ಬೆಂಕಿ ಬಿದ್ದಿದೆ ಮನೆಗೆ ಆರಿಸೋಣ ಬನ್ನಿ

ನಾನು ಮೀನುಗಾರರ ಗುಣಗಾನ ಮಾಡುತ್ತೇನೆ ಅವರು ಮಹಾಸೇನಾನಿಗಳಂತೆ ಕಡಲಿನಲ್ಲಿ ದಂಡಯಾತ್ರೆ ಕೈಗೊಳ್ಳುತ್ತಾರೆ. ಹೀಗೆಂದು ಹೇಳಿದವರು ಖ್ಯಾತ ಮಾನವತಾವಾದಿ ಚಿಂತಕ ಹೆನ್ರಿ ವಾನ್ ಡೈಕ್ ರವರು.

ನಿಜ ಮೀನುಗಾರರ ಬದುಕು ಸಾಹಸಮಯ ಕಡಲಿನ ದಂಡಯಾತ್ರೆ ಆದರೆ ಈ ದಂಡಯಾತ್ರೆಯನ್ನು ನಮ್ಮ ಮನೆ ಬದುಕು ಆಸ್ಮಿತೆಯನ್ನು ಉಳಿಸಿಕೊಳ್ಳಲು ನೆಲದ ಮೇಲೆ ಕೈಗೊಳ್ಳಬೇಕಾದ ಸಂಕಟಮಯ ಮತ್ತು ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಈ ಹೋರಾಟ ವರ್ತಮಾನ ಮತ್ತು ಭವಿಷ್ಯಗಳ ದೃಷ್ಟಿಯಿಂದ ಒಂದು ಅರ್ಥ ಪೂರ್ಣವಾದ ಬಂಡವಾಳ ಹೂಡಿಕೆ ನಮ್ಮ ಹೋರಾಟಕ್ಕಾಗಿ ತೂತ್ತೂರಿಗಳು ಮೊಳಗುವುದಿಲ್ಲ ಸಾರೋಟುಗಳು ಕಾಯುವುದಿಲ್ಲ ಒಗ್ಗಟ್ಟಿನ ಪ್ರದರ್ಶನವೇ ನಮ್ಮ ಪ್ರಮುಖ ಅಸ್ತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸಮಾಜದ ಬಂಧುಗಳೇ ನಿಮ್ಮ ವಿಶಿಷ್ಟವಾದ ಪ್ರತಿಭೆಗಳ ಕ್ಷ ಕಿರಣಗಳನ್ನು ಸಮಾಜ ಅನುಭವಿಸುತ್ತಿರುವ ಸಮಸ್ಯೆಗಳತ್ತ ಹರಿಸಿ ಪರಿಹಾರ ಕಂಡುಕೊಳ್ಳುವತ್ತ ಕೇಂದ್ರಿಕೃತಗೊಳ್ಳಲ್ಲಿ.

ಉದ್ಬವವಾಗಿರುವ ಸಮಸ್ಯೆ ಸಮಸ್ಯೆಯಾಗೀಯೇ ಉಳಿದು ಹೋಗುವುದೇ ಹೆಚ್ಚು ಇದನ್ನು ಪರಿಹರಿಸಲು ಪರಿಹಾರ ಮಾರ್ಗವಾಗಿ ಜೀವಂತ ಪ್ರಕ್ರಿಯೆ ಅವಶ್ಯಕವಾಗಿದೆ ಇದು ನಿತ್ಯ ನಿರಂತರವಾಗಿರಬೇಕು ಹೊನ್ನಾವರ ಕಾಸರಗೋಡು ಕಡಲತಡಿಯಲ್ಲಿ ತಲೆ ತಲಾಂತರಗಳಿಂದ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ನಮ್ಮ ಸಮಾಜ ಭಾಂಧವರ ಬದುಕು ತೀವ್ರ ಸಂಕಷ್ಟದಲ್ಲಿದೆ ಅವರು ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗುವ ಆತಂಕದಲ್ಲಿದ್ದಾರೆ.

ಈ ಬಡ ಮೀನುಗಾರರ ಅಮೂಲ್ಯ ಮತಗಳಿಂದ ಗೆದ್ದು ಗದ್ದುಗೆ ಹಿಡಿದ ಜನಪ್ರತಿನಿಧಿಗಳು ಕೈ ಕೊಟ್ಟಿದ್ದಾರೆ ಸಮಾಜದ ಕೃಪಾಕಟಾಕ್ಷದಿಂದ ನಾಯಕನಾಗಿ ರೂಪಿತಗೊಂಡ ಕೆಲವರು ತಮ್ಮ ಸ್ವಾರ್ಥ ಸಾಧನೆಗೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ತೆರೆಮರೆಯಲ್ಲಿ ಬೆಂಬಲ ನೀಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಮಾಜ ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕಾಗಿದೆ ಹೊನ್ನಾವರ ಕಾಸರಗೋಡು ಬಡ ಮೀನುಗಾರರ ಪರಿಸ್ಥಿತಿ ಮುಂದೊಂದು ದಿನ ನಮಗೂ ಬರಬಹುದು ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದರೆ ಪರಿಹಾರ ದೊರಕುತ್ತದೆ ಮನೆಗೆ ಬೆಂಕಿ ಬಿದ್ದಿದೆ ಅದನ್ನು ಆರಿಸೋಣ ಬನ್ನಿ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *