ಕಾಸರಕೋಡು ಟೊಂಕಾ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆ ಶೃಂಗೇರಿ ಜಗದ್ಗುರುಗಳ ಪಾದಸ್ಪರ್ಶ ಸಂತ್ರಸ್ತ ಮೀನುಗಾರರಿಗೆ ಚೈತನ್ಯ ನೀಡಿದ ಗುರುವರ್ಯರ ಭೇಟಿ
ಪರಮಪೂಜ್ಯ ಶೃಂಗೇರಿ ಪೀಠದ ಜಗದ್ಗುರುಗಳು ತಮ್ಮ ಪರಂಪರಾನುಗತ ಶಿಷ್ಯ ವೃಂದವಾದ ಕೊಂಕಣಿ ಖಾರ್ವಿ ಸಮಾಜದ ಕೋರಿಕೆ ಮೇರೆಗೆ ಹೊನ್ನಾವರ ಕಾಸರಕೋಡು ಟೊಂಕಾಕ್ಕೆ ಭೇಟಿ ನೀಡಿ ಇಲ್ಲಿನ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಪ್ರದೇಶವನ್ನು ವೀಕ್ಷಣೆ ಮಾಡಿದರು. ಪರಿಸ್ಥಿತಿಯನ್ನು ಅವಲೋಕಿಸಿ ಕೊಂಕಣಿ ಖಾರ್ವಿ ಮೀನುಗಾರ ಭಾಂಧವರಿಗೆ ಧೈರ್ಯ ತುಂಬಿದರು. ಪರಮಪೂಜ್ಯ ಸ್ವಾಮಿಜಿಗಳಿಗೆ ಸ್ಥಳೀಯ ಮೀನುಗಾರರು, ವಾಣಿಜ್ಯ ಬಂದರು ನಿರ್ಮಾಣದಿಂದ ಆಗುವ ತೊಂದರೆಗಳ ಬಗ್ಗೆ ನಿವೇದಿಸಿಕೊಂಡರು. ಈ ಸಂದರ್ಭದಲ್ಲಿ ಹೊನ್ನಾವರ, ಕಾಸರಕೋಡು ಕೊಂಕಣಿ ಖಾರ್ವಿ ಸಮಾಜದ ಮುಖಂಡರಾದ ರಾಜೇಶ್ ತಾಂಡೇಲ, ರಾಜುತಾಂಡೇಲ್, ಭಾಸ್ಕರ್ ತಾಂಡೇಲ, ಗಣಪತಿ ತಾಂಡೇಲ್ ಮುಂತಾದವರು ಉಪಸ್ಥಿತರಿದ್ದರು.
ಈ ಹಿಂದೆ ಶೃಂಗೇರಿ ಗುರುವಂದನಾ ಕಾರ್ಯಕ್ರಮದಲ್ಲಿ ಶೃಂಗೇರಿಗೆ ಹೋದ ಸಂದರ್ಭದಲ್ಲಿ ಕಾಸರಕೋಡು ಟೊಂಕಾ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮೀನುಗಾರ ಮುಖಂಡರಾದ ರಾಜೇಶ್ ತಾಂಡೇಲ್, ರಾಜುತಾಂಡೇಲ್, ಗಣಪತಿ ತಾಂಡೇಲ್, ರಮೇಶ್ ತಾಂಡೇಲ್, ರೇಣುಕಾ ತಾಂಡೇಲ್, ಭಾಸ್ಕರ್ ತಾಂಡೇಲ್ ಮುಂತಾದವರು ಪರಮಪೂಜ್ಯ ಗುರುಗಳ ಬಳಿ ಭಿನ್ನವಿಸಿಕೊಂಡಿದ್ದರು ಮತ್ತು ಗಂಗೊಳ್ಳಿಯಲ್ಲಿ ನಡೆದ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಗುರುಗಳಲ್ಲಿ ಜಟ್ಟಿಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ಕೂಡಾ ಈ ಬಗ್ಗೆ ಭಿನ್ನವಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
www.kharvionline.com
ಪೂಜ್ಯ ಶೃಂಗೇರಿ ಜಗದ್ಗುರುಗಳು ಇತ್ತೀಚೆಗೆ ಕಾಸರಗೋಡು ಟೊಂಕ ಪ್ರದೇಶಕ್ಕೆ ನೀಡಿದ ಭೇಟಿ, ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ವಿರುದ್ಧ ಟೊಂಕದ ಮೀನುಗಾರ ಸಮುದಾಯವು ವ್ಯಕ್ತಪಡಿಸುತ್ತಿರುವ ಸಾಮೂಹಿಕ ವಿರೋಧದ ಧ್ವನಿಗೆ ಮಹತ್ತರ ಶಕ್ತಿ ನೀಡಿದೆ.
