ನಿಮ್ಮ ವೃತ್ತಿ ಇನ್ನೊಬ್ಬರಿಗೆ ಪ್ರೇರಣೆ ಆಗಲಿ.

ಕಂಚುಗೋಡು: ಮೋಹನ ಖಾರ್ವಿ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ಕಂಚುಗೋಡಿನ ಹಾಸುಪಾಸಿನ ತೀರಾ ಅಶಕ್ತರ ಕುಟುಂಬಗಳಿಗೆ 25 Kg ಅಕ್ಕಿ ಚೀಲವನ್ನು ಮನೆ ಮನೆಗೆ ತಲುಪಿಸಿದ್ದಾರೆ.
ಹೋದ ವರ್ಷದಂತೆ ಈ ವರ್ಷವು ಕೂಡ ಬಡವರ ಸ್ವಾಭಿಮಾನಕ್ಕೆ ಧಕ್ಕೆ ಆಗಬರದು ಎಂಬ ಹಿತದೃಷ್ಟಿಯಿಂದ ಅಕ್ಕಿ ಸ್ವೀಕರಿಸಿದ ಯಾವುದೇ ಅಶಕ್ತರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ…
ಸೇವೆಗೈಯುವ ಸ್ನೇಹಿತರೇ ಒಂದು ಕಿವಿ ಮಾತು🙏. ನೀವು ಕೂಡ ಪೋಟೋ ಹಾಕುವುದಾದರೆ ಹಾಕಿ ಆದರೆ ಅವರ ಫೋಟೋಗಳನ್ನು ದಯವಿಟ್ಟು ಆದಷ್ಟೂ ಬ್ಲರ್ ಮಾಡಿ ಹಾಕಿ🙏
ಯಾಕೆಂದರೆ ಇಂದು ಕೆಟ್ಟ ಘಳಿಗೆಯಿಂದ ಅವರು ಅಶಕ್ತರಾಗಿರಬಹುದು ಆದರೆ ಅವರು ಭಿಕ್ಷುಕರಲ್ಲ…
ನಿಮ್ಮ ಕಿಟ್ ಅವರ ಹೊಟ್ಟೆ ತಂಪಾಗಿಸಲಿ ಕಣ್ಣು ಕೆಂಪಾಗಿಸಿದಿರಲಿ.

ನಿಮ್ಮ ವೃತ್ತಿ ಇನ್ನೊಬ್ಬರಿಗೆ ಪ್ರೇರಣೆ ಆಗಲಿ.
ನಿಮ್ಮ ಆತ್ಮತೃಪ್ತಿ ಇನ್ನೊಬ್ಬರಿಗೆ ಶಕ್ತಿ ನೀಡಲಿ.

ರಾಮ ಮಂದಿರದ ಅಧ್ಯಕ್ಷ ರಾದ ಮೋಹನ ಖಾರ್ವಿ ಮುಂದಾಳತ್ವದಲ್ಲಿ ಹರೀಶ ವಾದಿ ಸುಧೀರ್ ಚೌಕಿ ಮತ್ತು ರಮೇಶ ಖಾರ್ವಿ ಸೇರಿ ಅಶಕ್ತರ ಕುಟುಂಬಗಳಿಗೆ ಕಿಟ್ ಹಂಚಿ ಮುಂದೆ ಕೂಡ ನಿಮ್ಮೊಂದಿಗೆ ಇದ್ದೇವೆ ಎಂದು ಆಶ್ವಾಸನೆ ನೀಡಿದರು

ವರದಿ – ಹೆಬ್ಬುಲಿ ರಮ್ಮಿ ಖಾರ್ವಿ

Leave a Reply

Your email address will not be published. Required fields are marked *