾಗಿರುವ ದೇಹ, ಮನಸ್ಸು ಹಾಗೂ ಆಧ್ಯಾತ್ಮಗಳ ನಡುವೆ ಐಕ್ಯತೆಯನ್ನು ಸ್ಥಾಪಿಸುವ ಸಾಧನ ‘ಯೋಗ’ದ ಕಡೆಗೆ ನಮ್ಮ ಅರಿವು ಸಹಜವಾಗಿಯೇ ಆಕರ್ಷಿತಗೊಳ್ಳುತ್ತದೆ.
ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ‘ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ’.
ಈಗಾಗಲೇ ಯೋಗ ಶಾಸ್ತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಅಥವಾ ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದು ರುಜುವಾತಾಗಿದೆ. ಇಂದಿನ ಕಾಲಘಟ್ಟದಲ್ಲಿ ಮನುಷ್ಯರ ಜೀವಕ್ಕೆ ಸಂಚಕಾರ ತರುತ್ತಿರುವ ವ್ಯಾಧಿಗಳಲ್ಲಿ ಮುಖ್ಯವಾದ ರಕ್ತದೊತ್ತಡ, ನಿದ್ರಾಹೀನತೆ, ಬಿರುಸುತನ, ಹೃದಯ ಸ್ತಂಭನ, ಮಾನಸಿಕ ಉದ್ವೇಗ, ಮಾನಸಿಕ ಅಸ್ಥಿರತೆ ಮುಂತಾದವುಗಳಿಂದ ಮುಕ್ತಿ ಪಡೆದು, ಆರೋಗ್ಯವಂತ ಹಾಗೂ ಸುಖಕರ ಜೀವನ ಸಾಗಿಸಲು ನಾವೆಲ್ಲರೂ ಶಿಸ್ತಿನ ಯೋಗಾಭ್ಯಾಸ ನಡೆಸೋಣ.
ಮುಖ್ಯವಾಗಿ ಎಂಟು ಯೋಗ ವಿಧಗಳನ್ನು ಗುರುತಿಸಲಾಗಿದೆ.
1. ಭಕ್ತಿ ಯೋಗ
2. ಕರ್ಮ ಯೋಗ
3. ಜ್ಞಾನ ಯೋಗ
4. ರಾಜ ಯೋಗ
5. ಮಂತ್ರ ಯೋಗ
6. ಲಯ ಯೋಗ
7. ತಂತ್ರ ಯೋಗ
8. ಹಟ ಯೋಗ
ಮಾನವ ಮತ್ತು ನಿಸರ್ಗದ ನಡುವೆ ಸೌಹಾರ್ದ, ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಪವಿತ್ರ ವಿಧಾನವನ್ನು ಹೇಳಿಕೊಡುತ್ತದೆ. ಇದು ಬರೇ ವ್ಯಾಯಾಮವಲ್ಲ, ನಿಮ್ಮನ್ನು ನೀವು ಜಗತ್ತು ಮತ್ತು ಪ್ರಕೃತಿಯ ಜತೆಗೆ ಒಂದಾಗಿಸಿಕೊಳ್ಳುವ ಪ್ರಕ್ರಿಯೆ. ನಮ್ಮ ಜೀವನಶೈಲಿ ಬದಲಾವಣೆ ಹಾಗೂ ಪ್ರಜ್ಞಾಸ್ಥಿತಿಯನ್ನು ಸೃಷ್ಟಿಸಿಕೊಳ್ಳುವ ಮೂಲಕ ಇದು ಯೋಗಕ್ಷೇಮಕ್ಕೆ ದಾರಿಯಾಗುತ್ತದೆ.
ಅಂತಾರಾಷ್ಟ್ರೀಯ ಯೋಗ ದಿನವಾಗಿ ಈ ದಿನವನ್ನು ಅಂಗೀಕರಿಸುವ ಮೂಲಕ ನಾವೆಲ್ಲರೂ ಒಂದಾಗೋಣ’
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು
www.kharvionline.com
ಯೋಗ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು*
*ಏಕೆಂದರೆ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿ ಕೊಟ್ಟಿದ್ದು ನನ್ನ ಭಾರತ*
ಹಾಗೆಯೇ…..ದೇಹದಲ್ಲಿ ರೋಗಕ್ಕೆ ಜಾಗವಿರಬಾರದು ಎಂದಾದರೆ ದಿನನಿತ್ಯದ ಜೀವನದಲ್ಲಿ *ಯೋಗಕ್ಕೆ* ಜಾಗವಿರಬೇಕು.
*ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು*