ಶ್ರೀ ಮಹಾಂಕಾಳಿ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಈ ದಿನ ಗಂಗೊಳ್ಳಿ ಖಾರ್ವಿಕೇರಿ ಪರಿಸರದ ಜನರಿಗೆ ಹಲವು ದಶಕಗಳ ಕನಸು ನನಸಾದ ಸುದಿನ ಸರ್ಕಾರದ ಅನುದಾನ ಮತ್ತು ದಾನಿಗಳ ನೆರವಿನಿಂದ ನಿರ್ಮಿಸಲ್ಪಟ್ಟ ಶ್ರೀ ಮಹಾಂಕಾಳಿ ಹಿಂದೂ ರುದ್ರಭೂಮಿ ಲೋಕಾರ್ಪಣೆಗೊಂಡಿದೆ. ಈ ಪರಿಸರದ ಜನರು ಶವಸಂಸ್ಕಾರಕ್ಕೆ ಸೂಕ್ತವಾದ ಸ್ಮಶಾನವಿಲ್ಲದೇ ಹಲವು ವರ್ಷಗಳಿಂದ ಪರಿತಪಿಸುತ್ತಿದ್ದರು ಈ ಪರಿತಾಪವು ಪ್ರಯತ್ನದ ಹಾದಿಯಲ್ಲಿ ಸಿದ್ಧಿಸಿ ಸುಂದರವಾದ ರುದ್ರಭೂಮಿಯ ರೂಪದಲ್ಲಿ ಅನಾವರಣಗೊಂಡಿದೆ. ಗ್ರಾಮದ ಯುವ ಉತ್ಸಾಹಿ ಮುಂದಾಳು ರವಿಶಂಕರ್ ಖಾರ್ವಿಯವರ ನೇತೃತ್ವದಲ್ಲಿ ಮತ್ತು ಗುರು ಅಣ್ಣಪ್ಪಯ್ಯ ಖಾರ್ವಿ ಮತ್ತು ಸ್ನೇಹಿತರ ಸಹಭಾಗಿತ್ವದಲ್ಲಿ ಮೇಳೈಸಿ, ಪರಿಸರದ ಜನರ ಅಭೂತಪೂರ್ವ ಸಹಕಾರದಲ್ಲಿ ಹಿಂದೂ ರುದ್ರಭೂಮಿಯ ಕನಸು ಸಾಕಾರಗೊಂಡಿದೆ ರುದ್ರಭೂಮಿ ಎಂಬ ಕಲ್ಪನೆಗೆ ನಾವೀನ್ಯತೆಯ ಪರಿಕಲ್ಪನೆ ಹೊಸರೂಪ ನೀಡಿ ದಿವ್ಯತೆಯ ಭಾವನೆ ಮೈದಾಳುವಂತೆ ಮಾಡಿದೆ.ಅಷ್ಟೊಂದು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಹಿಂದೂ ರುದ್ರಭೂಮಿ ನಿರ್ಮಿಸಲ್ಪಟ್ಟಿದೆ.

ಈ ಸುಂದರ ರುದ್ರಭೂಮಿಯಲ್ಲಿ ಲಯಕರ್ತ ಶಿವನ ಭವ್ಯ ಮೂರ್ತಿ ವಿರಾಜಮಾನವಾಗಿದೆ ನೋಡುಗರ ದೃಷ್ಟಿಕೋನದಲ್ಲಿ ರುದ್ರಭೂಮಿಯ ಕಲ್ಪನೆ ಹೊಸ ಸ್ಪರ್ಶ ನೀಡಿದೆ ಮಹಾಶಿವರಾತ್ರಿಯ ಈ ಶುಭದಿನದಂದು ಹಿಂದೂ ರುದ್ರಭೂಮಿ ಲೋಕಾರ್ಪಣೆಯಾಗಿದ್ದು, ಶ್ರೀ ವಿರೇಶ್ವರ ದೇವಸ್ಥಾನದ ಅರ್ಚಕರ ಪವಿತ್ರ ಧಾರ್ಮಿಕ ಕಾರ್ಯದ ಪ್ರಸ್ತುತಿಯಲ್ಲಿ ಸಮಾಜಕ್ಕೆ ಸಮರ್ಪಣೆಯಾಗಿದೆ. ಈ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಆಗಬೇಕಾಗಿದೆ ಇದಕ್ಕೆ ಸರ್ವರ ಸಹಕಾರವನ್ನು ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಮತ್ತು ಜನರು ವಿಜ್ಞಾಪಿಸಿಕೊಂಡಿದ್ದಾರೆ.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ವಲಯದ ಯೋಜನಾಧಿಕಾರಿಗಳಾದ ವಿನಾಯಕ ಪೈ, ತ್ರಾಸಿ ವಲಯದ ಮೇಲ್ವಿಚಾರಕರಾದ ಚಂದ್ರು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ಶ್ರೀನಿವಾಸ ಖಾರ್ವಿ, ಸದಸ್ಯರಾದ ಶ್ರೀ ಕೇಶವ ಖಾರ್ವಿ, ಶ್ರೀ ರಾಘವೇಂದ್ರ ಪೈ. ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಉಪಾಧ್ಯಕ್ಷರಾದ ಸೂರ್ಯ ಖಾರ್ವಿ, ಕಾರ್ಯದರ್ಶಿ ದೀನೇಶ್ ಖಾರ್ವಿ, ಕಮಿಟಿ ಸದಸ್ಯರಾದ ಗಣ್ಯಾ ಶೇಷಪ್ಪ ಖಾರ್ವಿ, ಜಟಾಯಿ ರವಿ ಖಾರ್ವಿ, ಕೋಟಾನ್ ಸೂರ್ಯ ಖಾರ್ವಿ, ಶ್ರೀ ರಾಮದಾಸ್ ಖಾರ್ವಿ, ಎಂಕಣಿ ಅಣ್ಣಪ್ಪಯ್ಯ ಖಾರ್ವಿ, ಮುತ್ತಯ್ಯ ಖಾರ್ವಿ, ಮಲ್ಪೆ ರಾಘವೇಂದ್ರ ಖಾರ್ವಿ ,ನಾಗರಾಜ್ ಖಾರ್ವಿ, ಚಂದ್ರ ಖಾರ್ವಿ, ಪಿ.ಚಂದ್ರ ಖಾರ್ವಿ, ಪೊಕ್ಕೆ ಚಂದ್ರ ಖಾರ್ವಿ, ಮಹೇಶ್ ಖಾರ್ವಿ, ಚೇತನ್ ಖಾರ್ವಿ, ವೆಂಕಟೇಶ್ ಕೋಟಾನ್, ಪರಮೇಶ್ವರ್ ಕೋಟಾನ್, ಕೃಷ್ಣ ಕೋಟಾನ್ ಬಿ.ರಾಮದಾಸ್ ಖಾರ್ವಿ, ಭಾಸ್ಕರ್ ಖಾರ್ವಿ, ಚಂದ್ರ ಖಾರ್ವಿ ಲೈಟ್ ಹೌಸ್ ಪ್ರಮುಖರ ಉಪಸ್ಥಿತಿ

ವರದಿ: ಸುಧಾಕರ್ ಖಾರ್ವಿ
www.kharvionline.com

Leave a Reply

Your email address will not be published. Required fields are marked *