ಹಾವಿನ ಮಿತ್ರ ಗಂಗೊಳ್ಳಿಯ ‘ಸ್ನೇಕ್ ರಾಜ’

“ಧೈರ್ಯಂ ಸಾಹಸಿ ಲಕ್ಷಣಂ” ಎನ್ನುವ ಅಕ್ಷರಶ ಮಾತು ನಿಜ.. ಮನುಷ್ಯ ಧೈರ್ಯದಿಂದ ಮುನುಗ್ಗಿದಲ್ಲಿ ಮಾತ್ರ ಗೆಲುವಿನ ಶಿಖರಕ್ಕೆ ತಲುಪಲು ಸಾಧ್ಯ..ಮನುಷ್ಯನಿಗೆ ಜೀವನದಲ್ಲಿ ತನ್ನ ವೃತ್ತಿಯೊಂದಿಗೆ ಇನ್ನಿತರ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಒಂದು ಪ್ರವೃತ್ತಿ .ಅದಕ್ಕೆ ಉತ್ತಮ ಸಾಕ್ಷಿ ಗಂಗೊಳ್ಳಿಯ ಲೈಟ್ ಹೌಸ್ ನಿವಾಸಿ ಉರಗತಜ್ಞ ನಾಗರಾಜ ಖಾರ್ವಿ. ಹಾವನ್ನು ಹಿಡಿಯುವ ಈ ವ್ಯಕ್ತಿ ಯಾವುದೇ ಮನೆಯಲ್ಲಿ ,ಯಾವುದೇ ಪರಿಸರದಲ್ಲಿ ,ಬಲೆಯಲ್ಲಿ ಜನನಿಬಿಡ ಪ್ರದೇಶದಲ್ಲಿ ಪ್ರತ್ಯಕ್ಷ ಗೊಂಡಾಗ ತನ್ನ ಕೆಲಸವನ್ನೆಲ್ಲಾ ಬದಿಗಿಟ್ಟು ಸಾಹಸದಿಂದ ತನ್ನ ಚಾಣಾಕ್ಷತೆಯಿಂದ ಸುರಕ್ಷಿತವಾಗಿ ಹಿಡಿದು ನಿರ್ಜನದ ಪರಿಸರದಲ್ಲಿ ಬಿಟ್ಟು ಬಂದಿದ್ದು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ”ಸ್ನೇಕ್ ನಾಗಣ್ಣ “ಎಂದೇ ಗಂಗೊಳ್ಳಿಯ ಪರಿಸರದಲ್ಲಿ ಖ್ಯಾತಿಯಾಗಿರುವ ಇವರು ನೂರಕ್ಕಿಂತ ಅಧಿಕ ಹಾವನ್ನು ಯಾವುದೇ ಸಲಕರಣೆಗಳಿಲ್ಲದೇ, ಕೈಯಿಂದ ಹಿಡಿದು ಬರೀ ಕೋಲಿನ ಆಯುಧದ ಸಹಾಯದಿಂದ ಚಾಣಾಕ್ಷತೆಯಿಂದ ಹಿಡಿಯುತ್ತಾರೆ.ಜನರಿಗೆ ಹಾವನ್ನು ಕಂಡರೆ ಭಯಭೀತರಾಗುವ ಈ ದಿನದಲ್ಲಿ ಈತನಿಗೆ ಹಾವೆಂದರೆ ಸಲೀಸಾಗಿ ನೀರು ಕುಡಿದಷ್ಟೇ ಸುಲಭ.ಹಾಗೆಯೇ ಹಾವನ್ನು ನಾಜುಕಾಗಿಯೇ ಹಿಡಿಯುತ್ತಾರೆ.

