ಒಂದು ದಿನ ಮೀನುಗಾರಿಕೆ ಮಾಡಿದ್ರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೀನುಗಾರರು ಇವತ್ತು ಲಾಕ್ ಡೌನ್ಗೆ ಸಿಕ್ಕಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರರ ಸ್ಥಿತಿ ಅಯೋಮಯವಾಗಿದೆ. ಲಾಕ್ ಡೌನ್ ಗೆ ಸ್ಪಂದಿಸಿದ ಮೀನುಗಾರರು ಇವತ್ತು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರಮುಖ ಸಮುದಾಯವಾದ ಮೀನುಗಾರರು ಇತ್ತೀಚಿನ ಕೆಲವು ವರ್ಷಗಳಿಂದ ಕ್ಷಾಮದಿಂದ ತತ್ತರಿಸುತ್ತಿದ್ದು ಜೀವನ ನಿರ್ವಹಣೆಗೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ
ಕಳೆದ ವರ್ಷ ಮತ್ಸ್ಯಕ್ಷಾಮ ದ ಜೊತೆಯಲ್ಲಿ ಲಾಕ್ ಡೌನ್ ಜಾರಿಯಾಗಿ ಆದಾಯವಿಲ್ಲದೆ ಬಹಳ ತೊಂದರೆಯಾಗಿತ್ತು ಈ ವರ್ಷವೂ ಮತ್ಸ್ಯಕ್ಷಾಮ ದ ಜೊತೆಗೆ ಮತ್ತೆ ಲಾಕ್ ಡೌನ್ ಜಾರಿಯಾಗಿ ಮೀನುಗಾರ ಸಮುದಾಯ ಆದಾಯ ಮೂಲ ವಿಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿದೆ ಬೇಸಿಗೆಯಲ್ಲಿ ಮೀನುಗಾರಿಕೆ ಉತ್ತಮ ಅವಕಾಶವಿದ್ದರೂ ಎಲ್ಲವೂ ಲಾಕ್ ಡೌನ್ ಕಾರಣದಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ
ಈಗ ಮಳೆಗಾಲದ ಎರಡು ತಿಂಗಳು ಮೀನುಗಾರಿಕೆ ನಿಷೇಧ ಏರಿಕೆಯಿಂದಾಗಿ ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಮಳೆಗಾಲದ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ದೋಣಿಗಳ ದುರಸ್ತಿ ಬಲೆಗಳ ಖರೀದಿ ದೋಣಿ ಶೆಡ್ ನಿರ್ಮಾಣ ಎಂಜಿನ್ ದುರಸ್ತಿ ಮುಂತಾದ ಕೆಲಸಗಳು ನಡೆಯುತ್ತದೆ
ಆದರೆ ಆದಾಯ ಮೂಲ ವಿಲ್ಲದೆ ಕಾರ್ಯಗಳು ಸ್ಥಗಿತಗೊಂಡು ಹಿಂದೆ ಮಾಡಿದ ಸಾಲವೇ ತೀರಿಲ್ಲ ಇನ್ನೂ ಹೊಸದಾಗಿ ಸಾಲ ಮಾಡುವಂತಹ ಪರಿಸ್ಥಿತಿ ಇದೆ ಸರಕಾರ ಘೋಷಿಸಿರುವ ಪರಿಹಾರ ಯಾವುದಕ್ಕೂ ಸಾಲದಾಗಿದೆ.
ಕೋವಿಡ್ ಪರಿಹಾರ ಯಾವುದಕ್ಕೂ ಸಾಲದಾಗಿದೆ ಹೀಗಾಗಿ ಮೀನುಗಾರಿಕೆಯ ಪೂರಕ ಚಟುವಟಿಕೆಗಳ ಜೊತೆ ಜೀವನ ನಿರ್ವಹಣೆಗೆ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಿ ಕೊಡಬೇಕಾಗಿದೆ.
ಒಟ್ಟಾರೆ ಲಾಕ್ ಡೌನ್ ಗೆ ದೇಶದ ಜನ ಸ್ಪಂದಿಸಿದ್ದಾರೆ. ಆದರೆ, ಅಷ್ಟೆ ಸಂಕಷ್ಟಕ್ಕೂ ಮೀನುಗಾರರು ಕೂಡ ಕಂಗಾಲಾಗಿದ್ದು ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸರಕಾರ ಇತ್ತ ಚಿತ್ತ ಹರಿಸಬೇಕಿದೆ. ಮಹಾಶಕ್ತಿ ವೇದಿಕೆ, ಅಂಕೋಲಾ, ಉತ್ತರ ಕನ್ನಡ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
ವರದಿ: ನವೀನ್ ಬಾನವಾಲಿಕರ್, ಕಾರವಾರ