ಬೆಂಗಳೂರಿನ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

ಬೆಂಗಳೂರಿನಲ್ಲಿ ನೆಲೆಯಾಗಿರುವ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು ಇದರ ನೇತೃತ್ವದಲ್ಲಿ ಪ್ರಾಯೋಜಿಸಲ್ಪಟ್ಟ 7 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ತಾರೀಕು 15.9.2024 ರಂದು ವೇದಿಕೆಯ ಅಧ್ಯಕ್ಷರಾದ ಶ್ರೀ ರವಿರಾಮ್ ಖಾರ್ವಿ ಇವರ ಮುಂದಾಳತ್ವದಲ್ಲಿ ಸಂಘದ ಕಚೇರಿಯಲ್ಲಿ ಸಂಪನ್ನಗೊಂಡಿತ್ತು.

ಖಾರ್ವಿ ಸಮಾಜದ ಗಣ್ಯರು,ಹಿರಿಯರು,ಮಹಿಳೆಯರು,ಮಕ್ಕಳು ಮತ್ತು ವೇದಿಕೆಯ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು,ಕಾರ್ಯಕ್ರಮ ಯಶಸ್ಸಿಗೆ ಮುಖ್ಯ ಕಾರಣವಾಯಿತು ಗೌರಿಗಣೇಶ ಹಬ್ಬದ ಈ ಶುಭ ಸಂದರ್ಭದಲ್ಲಿ ಕೊಂಕಣಿ ಖಾರ್ವಿ ಮಹಿಳಾ ಸಂಘದವರಿಂದ ಭಜನೆ ಕಾರ್ಯಕ್ರಮ ಮತ್ತು ಉಪಸ್ಥಿತರಿದ್ದ ಮಹಿಳೆಯರಿಗೆ ಅರಶಿನ ಕುಂಕುಮ ನೀಡುವ ಅರ್ಥಪೂರ್ಣ ಕಾರ್ಯಕ್ರಮ ಜರುಗಿತು.

ಬೆಂಗಳೂರಿನ ಪ್ರತಿಷ್ಠಿತ ಸದಾಶಿವ ನಗರದ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಖಾರ್ವಿ ಸಮಾಜದ ನೂರಾರು ಸದಸ್ಯರ ಸಮ್ಮುಖದಲ್ಲಿ ಗಣೇಶ ವಿಸರ್ಜನಾ ಕಾರ್ಯ ನಡೆಯಿತು.ಈ ಭಕ್ತಿಪ್ರದ ಧಾರ್ಮಿಕ ಕಾರ್ಯಕ್ರಮಗಳಿಗೆ ತನು ಮನ ಧನ ಸಹಾಯ ಸಹಕಾರ ನೀಡಿ ಯಶಸ್ವಿಗೊಳಿಸಿದ ಸರ್ವರಿಗೂ ವೇದಿಕೆಯ ನಿರ್ದೇಶಕರಾದ ಶ್ರೀ ಚಂದ್ರ ಗಾಣೈ ಯವರು ಧನ್ಯವಾದ ಸಲ್ಲಿಸಿದರು. ಗೌರಿ ಗಣೇಶ ಹಬ್ಬದ ಈ ಶುಭಪ್ರದ ಕಾರ್ಯಕ್ರಮದ ಜೊತೆಗೆ ಬೆಂಗಳೂರಿನಲ್ಲಿ ನೆಲೆನಿಂತ ಕೊಂಕಣಿ ಖಾರ್ವಿ ಸಮಾಜ ಭಾಂದವರನ್ನು ಒಗ್ಗೂಡಿಸಿವಲ್ಲಿ,ವೇದಿಕೆಯ ಕಾರ್ಯಕರ್ತರ ಶ್ರಮಭರಿತ ಕಾರ್ಯವೈಖರಿ ಶ್ಲಾಘನೀಯವಾಗಿದೆ.

Leave a Reply

Your email address will not be published. Required fields are marked *