ಗೋವಾ ಕ್ವಿಜ್ ಸ್ಪರ್ಧೆಯಲ್ಲಿ ಮಿಂಚುತ್ತಿರುವ ವೈಷ್ಣವಿ. ಡಿ. ಮೇಸ್ತ

ಬೆಳೆಯುವ ಸಿರಿ ಮೊಳಕೆಯಲ್ಲಿ.

ಪ್ರತಿಯೊಬ್ಬ ಮಕ್ಕಳಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಕೆಲವು ಮಕ್ಕಳು ಪಠ್ಯದಲ್ಲಿ ಮುಂದೆ ಇದ್ದರೆ ಮತ್ತೆ ಕೆಲವರು ಪಠ್ಯೇತರ ಚಟುವಟಿಕೆಯಲ್ಲಿ ತಮ್ಮ ಪ್ರತಿಭೆ ಇರಬಹುದು. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಹೊರ ಜಗತ್ತಿಗೆ ತಿಳಿಸುವ ಪ್ರಯತ್ನ ಖಾರ್ವಿ ಆನ್ಲೈನ್ ಮಾಡುತ್ತಾ ಬಂದಿದೆ. ಇದರ ಫಲವಾಗಿ ಗೋವಾ ರಾಜ್ಯದಲ್ಲಿ ಕ್ವಿಜ್ ಸ್ಪರ್ಧೆಯಲ್ಲಿ ಮಿಂಚುತ್ತಿರುವ ವೈಷ್ಣವಿ. ಡಿ. ಮೇಸ್ತಇವರ ಕಿರುಪರಿಚಯ ಮಾಡುತ್ತಿದ್ದೇವೆ.

ಬೆಳವ ಸಿರಿ ಮೊಳಕೆಯಲಿ ಎಂಬ ಗಾದೆಯಂತೆ ತಾಲೂಕು, ಜಿಲ್ಲಾ, ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಶಾಲಾ ಮಟ್ಟದಲ್ಲಿ ಗೋವಾ ರಾಜ್ಯದಲ್ಲಿ ಗಳಿಸಿರುವ ಹೊನ್ನಾವರದ ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿನಿ ವೈಷ್ಣವಿ. ಡಿ. ಮೇಸ್ತ….

ಹೊನ್ನಾವರ ತಾಲೂಕಿನ ದುರ್ಗಾ ಕೇರಿಯ ನಿವಾಸಿಯಾಗಿರುವ ಶ್ರೀದೇವಿದಾಸ ಮೇಸ್ತ ಹಾಗೂ ಪ್ರೇಮ ದೇವಿದಾಸ್ ಮೇಸ್ತ ಇವರ ಮಗಳಾದ ವೈಷ್ಣವಿ ಡಿ ಮೇಸ್ತ ಇವರು ಗೋವಾ ರಾಜ್ಯದ ಮರ್ಗಾಂವ್ ಸರ್ಕಾರಿ ಪದವಿಪೂರ್ವ ಹೈಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು.. ಕ್ವಿಜ್ ನಲ್ಲಿ ಬಹಳಷ್ಟು ಆಸಕ್ತಿ ವಹಿಸುತ್ತಿದ್ದ ಈಕೆ ಶಾಲಾ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಪ್ರಶಸ್ತಿ ಗಳನ್ನು ಪಡೆದು ಕೊಂಡಿರುತ್ತಾರೆ….

ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆ ಆಯೋಜನೆ ಆದರೆ ಇವರ ಕಾಲೇಜಿನ ವತಿಯಿಂದ ಮೊದಲ ಆಯ್ಕೆ ವೈಷ್ಣವಿ ಡಿ ಮೇಸ್ತ ಆಗಿರುತ್ತಾರೆ… ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ಈಕೆ ಮುಂದೆ ವೈದ್ಯೆ ಆಗಬೇಕೆಂದು ಕೊಂಡಿರುವುದು ಸಂತೋಷದ ವಿಷಯವಾಗಿದೆ..

ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶ ಈಕೆಗೆ ಸಿಗುವಂತಾಗಲಿ ಹಲವಾರು ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿದರ್ಶನ ನಮ್ಮ ಮುಂದಿದೆ. ಇಂಥವರ ಸಾಲಿನಲ್ಲಿ ಈ ವಿದ್ಯಾರ್ಥಿನಿಯು ಸೇರುವಂತಾಗಬೇಕು ಎನ್ನುವುದು ಮನೆಯವರ ಮತ್ತು ಸಮಾಜದ ನಮ್ಮೆಲ್ಲರ ಹಾರೈಕೆ….

ವರದಿ: ಮಹೇಶ್ ಪಟೇಲ್

 

2 thoughts on “ಗೋವಾ ಕ್ವಿಜ್ ಸ್ಪರ್ಧೆಯಲ್ಲಿ ಮಿಂಚುತ್ತಿರುವ ವೈಷ್ಣವಿ. ಡಿ. ಮೇಸ್ತ

  1. ವೈಷ್ಣವಿ ತುಂಬಾ ಟೇಲೆಂಟ್ ಹುಡುಗಿ
    ಅವಳಿಗೆ ಕೊಂಕಣಿ ಖಾರ್ವಿ ಸಮಾಜದ ಪ್ರೋತ್ಸಾಹ ಬೇಕು… ಮುಂದಿನ ಭವಿಷ್ಯ ಉಜ್ವಲ ವಾಗಿರಲಿ, ಡಾಕ್ಟರ್ ಹಾಗುವ ಕನಸು ನನಸಾಗಲಿ. All the best vaishnavi god bless you 👍❤

Leave a Reply

Your email address will not be published. Required fields are marked *