ಕರೋನ ವೈರಸ್ ಇಡೀ ದೇಶದಲ್ಲಿ ಹರಡುತ್ತಿದೆ ಮತ್ತೊಂದೆಡೆ ಜನರು ಮನೆಯಲ್ಲಿರುವಾಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೊಸಮಾರ್ಗವನ್ನು ಹುಡುಕಲಾರಂಭಿಸಿದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ ಅಂತ ನೈಸರ್ಗಿಕ ಔಷಧಿಗಳನ್ನು ಬಳಸಲು ಆಯುಷ್ ಸಚಿವಾಲಯ ಶಿಫಾರಸು ಮಾಡಿದೆ. ಅದೇ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ ಕಷಾಯ ಒಳ್ಳೆಯದು.
ಅಮೃತ ಬಳ್ಳಿ ಇದನ್ನು ಬೆಳೆಯುವುದಕ್ಕೆ ಹೆಚ್ಚು ಜಾಗದ ಅವಶ್ಯಕತೆ ಇಲ್ಲ ಮನೆಯ ಮುಂದಿರುವ ಚಿಕ್ಕ ಪಾಟ್ನಲ್ಲಿ ಕೂಡ ಈ ಅಮೃತ ಬಳ್ಳಿಯನ್ನು ಬೆಳೆಸಬಹುದಾಗಿದ್ದು ಇದು ಚಿಕ್ಕ ಬಳ್ಳಿಯೆ ಆದರೂ ಇದರ ಪ್ರಯೋಜನಗಳು ಮಾತ್ರ ಅಪಾರವಾದದ್ದು ಹಾಗಾದರೆ ಈ ಅಮೃತ ಬಳ್ಳಿಯನ್ನು ಹೇಗೆ ಬಳಸಿಕೊಳ್ಳಬೇಕು ಯಾವ ಸಮಸ್ಯೆಗೆ ಯಾವ ರೂಪದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸುತ್ತೇನೆ , ಅಮೃತ ಬಳ್ಳಿ ಎಲ್ಲದಕ್ಕಿಂತ ಮೊದಲು ಮಹತ್ವವಾದ ಪ್ರಯೋಜನವನ್ನು ನೀಡುವುದು ಮಧುಮೇಹಿಗಳಿಗೆ ಈ ಮಧುಮೇಹಿಗಳು ಅಮೃತಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬಂದರೆ ಅವರು ಹೆಚ್ಚು ಮಾತ್ರೆಯ ಮೊರೆ ಹೋಗುವ ಸಾಧ್ಯತೆಯೇ ಇರುವುದಿಲ್ಲ, ಈ ಅಮೃತಬಳ್ಳಿಯ ಕಾಂಡದ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತ ಬನ್ನಿ ಇದರಲ್ಲಿರುವ ಕಹಿ ಮತ್ತು ಒಗರಿನ ಅಂಶವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣಕ್ಕೆ ತರುತ್ತದೆ.
ಅಮೃತಬಳ್ಳಿಯ ಕಾಂಡವನ್ನು ಚರ್ಮಕ್ಕೆ ಬಳಸಿದರೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇರುವುದಿಲ್ಲ ಅಮೃತಬಳ್ಳಿಯನ್ನು ಹಾಗೆ ತಿನ್ನಬಾರದು ಸ್ವಲ್ಪ ಕುದಿಸಿ ತಿನ್ನಬೇಕು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮಾನವನ ದೇಹದಲ್ಲಿ ಪ್ರಸ್ತುತ ಇರುವ ರೋಗ ಕರೋನಾ ಇರುವವರು ಅಮೃತಬಳ್ಳಿ ರಸವನ್ನು ಕುಡಿದರೆ ಕಡಿಮೆಯಾಗುತ್ತದೆ, ಇದ್ದರೂ ಇಲ್ಲದಿದ್ದರೂ ಒಂದು ಕಾರಣದಿಂದ ಗಿಡವನ್ನು ಬಳಸಬಹುದು ಅದಕ್ಕೆ ಇದನ್ನು ಅಮೃತ ಬಳ್ಳಿ ಎನ್ನುವರು ಮನುಷ್ಯನ ದೇಹದಲ್ಲಿ ಯಾವುದೇ ರೋಗವನ್ನು ಬರದಂತೆ ನೋಡಿಕೊಳ್ಳುತ್ತದೆ.
ಮೂತ್ರ ನೇತ್ರ ಚರ್ಮ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ಉತ್ತಮವಾದ ಔಷಧಿ ಯಾಗಿರುವ ಈ ಅಮೃತಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಕಣ್ಣಿಗೆ ಒಳ್ಳೆಯದು ಮತ್ತು ಹಸಿವು ಹೆಚ್ಚಾಗಿರುತ್ತದೆ ಹಾಗೆ ಬುದ್ದಿಯನ್ನು ಕೂಡ ವೃದ್ಧಿಸುವುದರಲ್ಲಿ ಹೆಚ್ಚಿನ ಪ್ರಯೋಜನವನ್ನು ಹೊಂದಿರುವ ಈ ಅಮೃತ ಬಳ್ಳಿಯ ಬಗೆಗಿನ ಈ ಚಿಕ್ಕ ಮಾಹಿತಿ ನಿಮಗೂ ಕೂಡ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಕಾಮೆಂಟ್ ಮಾಡಿ.
ಸರ್ವ ರೋಗಕ್ಕೂ ನಿವಾರಣೆ ನೀಡುವ ಅಂಶವಿರುವ ಈ ಅಮೃತ ಬಳ್ಳಿಯನ್ನು ನೀವು ಮನೆಯಲ್ಲಿ ಬೆಳೆಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ.
ಹಸಿರೇ ಉಸಿರು
ವರದಿ: ಸುಧಾಕರ್ ಖಾರ್ವಿ
www.kharvionline.com