ಜಿಂದಾ ದೇವೇಂದ್ರ ಖಾರ್ವಿ ಎಂಬ ಆಪತ್ಭಾಂದವ

ಸಾವಿನ ಚಕ್ರವ್ಯೂಹದಲ್ಲಿ ಸಿಲುಕಿದ ಹಲವರ ಪ್ರಾಣ ಉಳಿಸಿದ ಅಭಿಮನ್ಯು ತನ್ನ ಪ್ರಾಣದ ಹಂಗನ್ನೆ ಮರೆತು ಇನ್ನೊಬ್ಬರ ಪ್ರಾಣವನ್ನು ರಕ್ಷಣೆ ಮಾಡುವವ ಸದಾ ಎಲ್ಲರ ಮನಸ್ಸಲ್ಲಿ ಮನೆ ಮಾಡಿ ಕೊಂಡಿರುತ್ತಾನೆ.

ಕುಂದಾಪುರದ ರಾಮ ಖಾರ್ವಿ ಪುತ್ರ ದೇವೇಂದ್ರ ಖಾರ್ವಿ ಬಾಲ್ಯದಿಂದಲೂ ಸಾಹಸಿ ನೀರಿನಲ್ಲಿ ಮೀನಿನಂತೆ ವೇಗವಾಗಿ ಈಜುವ ಈತ ಅದ್ಭುತ ಈಜುಗಾರ ಮತ್ತು ಮುಳುಗುಗಾರ ನೂರಾರು ಪ್ರಾಣ ಉಳಿಸಿದಾತ ಪೋಲಿಸ್ ಇಲಾಖೆ ಮತ್ತು ಅಗ್ನಿ ಶಾಮಕ ದಳಕ್ಕೆ ಈತ ಆಪ್ತ ಮಿತ್ರ ಅದೆಷ್ಟೋ ಹೆಣಗಳನ್ನು ನೀರಿನ ಆಳದಿಂದ ಹೆಗಲ ಮೇಲಿರಿಸಿ ಕೊಂಡು ಮೇಲಕ್ಕೆ ಎದ್ದ ಜಿಂದಾ ದೇವೆಂದ್ರ ಖಾರ್ವಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ 1992 ರಲ್ಲಿ ರಜ ದಿನದಲ್ಲಿ ನದಿ ನೀರಿನಲ್ಲಿ ಈಜುತ್ತಿದ್ದ ಮಕ್ಕಳಿಬ್ಬರನ್ನು ನೀರು ಪಾಲಾಗುವ ಮುನ್ನವೇ ಹಾರಿ ರಕ್ಷಿಸಿದ.

ಆನಗಳ್ಳಿ ಹೊಳೆಯಲ್ಲಿ ವಿಕ್ಟರ್, ವಿಲ್ಫ್ರೆಡ್ ಹಾಗು ಇನ್ನೊಬ್ಬ ಒಟ್ಟು 3 ಹೆಣಗಳು ಆಳದಲ್ಲಿ ಮಲಗಿತ್ತು ಪೋಲಿಸ್ ಇಲಾಖೆ ಮತ್ತು Fire ಬ್ರಿಗೇಡ್ ಗೆ ತಲೆ ಬಿಸಿ ಆದಾಗ ನೆನಪಾಗಿದ್ದೆ ಈ ಜಿಂದಾ 30 ಅಡಿ ಆಳಕ್ಕೆ ಹಾರಿದ ಜಿಂದಾ ಮೂರು ಹೆಣಗಳನ್ನು ಹೆಗಲ ಮೇಲಿರಿಸಿ ತ್ರಿವಿಕ್ರಮ ರಾಜನಂತೆ ಎದ್ದು ಮೇಲಕ್ಕೆ ಬಂದಾಗ ಪೊಲೀಸರೇ ಸಲ್ಯೂಟ್ ಹೊಡೆದರು ಕೊಲೆ ಕೇಸ್ ಒಂದರಲ್ಲಿ ಹತ್ಯೆ ಮಾಡಿದ್ದ ಆಯುಧಗಳನ್ನು ಹುಡುಕಿ ತರಲು ಪೋಲಿಸ್ ಇಲಾಖೆ ಜಿಂದಾನನ್ನು ಕೇಳಿಕೊಂಡಾಗ 30 ಅಡಿ ಆಳದ ಬಾವಿಗೆ ಹಾರಿ ಹುಡುಕಿ ತಂದು ಕೊಟ್ಟ ಸಾಹಸಿ ಈ ಜಿಂದಾ ಹೀಗೆ ಮುಳುಗುತ್ತಿದ್ದ ರಿಕ್ಷಾ ಡ್ರೈವರ್, ಮೀನುಗಾರರನ್ನು, ಮಕ್ಕಳನ್ನು ಕಾಪಾಡಿದ ವೀರ ಸತ್ತು ಬದುಕಿ ಬಂದವರ ಪಾಲಿನ ದೇವರು ಈ ಜಿಂದಾ ದೇವೇಂದ್ರ ಖಾರ್ವಿ ಈತನ ಸಾಹಸಕ್ಕೆ ಲೆಕ್ಕವೇ ಇಲ್ಲ ಹಲವಾರು ಮನೆಯ ದೀಪ ಉಳಿಸಿದ ಆಪತ್ಬಾಂಧವ ಈತ ಶೌರ್ಯ ಪ್ರಶಸ್ತಿ ಗೆ ಸೂಕ್ತ ವ್ಯಕ್ತಿ.