ಪರಿಚಯ: ಗಂಗೊಳ್ಳಿಯ ಮಡಿ ಲೈಟ್ ಹೌಸ್ ನಿವಾಸಿ ದಿ|ಶೀನ ಖಾರ್ವಿ ಮತ್ತು ದಿ|ಗಿರಿಜಾ ಖಾರ್ವಿಯವರ ಪುತ್ರರಾಗಿರುವ ಇವರು ಬಡತನದಲ್ಲಿ ಹುಟ್ಟಿ ಶಿಕ್ಷಣವನ್ನು ಮೊಟಕುಗಳಿಸಿದರೂ ಬಾಲ್ಯದಿಂದಲೇ ಪ್ರಾಣಿಪಕ್ಷಿಗಳ ಸರಿಸೃಪಗಳ ಪ್ರಭೇದದಲ್ಲಿ ಮೇಲೆ ಅಪಾರ ಪ್ರೀತಿ.ಅದೇ ಇವರಿಗೆ ಪೇರಣೆಯಾಯಿತು ಎನ್ನುತ್ತಾರೆ ಇವರು.ಸುಮಾರು 10ವರ್ಷದ ಹಿಂದಿನಿಂದಲೂ ಈ ಕಾಯಕಲ್ಪದಲ್ಲಿ ತೊಡಗಿಸಿಕೊಂಡಿರುತ್ತಾರೆ.ಇವರು ಮೀನುಗಾರಿಕೆಯನ್ನು ಅವಲಂಭಿಸಿರುವ ಇವರು ಗಂಗೊಳ್ಳಿ ವ್ಯಾಪ್ತಿ ಪ್ರದೇಶದಿಂದ ಮುಳ್ಳಿಕಟ್ಟೆಯ ಅನೇಕ ಗ್ರಾಮೀಣ ಪ್ರದೇಶದಲ್ಲಿ ಹಾವನ್ನು ಹಿಡಿದು ಜನಮನ್ನಣೆಯಾಗಿರುತ್ತಾರೆ ಅಲ್ಲದೇ ಬಲೆಯಲ್ಲಿ ಸಿಕ್ಕಿಕೊಂಡ ಹಲವಾರು ರೀತಿಯ ಕನ್ನಡಿ ಹಾವು,ಕಡಂಬಳಕ ಹಾವು,ನಾಗರಹಾವು,ಹೆಬ್ಬಾವು ಗಳನ್ನು ರಕ್ಷಣೆಮಾಡಿ ಅದನ್ನು ಪ್ರಥಮ ಚಿಕಿತ್ಸೆ ನೀಡುವುದರ ಮೂಲಕ ಉರಗತಜ್ಞ ಎಂದೇ ಗುರುತಿಸಲ್ಪಟ್ಟವರು.ಈ ನನ್ನ ಸಮಾಜಕ್ಕೊಂದು ಅಳಿಲುಸೇವೆಯಲ್ಲಿ ತೃಪ್ತಿ ಯಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಪ್ರತಿಫಲ ಬಯಸದ ಸೇವೆ ಯಾವುದೇ ಪೋನ್ ಬರಲಿ ಯಾವುದೇ ಸ್ಥಳದಲ್ಲಿ ಹಾವು ಕಂಡು ಬಂದಲ್ಲಿ ಈತ ಅಲ್ಲಿಗೆ ಹಾಜರು.ತನ್ನ ಕೆಲಸವನ್ನೆಲ್ಲಾ ಬದಿಗಿಟ್ಟು ತನ್ನ ಜೀವವನ್ನೇ ಪಣವಿಟ್ಚು ಹಾವುಗಳೊಂದಿಗೆ ಸರಸವಾಡುವ ಈತನ ಸಾಹಸಕ್ಕೆ ಮೈಜುಮ್ಮೆನ್ಸುತ್ತೆ. ಈತನ ಕಾರ್ಯವನ್ನು ನೋಡಿ ಹಣ ನೀಡಲು ಬಂದಲ್ಲಿ ಹಣವನ್ನು ಮುಟ್ಟುವುದಿಲ್ಲ ಅಲ್ಲದೇ ಹಣದ ಬೇಡಿಕೆಯನ್ನು ಇಡುವುದಿಲ್ಲ.ನನ್ನದೊಂದು ಸಮಾಜಕ್ಕೆ ಸೇವೆ ಇರಲಿ ಎಂದುಕೊಳ್ಳುವ ಇವರು ನಾನು ಆಸಕ್ತಿಯಿಂದ ಈ ವಿದ್ಯೆ ಕಲಿತ್ತಿದ್ದೇನೆ.ಜನಸಾಮಾನ್ಯರಿಗೆ ಉಪಕಾರವಾಗಬೇಕು ನಶಿಸಿ ಹೋಗುತ್ತಿರುವ ಉರಗ ಸಂತತಿ ಉಳಿವಿಕೆಗೊಂದು ನನ್ನ ಪುಟ್ಟಕಾಣಿಕೆಯಷ್ಟೇ .ಸ್ವಾರ್ಥವೇ ಹೊಂದಿರುವ ಈ ದಿನಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವಈ ಸೇವಾ ಸಾಹಸಿ ಮನೋಭಾವ ಹೊಂದಿರುವನನ್ನು ಗುರುತಿಸುವ ಕೆಲಸ ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಇವರ ದೂರವಾಣಿ ಸಂಖ್ಯೆ 8904084871

ರೂಪೇಶ ಕುಮಾರ ಗಂಗೊಳ್ಳಿ

Leave a Reply

Your email address will not be published. Required fields are marked *