ನಾಡದೋಣಿ ಮೀನುಗಾರನಾದ (ವೀರೇಶ್ವರ ಪ್ರಸಾದ್) ಶ್ರೀ ನಿವಾಸ್ ಖಾರ್ವಿ ದಾವನ ಮನೆಯವರ ಹೆಂಡತಿ ತುಂಬು ಗರ್ಭಿಣಿ ಜ್ಯೋತಿ ಖಾರ್ವಿ ಇವರು ಮೂರು ದಿನದ ಹಿಂದೆ ತೀವ್ರ ರಕ್ತ ಸ್ರಾವ ಹಾಗೂ ಹೆರಿಗೆ ನೋವಿನಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಕೂಡ ಸರಿಯಾದ ಚಿಕಿತ್ಸೆ ಹಾಗೂ ಮುಂಜಾಗ್ರತ ಕ್ರಮವಹಿಸದೇ ರಕ್ತ ಸ್ರಾವ ಆಗುತ್ತಿರುವ ಮಹಿಳೆಯನ್ನು ಮೂರು ದಿನ ಕಾಯಿಸಿ ಸ್ವಭಾವಿಕ ಹೆರಿಗೆ ಮಾಡುವ ನೆಪವೊಡ್ಡಿ ನಾವಜಾತ ಮಗುವನ್ನು ಸಾವಿನ ದವಡೆಗೆ ತಳ್ಳಿ ತದ ನಂತರ ಕೇಸ್ ಕೊಟ್ಟರೆ ನಿಮಗೆ ತೊಂದರೆಯಾಗುತ್ತೆ ಎಂದು ಹೆದರಿಸಿದ್ದಾರೆ.
ಅಷ್ಟೇ ಅಲ್ಲದೇ ಇಲ್ಲಿ ಅನೇಕ ಪ್ರಕರಣಗಳು ಹೀಗೆ ಆಗಿರುವುದು ಬೆಳಕಿಗೆ ಬಂದಿರುತ್ತದೆ.ಇನ್ನಷ್ಟು ಜನರಿಗೆ ತೊಂದರೆ ಆಗಬಾರದೆನ್ನುವ ನಿಟ್ಟಿನಲ್ಲಿ ವೈದ್ಯಧಿಕಾರಿಗಳನ್ನು ಅಮಾನತ್ತು ಮಾಡುವ ತನಕ ಮೀನುಗಾರರ ಅಹೋರಾತ್ರಿ ಧರಣಿ ನಡೆಯುತ್ತಿದ್ದು ನಾಳೆಯೂ ಮುಂದುವರಿಯಲಿದೆ, ಅಲ್ಲದೇ ಕುಂದಾಪುರ ಜನತೆಯಿಂದ ಕುಂದಾಪುರ ಬಂದ್ ಹಾಗೂ ಬೆಳಿಗ್ಗೆ 9:00 ಗಂಟೆಗೆ ಮೌನ ಪ್ರತಿಭಟನೆ ಇದ್ದು ನ್ಯಾಯಕ್ಕಾಗಿ ಎಲ್ಲರೂ ಒಂದಾಗಿ ಬಂದು ಸೇರಬೇಕಾಗಿ ಗಂಗೊಳ್ಳಿ ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ಯಶವಂತ್ ಗಂಗೊಳ್ಳಿ ಅವರು ವಿನಂತಿಸಿಕೊಂಡಿದ್ದಾರೆ.