ಕುಂದಾಪುರ ತಾಲೂಕಿನ ಕಂಚುಗೋಡು ಶ್ರೀ ರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ತಾರೀಕು 11.4.2024 ರಿಂದ ಚಾಲನೆ ದೊರಕಿದ್ದುತಾರೀಕು 22.4.2024 ರ ತನಕ ಈ ಪವಿತ್ರ ಧಾರ್ಮಿಕ ಸಂಭ್ರಮ ಜರುಗಲಿದೆ. ಇಂದು ಏಪ್ರಿಲ್ 11 ರಂದು ಗಣಹೋಮದೊಂದಿಗೆ ,ದೀಪ ಸ್ಥಾಪನೆ,ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜರುಗಿದೆ. ನಾಳೆ ಏಪ್ರಿಲ್ 12 ರಂದು ಲಕ್ಷೀ ನಾರಾಯಣ ಹೋಮ,ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 3.30 ಕ್ಕೆ ಸರಿಯಾಗಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದ್ದು, ತ್ರಾಸಿ ಕೊಂಕಣಿ ಖಾರ್ವಿ ಸಭಾ ಭವನದಿಂದ ಹೊಸಪೇಟೆ ಮಾರ್ಗವಾಗಿ ದೇವಸ್ಥಾನಕ್ಕೆ ಸಾಗಲಿದೆ.
ಏಪ್ರಿಲ್ 13 ರಂದು ಬೆಳಿಗ್ಗೆ ಶ್ರೀ ರಾಮ ತಾರಕ ಹೋಮ, ಸಂಜೆ 6 ಗಂಟೆಗೆ ಗಂಗೊಳ್ಳಿ ಶ್ರೀ ಮಹಾಂಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏಪ್ರಿಲ್ 14 ರಂದು ಬೆಳಿಗ್ಗೆ ಪಂಚಮುಖಿ ಅಂಜನೇಯ ಹೋಮ, ಮಧ್ಯಾಹ್ನ 1 ಗಂಟೆಗೆ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 15 ರಂದು ಬೆಳಿಗ್ಗೆ ಹತ್ತು ಗಂಟೆಗೆ ವಿಷ್ಣು ಸಹಸ್ರ ನಾಮ ಹೋಮ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಹಾವೇರಿ ನರಸೀಪುರ ನಿಜ ಶರಣ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತವೀರ ಭೀಷ್ಮ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಜಗದ್ಗುರುಗಳನ್ನು ತ್ರಾಸಿ ಸರ್ಕಲ್ ನಿಂದ ಶ್ರೀ ರಾಮ ದೇವಸ್ಥಾನದ ವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಸಂಜೆ 5 ಗಂಟೆಗೆ ಡಾ.ಎ.ಚೆನ್ನಕೇಶವ ಗಾಯಿತ್ರಿ ಭಟ್ ಗಜಪುರ ಆನಗಳ್ಳಿಯವರ ನೇತೃತ್ವದಲ್ಲಿ ಸಮುದ್ರ ನೀರಾಜನ, ಸಾಗರೇಶ್ವರ ಪೂಜೆ, ಸಂಜೆ 7 ಕ್ಕೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಏಪ್ರಿಲ್ 16 ರಂದು ಶ್ರೀ ರಾಮ ಅಷ್ಟೋತ್ತರ ಸಹಸ್ರನಾಮ ಹೋಮ ನಡೆಯಲಿದೆ. ಏಪ್ರಿಲ್ 17 ರಂದು ಶ್ರೀ ರಾಮನವಮಿ, ಅಖಂಡ ಭಜನಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ, ಶ್ರೀ ರಾಮ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಜರುಗಲಿದೆ.
ಏಪ್ರಿಲ್ 18 ರಂದು ಬೆಳಿಗ್ಗೆ 6 ಗಂಟೆಗೆ ಅಖಂಡ ಭಜನಾ ಹಾಗೂ ಸಪ್ತಾಹ ಭಜನಾ ಮಂಗಲೋತ್ಸವ, ಶ್ರೀ ರಾಮತಾರಕ ಮಹಾಮಂತ್ರ ಹೋಮ, ಮಧ್ಯಾಹ್ನ11 ಗಂಟೆಗೆ ಮಹಾಸಂತರ್ಪಣೆ ಜರುಗಲಿದೆ. ಸಂಜೆ 4 ಗಂಟೆಯಿಂದ ಐತಿಹಾಸಿಕ ವೈಭವದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 7 ಕ್ಕೆ ಸರಿಯಾಗಿ ಮಹಾಸಂತರ್ಪಣೆ ನಡೆಯಲಿದೆ.
ಏಪ್ರಿಲ್ 19 ರಂದು ರಾತ್ರಿ 7 ಗಂಟೆಗೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ, ಮತ್ತು ಅಪ್ಪೆ ಮಂತ್ರದೇವತೆ ಎಂಬ ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ಏಪ್ರಿಲ್ 22 ರಂದು ಸಂಜೆ 3.30 ಕ್ಕೆ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ ಎಂದು ಶ್ರೀ ರಾಮ ದೇವಸ್ಥಾನ ಆಡಳಿತ ಸಮಿತಿ ಮತ್ತು ಶ್ರೀ ರಾಮ ದೇವಸ್ಥಾನ ಸುವರ್ಣ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾದಿಗಳು ಆಗಮಿಸಿ ಶ್ರೀ ರಾಮಚಂದ್ರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಭಿನ್ನವಿಸಿಕೊಂಡಿದ್ದಾರೆ.