ಕುಂದಾಪುರ : ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, ಕುಂದಾಪುರ ಪುರಸಭೆಯ ಜನಸಂಖ್ಯೆ ಮೂವತ್ತು ಸಾವಿರಕ್ಕಿಂತ ಮೀರಿದೆ. ಲಸಿಕೆಯನ್ನು ಪಡೆಯಲು ಜನರು ತುಂಬಾ ಉತ್ಸಾಹಕತೆಯಿಂದ ಬರುತ್ತಲಿದ್ದು, ಲಸಿಕೆ ಸಿಗದೇ ವಾಪಾಸ್ಸು ಹೋಗುತ್ತಿದ್ದಾರೆ.
ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕೆಯನ್ನು ತಾವು ವಿತರಿಸಿ ಆಯಾಯ ಗ್ರಾಮ ಪಂಚಾಯತಿಯ ಜನತೆ ಲಸಿಕೆಯನ್ನು ಪಡೆಯುತ್ತಿದ್ದಾರೆ ಈ ಕ್ರಮಕ್ಕೆ ಜಿಲ್ಲಾಧಿಕಾರಿಯವರಿಗೆ ಧನ್ಯವಾದಗಳು. ಹಾಗೆಯೇ ನಮ್ಮ ಪುರಸಭಾ ವ್ಯಾಪ್ತಿಯ ಜನತೆಗೆ ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನು ಪಡೆಯಲು ವ್ಯವಸ್ಥೆ ಮಾಡುವಂತೆ ತಾವು ಅಧಿಸೂಚನೆ ನೀಡಬೇಕಾಗಿ ಕುಂದಾಪುರ ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಿನಂತಿಸಿದ್ದಾರೆ. ಸದ್ಯ ಎಲ್ಲಾ ಸುತ್ತಮುತ್ತಿನ ಗ್ರಾಮ ಪಂಚಾಯತಿನವರು ಲಸಿಕೆ ಪಡೆಯಲು ಕುಂದಾಪುರ ಲಸಿಕಾ ಕೇಂದ್ರಕ್ಕೆ ಆಗಮಿಸುತ್ತಿದ್ದು, ಈ ಲಸಿಕಾ ಕೇಂದ್ರದ ಒತ್ತಡವನ್ನು ನಿವಾರಿಸಲು ಪುರಸಭಾ ವ್ಯಾಪ್ತಿಯ ಜನರಿಗೆ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದ್ದಾರೆ.