ನಮ್ಮ ಸುಂದರ ಕುಂದಾಪುರ ಹ್ರದಯಾ ಭಾಗದಲ್ಲಿರುವ ಪಂಚಗಾಂಗವಳಿ ನದಿಯ ಬಳಿ ನೆಲೆ ನಿಂತಿರುವ ನಮ್ಮ ಶಕ್ತಿಶಾಲಿ ದೇವತೆ ಶ್ರೀ ಮಹಾಕಾಳಿ ತಾಯಿ ಇಲ್ಲಿನ ಮೀನುಗಾರರಿಗೆ ಏನೇ ಕಷ್ಟ ಬಂದಾಗ ಆ ತಾಯಿ ಯಲ್ಲಿ ಮನಸಾರೇ ಕೇಳಿಕೊಂಡ್ರೇ ಸಾಕು ತನ್ನ ಮೀನುಗಾರರ ಕಷ್ಟವನ್ನು ಕ್ಷಣಥ೯ದಲ್ಲಿ ,ಮನೆಯವರ ಕಷ್ಟವನ್ನು ನೆರೆವೆರೆಸುತ್ತಾಳೆ.
ಪುಣ್ಯ ಭೂಮಿ ಯಾಗಿರುವ ಪಂಚಗಂಗಾವಳಿ ನಂಬಿ ಎಷ್ಟೋ ಮೀನುಗಾರರು ಜೀವನ ನಡೆಸುತ್ತಿದ್ದಾರೆ..ಅದ್ರೇ ಮಳೆಗಾಲ ಸಮಯದಲ್ಲಿ ಏನಾದ್ರು ನೆರೆ ಸಂಭವ ಬಂದರೆ ಆ ತಾಯಿ ಮೀನುಗಾರನ ರಕ್ಷಣೆ ನಿಂತು ಪ್ರತಿ ಸಾಲ ಕಪಾಡುತ್ತಾಳೆ.ಇದರ ಪ್ರತಿಫಲವಾಗಿ ಹಿಂದಿಗೂ ಇಲ್ಲೀ ಏನು ಅನುಹುತಾ ಆಗಿಲ್ಲ
ನಮ್ಮ ಜನಾಂಗದ ಪ್ರತಿಯೊಬ್ಬರ ಜೀವನ ಪ್ರಾರಂಭ ವಾಗುವುದು ಕೊನೆಯಾಗುದು ಈ ತಾಯಿಯ ಅನುಗ್ರಹದಿಂದ ಅಷ್ಟು ಶ್ರದ್ದಾ ಪೂವ೯ಕವಾಗಿ ನಮ್ಮ ಖಾವಿ೯ ಜನಾಂಗದ ಜನ ಪೂಜಿಸುತ್ತಾರೆ. ಈ ತಾಯಿ ದಯೆದಿಂದ ಎಲ್ಲರೂ ಸುಖವಾಗಿ ಜೀವನ ನಡೆಸುತ್ತಿದ್ದಾರೆ.
ಪರಶುರಾಮರು ಸ್ರಷ್ಟಿಸಿದ ಕರಾವಳಿ ತೀರ ದಲ್ಲಿ ಒಂದು ಭಾಗವಾಗಿರುವ ಈ ನಮ್ಮೂರು ಹಲವಾರು ಪ್ರಸಿದ್ದ ಧಾರ್ಮಿಕ ಭಕ್ತಿ ಕ್ಷೇತ್ರಗಳಾದ .ಕೊಲ್ಲುರು ಮೂಕಾಂಬಿಕಾ ,ಹಟ್ಟಿಯಾಂಗಡಿ,ಕುಂಭಾಶಿ ವಿನಾಯಕ,ಕಮಲ ಶಿಲೆ,ಕುಂದೇಶ್ವರ,
ಇಂತಹ ಹಲವು ಧಾಮಿ೯ಕ ಕ್ಷೇತ್ರ ಇರುವ ಸುಂದರ ತಾಣ ಕುಂದಾಪುರ ಅಂತ ಶ್ರೇಷ್ಠ ಧಾಮಿ೯ಕ ಕ್ಷೇತ್ರವಾಗಿರುವ ಉಡುಪಿ ಜೆಲ್ಲೆಯಲ್ಲಿ ಕುಂದಾರಾಜನ ಆಳಿದ ಕ್ಷೇತ್ರದಲ್ಲಿ ಕುಂದಾಪುರ ಮಧ್ಯ ಭಾಗದಲ್ಲಿ ನೆಲೆ ನಿಂತಿದ್ದಾಳೆ ಮಹಾಕಾಳಿ ತಾಯಿ.
