ಭಟ್ಕಳ: ಕೊಂಕಣಿ ಖಾರ್ವಿ ಸಮಾಜ ಮತ್ತು ಶ್ರೀ ಕುಟುಮೇಶ್ವರ ಸೌಹಾರ್ದ ಭಟ್ಕಳ ಇದರ ವತಿಯಿಂದ ವನಮಹೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಿಂದ ಜನರಲ್ಲಿ ಪರಿಸರ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಲಾಯಿತು ಗಣ್ಯರು ನಾವು ಹೇಗೆ ಪರಿಸರ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಮಾತನಾಡಿ ‘ಕಾಡು ಬೆಳೆಸಿ ನಾಡು ಉಳಿಸಿ’, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಸಂದೇಶ ಸಾರಿದರು ಮನೆಗೊಂದರಂತೆ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು, ಪ್ರಾಣಿ ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಸಲಹೆ ನೀಡಲಾಯಿತು.
ಸಮಾಜದ ಅಧ್ಯಕ್ಷರಾದ ಸುಬ್ರಾಯ ಖಾರ್ವಿ, ಉಪಾಧ್ಯಕ್ಷರಾದ ಕೇಶವ ಖಾರ್ವಿ, ಶ್ರೀ ಕುಟುಮೇಶ್ವರ ಸೌಹಾರ್ದ ಅಧ್ಯಕ್ಷರಾದ ರಾಮ ಖಾರ್ವಿ, ಉಪಾಧ್ಯಕ್ಷರಾದ ವಿಶ್ವನಾಥ್ ಖಾರ್ವಿ, ನಿರ್ದೇಶಕರಾದ ರಾಜೇಂದ್ರ ಖಾರ್ವಿ, ಕುಟುಮೇಶ್ವರ ಸೌಹಾರ್ದ ಮುಖ್ಯ ಕಾರ್ಯನಿರ್ವಾಹಕ ದತ್ತ ಖಾರ್ವಿ, ಸಿಬ್ಬಂದಿಗಳಾದ ರಾಮದಾಸ್ ಖಾರ್ವಿ, ಶ್ರೀಧರ್ ಖಾರ್ವಿ, ಈಶ್ವರ್ ಖಾರ್ವಿ, ರಾಮದಾಸ್ ಖಾರ್ವಿ, ದೀಪ ಖಾರ್ವಿ, ವೀಣಾ ಖಾರ್ವಿ ಉಪಸ್ಥಿತರಿದ್ದರು.
ವರದಿ: ಈಶ್ವರ್ ಖಾರ್ವಿ, ಭಟ್ಕಳ