ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯುವ ಮೂನ್ನವೆ ಸಂಪ್ರಾಯದಂತೆ ಕುಂದಾಪುರ ತಾಲೂಕು ಸಂಪ್ರಾದಾಯಿಕ ನಾಡದೋಣಿ ವಯಲದ ಓಕ್ಕುಟದವರಿಂದ ವರ್ಷಂಪ್ರತಿಯಂತೆ ಈ ವರ್ಷವೂ ಮರವಂತೆಯ ಶ್ರೀ ವರಾಹ ಮಹಾರಾಜ ಸ್ವಾಮಿ ಸನ್ನಿಧಿಯಲ್ಲಿ ಸಮುದ್ರ ಪೊಜೆ(ಗಂಗೆ ಪೊಜೆ) ನೆರವೇರಿತು.
ನಮ್ಮ ನಾಡದೋಣಿಯ ಮೀನುಗಾರರು ಶೃಂಗೇರಿ ಶ್ರೀ ಜಗದ್ಗುರುರವರ ಆಶೀರ್ವಾದ ಪಡೆದು ತಮ್ಮ ವೃತ್ತಿ ಜೀವನದ ಕಸುಬು ಪ್ರಾರಂಭಿಸುತ್ತಾರೆ, ಈ ವರ್ಷ “ಲಾಕ್ ಡೌನ್” ಇರುವುದರಿಂದ ಸೀಮಿತ ಸದಸ್ಯರಿಂದ ಪೂಜೆ ನೆರವೇರಿತು, ಈ ಕಾರ್ಯಕ್ರಮವು ಶ್ರೀ ವರಾಹ ದೇವಸ್ಥಾನದ ಧರ್ಮದರ್ಶಿ ಶ್ರೀ ರಾಮಚಂದ್ರ ಹೆಬ್ಬರ್ ಹಾಗೂ ಆರ್ಚಕ ಶ್ರೀ ನರಸಿಂಹ ಆಡಿಗರ ನೇತೃತ್ವದ ದಲ್ಲಿ ನೆಡೆಯಿತು.
ಬೈಂದೂರು ವಲಯ ನಾಡದೋಣಿ ಸಂಘದ ಅಧ್ಯಕ್ಷ ಶ್ರೀ ಆನಂದ್ ಖಾರ್ವಿ, ಸೋಮ್ ಶೇಖರ್ ಖಾರ್ವಿ ಮರವಂತೆ, ಸುರೇಶ್ ಖಾರ್ವಿ, ಪೂರುಸೋತ್ತಮ್ ಖಾರ್ವಿ, ರವೀಂದ್ರ ಖಾರ್ವಿ, ಚಂದ್ರ ಖಾರ್ವಿ, ಹಾಗೂ ಗಂಗೋಳ್ಳಿ ನಾಡದೋಣಿಯ ಅಧ್ಯಕ್ಷ ಶ್ರೀ ಮಂಜು ಬಿಲ್ಲವ, ಪಿ.ಸುರೇಶ್ ಖಾರ್ವಿ, ಸುರೇಶ್ ಬಂಗೇರ, ಚೌಕಿ ವಿಠಲ್ ಖಾರ್ವಿ, ಶ್ರೀ ರಾಮ ದೇವಸ್ಥಾನ ಆಧ್ಯಕ್ಷ ಶ್ರೀ ಮೋಹನ್ ಖಾರ್ವಿ ಕಂಚುಗೋಡು ಹಾಗೂ ನಾಡದೋಣಿಯ ಸದ್ಯಸರು ಉಪಸ್ಥಿತರಿದ್ದರು.
ವರದಿ: ಕೆ.ನಾಗೇಶ್ ಖಾರ್ವಿ ಕಂಚುಗೋಡು