ಸ್ವಚ್ಛ ಭಾರತ ಸ್ವಚ್ಛ ಮದ್ದುಗುಡ್ಡೆ ನಮ್ಮೆಲ್ಲರ ಪರಿಕಲ್ಪನೆಯಾಗಿರಲಿ

ಸ್ವಚ್ಛ ಭಾರತ ಸ್ವಚ್ಛ ಮದ್ದುಗುಡ್ಡೆ ನಮ್ಮೆಲ್ಲರ ಪರಿಕಲ್ಪನೆಯಾಗಿರಲಿ

ಕುಂದಾಪುರ ಪುರಸಭೆಯ ಮದ್ದುಗುಡ್ಡೆ ವಾರ್ಡ್ ನ ಕೃಷ್ಣ ಸಾ ಮಿಲ್ ಸಮೀಪ ಸಾರ್ವಜನಿಕ ಶೌಚಾಲಯ ಪಕ್ಕದ ರಿಂಗ್ ರಸ್ತೆಯಲ್ಲಿ ಕಸದ ರಾಶಿ ರಾಶಿ.

ಮದ್ದುಗುಡ್ಡೆಯ ರಿಂಗ್ ರೋಡಿನಲ್ಲಿ ಕಸದ ರಾಶಿ ರಾಶಿ ಬಿದ್ದಿದ್ದು ದಾರಿಹೋಕರು ದುರ್ನಾತದಿಂದ ಬೇಸತ್ತಿದ್ದಾರೆ ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ ಇಷ್ಟು ಮಾತ್ರವಲ್ಲದೆ ಬೀದಿನಾಯಿಗಳು ಕಸವನ್ನು ಎಳೆದಾಡುವುದರಿಂದ ರಸ್ತೆ ತುಂಬೆಲ್ಲಾ ಹರಡುತ್ತಿದೆ.

ದುರ್ನಾತದಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ನಿವಾಸಿಗಳನ್ನು ಕಾಡುತ್ತಿದೆ, ಇಂತ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಸದ ರಾಶಿ, ಬಿಯರ್ ಬಾಟಲಿ ಗಳು ಇನ್ನಿತರ ಹಾನಿಕಾರಕ ವಸ್ತುಗಳನ್ನು ನದಿಯ ದಡದಲ್ಲಿ ಎಸೆದು ಹೋಗಿರುವುದು ಬೇಸರದ ಸಂಗತಿಯೇ ಸರಿ.

ಪ್ರಕೃತಿ ರಮಣೀಯವಾದ ಪಂಚಾಗಂಗಾವಳಿ ನದಿಯ ತಟದಲ್ಲಿ ಸ್ವಚತೆಯ ವಿಚಾರದಲ್ಲಿ ಸ್ಥಳೀಯ ನಿವಾಸಿಗಳು, ಸ್ಥಳೀಯಾಡಳಿತ , ಸಂಘ ಸಂಸ್ಥೆಗಳು ಸೇರಿ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಂದ ಗಮನ ಸೆಳೆದ ಹಲವು ಪುರಾವೆಗಳು ನಮ್ಮ ಕಣ್ಮುಂದೆಯೇ ಇವೇ.

ಕಳೆದ 15 ದಿನಗಳ ಹಿಂದೆ ಸ್ಥಳೀಯ ಪುರಸಭೆ ಸದಸ್ಯರಾದ ಶ್ರೀ ರಾಘವೇಂದ್ರ ಖಾರ್ವಿಯವರು ಇದೇ ಸ್ಥಳದಲ್ಲಿ ಪುರಸಭೆ ಸಹಕಾರದಿಂದ ಸ್ವಚ್ಛತೆ ಮಾಡಿ ಸಾರ್ವಜನಿಕರಿಗೇ ಈ ರಸ್ತೆಯಲ್ಲಿ ಓಡಾಡಲು ಅನುಕೂಲ ಮಾಡಿ ಕೊಟ್ಟ ನಂತರವೂ ಅದೇ ರೀತಿಯಲ್ಲಿ ಕಸದ ತೊಟ್ಟಿ ಮಾಡುವ ಪ್ರಯತ್ನ ಮತ್ತೆ ನಡೆದಿದೆ.

ನಮ್ಮ ಪರಿಸರದಲ್ಲಿ ಈ ರೀತಿಯ ಕಸದ ರಾಶಿ ಹಾಕಿ ಸ್ಥಳೀಯ ನಿವಾಸಿ ಗಳಿಗೆ ತೊಂದರೆ ಮಾಡಿ ಹೋಗುವವರ ವಿರುದ್ಧ ದಯವಿಟ್ಟು ಪುರಸಭೆ ಸದಸ್ಯರು ಹಾಗೂ ಪುರಸಭೆ ಮುಖ್ಯಾಧಿಕಾರಿಯವರು ಆದಷ್ಟು ಬೇಗ ಕ್ರಮ ಕೈಗೊಳ್ಳುವದು ಸೂಕ್ತ ಅನ್ನುವುದು ಸ್ಥಳೀಯ ನಿವಾಸಿಯಾದ ನನ್ನ ಅನಿಸಿಕೆ.

ಸ್ವಚ್ಛ ಭಾರತ ಸ್ವಚ್ಛ ಮದ್ದುಗುಡ್ಡೆ
ನಮ್ಮೆಲ್ಲರ ಪರಿಕಲ್ಪನೆಯಾಗಿರಲಿ.


ವರದಿ: ಅನಿಲ್ ಖಾರ್ವಿ, ಮದ್ದುಗುಡ್ಡೆ.

Leave a Reply

Your email address will not be published. Required fields are marked *