ಸತ್ಕಾರ್ಯದ ಸತ್ಪರುಷ ಶ್ರೀ ರವಿ. ಟಿ. ನಾಯ್ಕ್

ಕೊಂಕಣಿ ಖಾರ್ವಿ ಸಮಾಜದ ಏಳಿಗೆಗೋಸ್ಕರ ಸಮಾಜ ಸೇವೆ ಎಂಬ ಯಜ್ಞವನ್ನು ಕೈಗೊಂಡಿರುವ ಶ್ರೀ ರವಿ. ಟಿ. ನಾಯ್ಕ್ ದಂಪತಿಗಳ ಹೆಸರು ಸಮಾಜದ ನಭೋಮಂಡಳದಲ್ಲಿ ಅದ್ವಿತೀಯವಾಗಿ ಪ್ರಜ್ವಲಿಸುತ್ತಿದೆ.

ಜೀವನಾಧಾರಕ್ಕಾಗಿ ಮುಂಬೈನಲ್ಲಿ ನೆಲೆನಿಂತು ಚದುರಿಹೋದ ಖಾರ್ವಿ ಸಮಾಜವನ್ನು ಸಮಾಜದ ಅಧ್ಯಕ್ಷರಾಗಿ ಒಂದುಗೂಡಿಸಲು ಪ್ರಯತ್ನಿಸಿದ ಘನಕಾರ್ಯ, ಖಾರ್ವಿ ಸಮಾಜದ ಸ್ವಂತ ಕಾರ್ಯಾಲಯ ಹೊಂದುವಲ್ಲಿ ತನು-ಮನ-ಧನ ಸೇವೆ, ಜೀವನಾಧಾರಕ್ಕಾಗಿ ಮುಂಬೈಗೆ ಬಂದ ಹಲವಾರು ಸಮಾಜ ಬಾಂಧವರಿಗಾಗಿ ಅವರ ಸಾಮರ್ಥ್ಯಕ್ಕನುಗುಣವಾಗಿ ಉದ್ಯೋಗ ದೊರಕಿಸಿಕೊಟ್ಟ ಶ್ರೇಯ, ಮುಂಬೈಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ಹಲವಾರು ವರ್ಷಗಳ ಕಾಲ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಶ್ರೀ ರವಿ. ಟಿ. ನಾಯ್ಕ್ ರವರು ಪ್ರಸ್ತುತ ಕುಂದಾಪುರದಲ್ಲಿ ನೆಲೆಯಾಗಿದ್ದು ಅವರ ಅಭೂತಪೂರ್ವ ಸಮಾಜ ಸೇವಾ ಕೈಂಕರ್ಯಗಳು ಇತರರಿಗೆ ಮಾದರಿಯಾಗಿ ಕಂಗೊಳಿಸುತ್ತದೆ.

ರಾಜ್ಯಪ್ರಶಸ್ತಿ ವಿಜೇತ ಕುಂದಾಪುರದ ಹೆಸರಾಂತ ವಿದ್ಯಾರಂಗ ಸಂಸ್ಥೆಯ ಅಂಗಸಂಸ್ಥೆ ವಿದ್ಯಾನಿಧಿ ಯೋಜನೆಯ ಅಧ್ಯಕ್ಷರಾಗಿ ತನ್ಮೂಲಕ ಬಾಂಧವರ ಶಿಕ್ಷಣಕ್ಕೆ ಪ್ರೇರಣೆಯಾಗುವಂತಹ ಹಲವಾರು ನೂತನ ಪ್ರಯೋಗಗಳ ಮೂಲಕ ಸ್ಪೂರ್ತಿ ಕೊಟ್ಟ ವ್ಯಕ್ತಿತ್ವ.