ಶ್ರೆಂಗೇರಿ ಶ್ರೀ ಶಾರದ ಪಿಠಾಧೀಶಾರಾದ ಶ್ರೀ ಶ್ರೀ ಮಧಭಿನವ ವಿದ್ಯಾ ತೀರ್ಥ ಮಹಾಸ್ವಾಮಿಗಳವರ ಅಮ್ರತ ಹಸ್ತಗಳಿಂದ ಶೀಲಾನ್ಯಾಸ ಹಾಗೂ ವೀರೆಂದ್ರ ಹೆಗೆಡೆ ಗುರು ಗಳ ಆಶೀರ್ವಾದದಿಂದ ಶ್ರೀ ಮಹಾಕಾಳಿ ದೇವಸ್ಥಾನ* ಅವರ ಕಾಲ ಗುಣದಿಂದ ಹಾಗೂ ಜನಗಳು ಹಾಗೂ ರಾಜಕೀಯಾ ವ್ಯಕ್ತಿಗಳ ಸಹಾಯದಿಂದ ಇಂದೂ ಮಹಾಕಾಳಿ ದೇವಸ್ಥಾನ ಹೆಚ್ಚಿನ ಅಭಿವೃದ್ಧಿಯಾಗಿ ಆರಾಧ್ಯ ಕ್ಷೇತ್ರವಾಗಿ ಯಶ್ವಸಿ ಸಾಧಿಸಿದೆ.
ಈ ಅಭಿವೃದ್ಧಿಗೆ ಪ್ರಮುಖ ಕಾರಣ. ನಮ್ಮ ಹಿರಿಯಾರು ಹಾಗೂ ದೇವಸ್ಥಾನದ ಸದಸ್ಯರು ಅವರ ಶ್ರಮದಿಂದ ಈ ಮಟ್ಟಕ್ಕೆ ಆ ಮಹಾಕಾಳಿ ತಾಯಿ ಶಕ್ತಿಶಾಲಿಯಾಗಿ ನೆಲೆ ನಿಂತಿದ್ದಾಳೆ.
ತಾಯಿಯಾ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು ನೆಡೆದಿದ್ದು ಅತೀ ವಿಷೇಶವಾಗಿದೆ ಮತ್ತು ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾಗಿರುದರ ಸಾಕ್ಷಿಯಾಗಿದ್ದು ತುಂಬಾ ಕುಷಿಯಾ ವಿಚಾರ ದಿನಕ್ಕೆ ನೂರಾರು ಜನ ತಾಯಿಯಾ ಅಲಂಕಾರ ನೋಡಿ ಆಶಿ೯ವಾದ ಪಡೆದ ಮಹಾಕಾಳಿ ತಾಯಿ ಯನ್ನು ನೋಡಿ ಕಣ್ತುಂಬಿ ಕೊಳ್ಳುತ್ತಾರೆ.
ಸುಂದರ ಕುಂದಾಪುರದಲ್ಲಿ ನೆಲೆ ನಿಂತಿರುವ ಶ್ರೀ ಮಹಾಕಾಳಿ ಅಮ್ಮನವರು ನೆಲೆಸಿರುವ ಈ ಸನ್ನಿಧಾನ ದಲ್ಲಿ ಮಹಾಕಾಳಿ ಅಮ್ಮನನ್ನು ನಮ್ಮ ಸಮಾಜದ ಜನ ಶ್ರದ್ದಾಪೂವ೯ಕವಾಗಿ ನಮ್ಮ ಸಮಾಜದ ಜನ ಹಾಗೂ ಪರರೂ ಜನ ಜಾತಿ ,ಮತ, ಭೇಧವಿಲ್ಲದೇ ಶ್ರದ್ದೆ ಭಕ್ತಿಯಿಂದ ಅಲ್ಲಿನ ಜನ ನಮ್ಮ ವಿಘ್ನಗಳನ್ನು ಪರಿಹಾರ ಮಾಡಿ ಸುಖ ಜೀವನ ನೀಡು ಎಂದು ಕೇಳಿಕೊಳ್ಳುತ್ತಾರೆ..
ಅದರ ಪ್ರತಿಫಲ ಇಂದೂ ಎಷ್ಟೋ ಕುಟುಂಬಗಳು ಮಹಾಕಾಳಿ ತಾಯಿ ಅನುಗ್ರಹ ಹಾಗೂ ಮಹಾಕಾಳಿ ಸನ್ನಿಧಿ ದಾನದಲ್ಲಿ ಆರಾಧಿಸಲು ಗಣೇಶ ನ ಆಶೀರ್ವಾದದಿಂದ ಎಷ್ಟೋ ಕುಟುಂಬಗಳು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.. ಅದರ ಪ್ರತಿಫಲವಾಗಿ ತಾಯಿಯಾ ಸನ್ನಿಧಾನದಲ್ಲಿ ಪ್ರತಿ ವಷ೯ ಅನ್ನ ಸಂತಪ೯ಣೆ ನೀಡಿ ತಮ್ಮ ಆಸೆ ಹಿಡೇರುಸುತ್ತಾರೆ
ಇದರ ಪ್ರತಿಫಲವಾಗಿ ತಾಯಿಯಾ ಸನ್ನಿಧಾನದಲ್ಲಿ ಭಕ್ತರ ಸಂಖ್ಯೆ ಗಣನೀಯಾವಾಗಿ ಏರಿಕೆಯಾಗಿದೆ.
ಚೇತನ ಯುವ