ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹಾಗಾಗಿ ಪ್ರತಿಯೊಬ್ಬರು ನಿಯಮಿತವಾಗಿ ತಮ್ಮ ಹೃದಯವನ್ನು ತಪಾಸಣೆ ಮಾಡಿಕೊಂಡು ಸಂಭಾವ್ಯ ಹೃದಯಾಘಾತವನ್ನು ತಪ್ಪಿಸಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್ 3 ನೇ ಆದಿತ್ಯವಾರ ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಕುಂದಾಪುರ ಇಲ್ಲಿ ಬೃಹತ್ ಹೃದಯ ತಪಾಸಣೆ,ಶ್ವಾಸಕೋಶ ತಪಾಸಣೆ ,ಕೊಲೆಸ್ಟ್ರಾಲ್ ಕಾಯಿಲೆಗಳ ಉಚಿತ ತಪಸಾಣಾ ಶಿಬಿರ ನಡೆಯಲಿದೆ.ಮಣಿಪಾಲದ ಖ್ಯಾತ ವೈದ್ಯರು ಈ ಆರೋಗ್ಯ ಶಿಬಿರದಲ್ಲಿ ಭಾಗವಹಿಸಲಿದ್ದು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಸದೋಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.

www.kharvionline.com

Leave a Reply

Your email address will not be published. Required fields are marked *