ಶಾಲಾ-ಕಾಲೇಜು ಜೀವನದಲ್ಲಿ ಕ್ರೀಡಾಪಟುಗಳಾಗಿ ಮುಂಚೂಣಿಯಲ್ಲಿ ಬೆಳೆದವರು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹಾರಾಷ್ಟ್ರ ಸ್ಟೇಟ್ ಅನ್ನು ಪ್ರತಿನಿಧಿಸಿದ ಕೀರ್ತಿ, ವರ್ಷಂಪ್ರತಿ ನೆರವೇರುವ ಸಮಾಜದ ಪ್ರತಿಷ್ಠಿತ ಧಾರ್ಮಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ ಕಳೆದ 25 ವರ್ಷಕ್ಕೂ ಮಿಗಿಲಾಗಿ ಮುಂಬೈ ತಂಡದೊಂದಿಗೆ ಪ್ರತಿನಿಧಿಸಿ ಸಮಾಜಕ್ಕೆ ಸ್ಪೂರ್ತಿಯಾದ ವ್ಯಕ್ತಿತ್ವ, ಹೆಮ್ಮೆಯಿಂದ ಗುರುತಿಸಿಕೊಂಡ ಖಾರ್ವಿ ಸಮುದಾಯ ಭವನದ ರೂವಾರಿಗಳಲ್ಲಿ ಒಬ್ಬರು ಸಮುದಾಯ ಭವನಕ್ಕಾಗಿ ತನು-ಮನ-ಧನ ಸೇವೆ.

ಪರವೂರಿನಲ್ಲಿ ಉದ್ಯಮಿಯಾಗಿ ರೂಪುಗೊಂಡರೂ, ಹುಟ್ಟೂರಿನ ಸಮಾಜದ ಬಡಜನರ ಕಷ್ಟ ಕಾರ್ಪಣ್ಯಗಳು ಅವರನ್ನು ಬಹುವಾಗಿ ಕಾಡುತ್ತಿತ್ತು ಬಡತನದ ರೇಖೆಯಲ್ಲಿ ಬಳಲುತ್ತಿರುವ ಸಮಾಜದ ಬಡಜನರಿಗೆ ಏನಾದರೂ ಸಹಾಯ ಮಾಡಬೇಕೆಂಬ ಅವರ ಸಂಕಲ್ಪಕ್ಕೆ ಅವರ ಧರ್ಮಪತ್ನಿ ಮೂಲ ಪ್ರೇರಣೆಯಾದರು ಹತ್ತು ಹಲವು ಕಡೆ ಸಮಾಜದ ಬಡ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ರವಿ. ಟಿ. ನಾಯ್ಕ್ ದಂಪತಿಗಳು ಇದೀಗ ತಮ್ಮ ಸ್ವಂತ ಖರ್ಚಿನಲ್ಲಿ ಕೋಡಿಕನ್ಯಾನದಲ್ಲಿ ಜಲಜ ಖಾರ್ವಿ ಎಂಬ ಬಡ ಮಹಿಳೆಗೆ ಮನೆಯೊಂದನ್ನು ಕಟ್ಟಿ ಸಮರ್ಪಿಸುತ್ತಿದ್ದಾರೆ.