ಸ್ಥಳೀಯ ಮುಖಂಡರಾದ ರಾಜೇಶ್ ತಾಂಡೇಲ್, ರಾಜು ತಾಂಡೇಲ್, ಭಾಸ್ಕರ್ ತಾಂಡೇಲ್, ಗಣಪತಿ ತಾಂಡೇಲ್, ರಮೇಶ್ ತಾಂಡೇಲ್ ಮತ್ತು ರೇಣುಕಾ ತಾಂಡೇಲ್ ಅವರ ಅವಿರತ ಶ್ರಮ ಹಾಗೂ ಅಚಲ ಬದ್ಧತೆಯನ್ನು ನಾವು ಹೃತ್ಪೂರ್ವಕವಾಗಿ ಶ್ಲಾಘಿಸ ಬೇಕು ಏಕೆಂದರೆ ಬಹುತೇಕ ಅಲ್ಲಿನ ಸ್ಥಳೀಯ ಸಮಾಜದ ನಾಯಕರು ಹಾಗು ಇತರಬಾಗದ ನಮ್ಮ ಸಮುದಾಯದ ಬೆಂಬಲವಿಲ್ಲದ ಪರಿಸ್ಥಿತಿಯಲ್ಲಿ, ಅವರು ಧೈರ್ಯದಿಂದ ಈ ಹೋರಾಟವನ್ನು ನಿಷ್ಠೆಯಿಂದ ಮುಂದುವರೆಸಿದ್ದಾರೆ.
ಹಾಗೆ ಇತ್ತೀಚೆಗಿನ ಮುಖ್ಯಮಂತ್ರಿಗಳೊಂದಿಗೆ ರಾಜೇಶ್ ತಾಂಡೇಲ್ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಭೇಟಿಯು ಟೊಂಕದ ವಿಷಯವನ್ನು ಕುರಿತಂತೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಲು ಬಹುಮುಖ್ಯ ಪಾತ್ರ ವಹಿಸಿದೆ.
ಇದಲ್ಲದೆ, ಖಾರ್ವಿ ಸಮಾಜದ ದೊಡ್ಡ ದೊಡ್ಡ ಸಂಘ ಸಂಸ್ಥೆಗಳು, *”ಆಮ್ಕಾ ಕಿತೆಕ್ ತ್ಯಾ”* ಅಂತ ತಿರುಗಿ ಕುಳಿತಿರುವಾಗ, ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಜಟ್ಟಿಗೇಶ್ವರ ದೇವಸ್ಥಾನ, ಆಡಳಿತ ಮಂಡಳಿಯವರು ಜಗದ್ಗುರುಗಳ ಮುಂದೆ ಈ ನಿರ್ಣಾಯಕ ವಿಷಯವನ್ನು ಪೂರ್ವಭಾವಿಯಾಗಿ ಪ್ರಸ್ತಾಪ ಮಾಡಿದಕ್ಕೆ ಅವರಿಗೂ ಧನ್ಯವಾದಗಳು.
ಒಟ್ಟಾರೆ, ಟೊಂಕದ ಹೋರಾಟಗಾರರು ಹಾಗೂ ನಾಯಕರು ಮಾಡುತ್ತಿರುವ ಸಂಯೋಜಿತ ಶ್ರಮ ಮತ್ತು ಸಮರ್ಪಣೆ, ಖಾರ್ವಿ ಸಮುದಾಯದ ಹಕ್ಕುಗಳ ಮತ್ತು ಹಿತಾಸಕ್ತಿಯನ್ನು ಬಯಸುವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ಟೊಂಕದ ಸಮಸ್ತ ಹೊರಟಗಾರರಿಗೂ ಆಳವಾದ ಕೃತಜ್ಞತೆಗಳು