ಇಂತಹ ವ್ಯಕ್ತಿಯನ್ನು ಸರಕಾರ ಗಮನಿಸಿ ಪೋಲಿಸ್ ಇಲಾಖೆಯಲ್ಲಿ ಅಥವಾ ಫೈರ್ ಬ್ರಿಗೇಡ್ ನಲ್ಲಿ ಕೆಲಸ ಕೊಡ ಬಹುದಿತ್ತು ಸಹಾಯ ಪಡೆದ ಪೋಲಿಸ್ ಮತ್ತು ಫೈರ್ ಇಲಾಖೆ ಶಿಫಾರಸ್ಸು ಮಾಡ ಬಹುದಿತ್ತು. ಆದರೆ ಸೌಮ್ಯ ಸ್ವಭಾವದ ದೇವೇಂದ್ರ ನನ್ನು ಎಲ್ಲರೂ Use and Throw ಮಾಡಿದರು ಆತನಿಗೂ ಒಂದು ಫ್ಯಾಮಿಲಿ ಇದೆ ಎನ್ನುದನ್ನ ತಿಳಿಯ ಬೇಕಿತ್ತು ನೀರಿನ ಆಳಕ್ಕೆ ಹಾರುವಾಗ ಜಿಂದಾನಿಗೂ ಅವನ ಹೆಂಡತಿ ಮಕ್ಕಳು ಅಪ್ಪ ಅಮ್ಮ….ನೆನಪಾಗುತ್ತಿದ್ದರು ಎನ್ನುವ ಸೂಕ್ಷ್ಮವಿಚಾರ ಈ ಇಲಾಖೆ ಅರ್ಥ ಮಾಡಿ ಕೊಳ್ಳ ಬೇಕಿತ್ತು. ಅಂದಿನ ಹೆಬ್ಬುಲಿ ಜಿಂದಾ ಈಗ ಹೇಗೆ ಇದ್ದಾನೆ.

ಜಿಂದಾ ಜಿಂದಾಗಿನೇ ಕಳೆದು ಕೊಂಡ ನೂರಾರು ಜನರ ಬದುಕಿಗೆ ದೀಪ ಅದ ಜಿಂದಾನ ಬದುಕ್ಕಲ್ಲಿ ಕತ್ತಲು, ಈಗಲಾದರೂ ಸರಕಾರ ಈತನ ಕಡೆ ಗಮನ ಹರಿಸಲಿ ಪೋಲಿಸ್ ಮತ್ತು ಅಗ್ನಿ ಶಾಮಕ ಅಧಿಕಾರಿಗಳು ಈತನ ಸಾಹಸವನ್ನು ಸರಕಾರದ ಗಮನ ಸೆಳೆಯಲಿ.

ಜಿಂದಾಗೆ ಜಿಂದಾಬಾದ್

ರವಿ ಕುಮಾರ್ ಗಂಗೊಳ್ಳಿ

One thought on “ಜಿಂದಾ ದೇವೇಂದ್ರ ಖಾರ್ವಿ ಎಂಬ ಆಪತ್ಭಾಂದವ

  1. wow, what a daredevil and helpful personality… I remember jindanna as a well-built charming personality … when we used to come to our ajji’s house in Kundapura during summer vacation. Our relatives in Kharvi Melkeri would have at least one rescue story about him.
    But as the author Raviji mentions it is sad to see his help being “used and thrown” … hope at least some sort of recognition is given to him in terms of job or kind.

Leave a Reply

Your email address will not be published. Required fields are marked *