ಈ ಮಹಿಳೆ ಬೇರೆಯವರ ಜಾಗದಲ್ಲಿ ಪುಟ್ಟ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಳು ಇವರಿಗೆ ರವಿ ನಾಯ್ಕ್ ರವರು ಮನೆ ಕಟ್ಟಿ ಕೊಡುವ ವಿಚಾರ ತಿಳಿದು ಜಾಗದ ಮಾಲೀಕರು ಸಂತಸಗೊಂಡು ಮನೆ ಕಟ್ಟಿ ಕೊಳ್ಳಲು ಉದಾರ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದಾರೆ. ಇಂದು ಶುಭ ಶುಕ್ರವಾರ “ಶ್ರೀ ಮೂಕಾಂಬಿಕಾ “ ಮನೆಯು ಫಲಾನುಭವಿ ಬಡ ಮಹಿಳೆ ಜಲಜಾರಿಗೆ ಹಸ್ತಾಂತರವಾಗಲಿದ್ದು, ನೆಮ್ಮದಿಯ ಸೂರು ಒದಗಿಸಿಕೊಟ್ಟ ಶ್ರೀ ರವಿ. ಟಿ. ನಾಯ್ಕ್ ದಂಪತಿಗಳಿಗೆ ಜಲಜಾ ಹೃದಯಂತಾರಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಸುದ್ದಿಗಾಗಿ ಸೇವೆ ಮಾಡಿದವರಲ್ಲ ಸದ್ದಿಲ್ಲದೇ ಸೇವೆ ಸಲ್ಲಿಸಿದವರು ಸಮಾಜದ ಸೇವೆಗೆ ತಮ್ಮನ್ನು ವಿಧೇಯಿಸಿಕೊಂಡು ಹಗಲಿರುಳು ದಣಿವಿಲ್ಲದ ಅವಿರತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ರವಿ. ಟಿ. ನಾಯ್ಕ್ ರಂತಹ ಹೃದಯವಂತರು ಸದಾ ಕಾಲ ಸಮಾಜದ ಪಾಲಿಗೆ ಪ್ರಾತಃಸ್ಮರಣೀಯರಾಗಿರುತ್ತಾರೆ.

ಅವರ ಅಮೃತ ಹಸ್ತದಿಂದ ಮತ್ತಷ್ಟು ಸಮಾಜ ಸೇವೆಯ ಕೈಂಕರ್ಯಗಳು ಸಮರ್ಪಿತವಾಗಲಿ ಎಂದು ಹಾರೈಸುತ್ತಾ ಶ್ರೀ ರವಿ. ಟಿ. ನಾಯ್ಕ್ ದಂಪತಿಗಳಿಗೆ ಶುಭವನ್ನು ಹಾರೈಸುತ್ತೇನೆ.

ಸುಧಾಕರ್ ಖಾರ್ವಿ
www.kharvionline.com

9 thoughts on “ಸತ್ಕಾರ್ಯದ ಸತ್ಪರುಷ ಶ್ರೀ ರವಿ. ಟಿ. ನಾಯ್ಕ್

  1. ಶ್ರೀ ರವಿನಾಯ್ಕ್ ದಂಪತಿಗಳು ಕೈಗೊಂಡಿರುವ ಸಮಾಜ ಸೇವಾ ಕೈಂಕರ್ಯಗಳಲ್ಲಿ ಮಲ್ಲಿಗೆಯ ಕಂಪಿದೆ.ಶ್ರೀ ಗಂಧದ ಶ್ರೇಷ್ಠ ಪರಿಮಳವಿದೆ.ಮಿಗಿಲಾಗಿ ಮಾನವೀಯ ಸ್ಪರ್ಶ ವಿದೆ.ಈ ಶ್ರೇಷ್ಠತೆಗಳು ಕಾಲವೂ ಕೂಡಾ ಅಳಿಸಲು ಆಳುಕುವಂತಹ ಹೆಜ್ಜೆ ಗುರುತುಗಳನ್ನು ದೃಡವಾಗಿ ದಾಖಲಿಸಿದೆ.ಅವರ ಈ ಮಾನವೀಯ ಅಭೂತಪೂರ್ವ ಸಾಧನೆಗೆ ಸಾವಿರದ ನಮನಗಳು🙏🙏🙏🙏🙏👍👍👍👍👍👌👌👌👌👌

  2. ರವಿ ನಾಯ್ಕ್ ದಂಪತಿಗಳ ಕುರಿತ ಲೇಖನ ಸಕಾಲಿಕವಾದದ್ದು. ಇವರನ್ನು ಖಾರ್ವಿ ಸಮಾಜದ ಕರ್ಣ ಎಂದೇ ಹೇಳಬಹುದು. ಕೊಟ್ಟೂ, ಕೊಡದಂತಿರುವ ಇವರ ನಿಸ್ವಾರ್ಥ ಕಾಯಕ, ಸರಳತೆಯ ಮಾದರಿ ವ್ಯಕ್ತಿತ್ವ ಎಲ್ಲರಿಗೂ ಮಾದರಿ..

  3. ರವಿ ನಾಯ್ಕ್ ದಂಪತಿಗಳ ಕುರಿತ ಲೇಖನ ಸಕಾಲಿಕವಾದದ್ದು. ಇವರನ್ನು ಖಾರ್ವಿ ಸಮಾಜದ ಕರ್ಣ ಎಂದೇ ಹೇಳಬಹುದು. ಕೊಟ್ಟೂ, ಕೊಡದಂತಿರುವ ಇವರ ನಿಸ್ವಾರ್ಥ ಕಾಯಕ, ಸರಳತೆಯ ಮಾದರಿ ವ್ಯಕ್ತಿತ್ವ ಎಲ್ಲರಿಗೂ ಮಾದರಿ..

  4. ಉತ್ತಮ ಲೇಖನ. ರವಿ ನಾಯ್ಕ್ ರವರ ಉತ್ತಮ ಕೆಲಸ ಈಗೆಯೇ ಮುಂದುವರಿಯಲಿ.
    Best wishes to kharvi online.

  5. ಸೇವೆಯೆಂಬ ಯಜ್ನದಲ್ಲಿ ಸಮಿತೆಯಂತೆ ಸವೆಯುವ

    ಈ ಮಾತು ನಮ್ಮ ರವಿ ಅಣ್ಣನವರಿಗೆ ಒಪ್ಪುವಂತ ಮಾತು. ಸಮಾಜ ನಮಗೆ ಏನು ಕೊಟ್ಟಿದೆ ಎಂದುಕೊಳ್ಳುವುದಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ದೂರದ ಮುಂಬಯಿಯಿಂದ ಮನಸ್ಸಾದಾಗಲೆಲ್ಲ ಊರಿಗೆ ಬಂದು ಸಮಾಜ ಮುಖಿ ಕಾರ್ಯಕ್ರಮಗಲ್ಲಿ ಸಕ್ರೀಯ ವಾಗಿ ಭಾಗವಹಿಸಿ ತಮ್ಮ ಶಕ್ತಿಮೀರಿ ಸಹಾಯಮಾಡುವ ಮನಸುಳ್ಳ ರವಿ ಅಣ್ಣ ಇತರರಿಗೂ ಮಾದರಿಯಾಗಿ ನಿಲ್ಲುತ್ತಾರೆ.

  6. ಸಮಾಜಕ್ಕೆ ಏನೋ ಅಲ್ಪ ಸ್ವಲ್ಪ ಮಾಡಿಯೋ ಅಥವಾ ಏನೂ ಮಾಡದೆ ಚಾವಣಿಯ ಮೇಲೆ ನಿಂತು ಸಮಾಜದಿಂದ ಗಮನ ಮತ್ತು ಗೌರವವನ್ನು ಒತ್ತಾಯ ಪೂರಕವಾಗಿ ಕೇಳುವ ಈ ಜಮಾನದಲ್ಲಿ … ರವಿಯಣ್ಣ ಮತ್ತು ಪದ್ಮಕ್ಕರಂತಹ ಒಳ್ಳೆಯ ಮನಸಿನವರು … ಮೌನವಾಗಿ ಸಮಾಜಕ್ಕಾಗಿ ತಮ್ಮಿಂದ ಸಾಧ್ಯವಾದಷ್ಟು ನೆರವಾಗುತ್ತಾರೆ. ಆ ದೇವರು ಅವರಿಬ್ಬರಿಗೆ ಹೆಚ್ಚಿನ ಆಯುರ್, ಆರ್ಯೋಗ್ಯಾ ಮತ್ತು ಐಶ್ವರ್ಯಗಳನ್ನು ಅನುಗ್ರಹಿಸಿ ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ತೋರಿಸುತ್ತೇನೆ….and thanks a lot Padmakka and Ravianna
    ಅವರ ಬಗ್ಗೆ ಆರ್ಥಿಕ ಸಹಾಯ ಹಸ್ತದ ವಿಷಯ ಒಂದೆಡೆ ಆದರೆ, ಜ್ಞಾನ ಮತ್ತು ಅನುಭವದ ಮಾತುಗಳನ್ನು ಹಂಚಿಕೊಳ್ಳುವಾಗ ಸಹ ಅವರು ತುಂಬಾ ಉದಾರಿಗಳು. ಒಬ್ಬ ಉದ್ಯಮಿಯಾಗ ಬೇಕೆಂಬ ಆಕಾಂಕ್ಷೆಯೊಂದಿಗೆ, ನಾನು ಅವರೊಂದಿಗೆ ಅನೇಕ ಡಿಸ್ಕಷನ್ನ ಮಾಡಿದೆನೇ , ಅವಾಗ ಅವರು ಹೇಳಿದ ಯಾವಾಗಲೂ ಅಭಿಪ್ರಾಯಗಳು ಮತ್ತು ಅನುಭವದ ಮಾತುಗಳು ನನಗೆ ಸಾಕಷ್ಟು ಸಹಾಯ ಮಾಡಿದೆ. ರವಿಯಣ್ಣ ನಂತಹ ನಮ್ಮ ಸಮುದಾಯದಲ್ಲಿನ ಕ್ರಿಯಾತ್ಮಕ ಮತ್ತು ಬಹುಮುಖಿ ವ್ಯಕ್ತಿತ್ವಗಳನ್ನು ಗುರುತಿಸಬೇಕು ಮತ್ತು ಗೌರವಿಸಬೇಕು, ಇದು ನಮ್ಮ ಸಮುದಾಯಕ್ಕೆ ಹಲವು ವಿಧಗಳಲ್ಲಿ ಬಹಳ ಮುಖ್ಯವಾಗಿದೆ.
    Good job KharviOnline

  7. ನಮ್ಮ ಸಮಾಜದ ಬಡಜನ‌ರ ಉದ್ದಾರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ಸಹೃದಯಿ ವ್ಯಕ್ತಿ…..
    ನಾನೊಂದ್ಸಲ ಬಡಪ್ರತಿಭೆಯ ಸಹಾಯಕ್ಕಾಗಿ ಇವರ ಮನೆಗೆ ಕರಕೊಂಡು ಹೋದಾಗ ತುಂಬಾ ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ಮಾತಾಡಿಸಿ ಉಪಚಾರ ಮಾಡಿದ್ರು, ಪ್ರತಿಭೆಗೆ ಧನಸಹಾಯ ಕೂಡ ಮಾಡಿದ್ರು ಸ್ವಲ್ಪನೂ ಅಹಂ ಇಲ್ಲ ಎಲ್ಲಾರ ಜೊತೆ ಸಾಮಾನ್ಯ ವ್ಯಕ್ತಿಯಂತೆ ಇರುತ್ತಾರೆ…
    ಇವರಂತಹ ಸರಳ ಸದ್ಗುಣ ವ್ಯಕ್ತಿ ನಮ್ಮ ಸಮಾಜದಲ್ಲಿರುವುದು ನಮ್ಮ ಪುಣ್ಯ 🙏.

  8. Mr. Ravi Naik & Mrs. Padmavati R. Naik,
    You are back bone of our Konkan Kharvi Samaj. Your time devotion, dedication, love and contribution for the Samaj is always remembeing and admiral. I pray, May God will always give you strength and courage to continue such kind of good work.

Leave a Reply to Ram Prasanna Cancel reply

Your email address will not be published. Required fields are marked *