ವಾಸನೆ ಹಿಡಿಯುವ ಮೀನುಗಳು

ವಾಸನೆ ಹಿಡಿಯುವ ಮೀನುಗಳು

ಮನುಷ್ಯ ರಿಗಿರುವಂತೆ ಮೀನುಗಳಿಗೂ ಸ್ಪರ್ಶ ರುಚಿ ಶ್ರವಣ ಹಾಗೂ ದೃಷ್ಟಿ ಜ್ಞಾನ ವಿದೆ ಅದರಲ್ಲೂ ವಾಸನೆ ಹಿಡಿಯುವುದರಲ್ಲಿ ಮೀನುಗಳಿಗೆ ತಮ್ಮದೇ ಆದ ವಿಚಿತ್ರ ವೈಶಿಷ್ಟ್ಯತೆಗಳಿಂದ ಕೂಡಿದ ಮೂಗು ಇದೆ ಮೂಗಿಗೆ ಎರಡು ಹೊಳ್ಳೆಗಳಿವೆ ಪ್ರತಿಯೊಂದು ಹೊಳ್ಳೆಗಳಲ್ಲೂ ಎರಡೆರಡು ರಂಧ್ರಗಳಿದ್ದು ಇವೆರಡು ಒಂದೇ ಜಾಗದಲ್ಲಿ ಒಂದರ ಪಕ್ಕದಲ್ಲಿ ಒಂದು ಇರುವುದಿಲ್ಲ ಒಂದು ರಂಧ್ರ ಮುಂದಿದ್ದರೆ ಇನ್ನೊಂದು ರಂಧ್ರ ಅದಕ್ಕೆ ನೇರವಾಗಿ ಹಿಂದಿರುತ್ತದೆ ಈ ರಂಧ್ರಗಳನ್ನು ಪಿಟ್ಸ್ ಎಂದು ಕರೆಯುತ್ತಾರೆ ಈ ಎರಡೂ ಹೊಳ್ಳೆಗಳನ್ನು ಬೇರ್ಪಡಿಸಲು ಇವುಗಳ ಮಧ್ಯೆ ಫ್ಲಾಸ್ ಎಂಬ ಪದರವಿರುತ್ತದೆ ಈ ಹೊಳ್ಳೆಗಳು ಎಲ್ಲಾ ಮೀನಗಳಲ್ಲಿ ಒಂದೇ ಕಡೆ ಇರುವುದಿಲ್ಲ ಶರೀರದ ಬೇರೆ ಬೇರೆ ಜಾಗದಲ್ಲಿ ಇರುತ್ತದೆ

ಮೀನು ನೀರಿನ ತಳದಲ್ಲಿ ಇರುವಾಗ ನೀರು ಮೀನಿನ ಮುಂದಿನ ಪಿಟ್ಸ್ ಪ್ರವೇಶಿಸಿ ಅದರ ಹಿಂದಿನ ಇನ್ನೊಂದು ಪಿಟ್ಸ್ ಮೂಲಕ ಹೊರಬರುತ್ತದೆ ಈ ನೀರು ಪ್ರವೇಶಿಸುವಾಗ ಮೀನಿನ ಜ್ಞಾನಕೋಶಗಳಾದ ಸೆನ್ಸ್ ಸೆಲ್ಸ್ ಸಹ ಅತೀವವಾಗಿ ಉಲ್ಬಣವಾಗುತ್ತದೆ ಇದರಿಂದ ಮೀನಿಗೆ ಯಾವುದೇ ಒಂದು ಪದಾರ್ಥದ ವಾಸನೆಯು ಸುಲಭವಾಗಿ ಗೊತ್ತಾಗುತ್ತದೆ ಅತಿ ಸೂಕ್ಷ್ಮ ಮತ್ತು ತೀಕ್ಷ್ಣವಾದ ವಾಸನೆಯನ್ನು ಕೂಡಾ ಅವು ಸುಲಭವಾಗಿ ಅರಿತುಕೊಳ್ಳುತ್ತದೆ ಕೆಲವೊಂದು ಜಾತಿಯ ಮೀನುಗಳು ನದಿ ಅಥವಾ ಸಮುದ್ರ ದಂಡೆಯಲ್ಲಿ ಇರುವ ಮನುಷ್ಯನ ವಾಸನೆಯನ್ನು ಕೂಡಾ ಕಂಡುಹಿಡಿಯಬಲ್ಲದು

ಮೀನು ಗಳಿಗೆ ವಾಸನೆಯ ಜ್ಞಾನ ವಸ್ತುಗಳ ವಾಸನೆಯನ್ನು ಕಂಡುಹಿಡಿಯಲು ಮಾತ್ರವಲ್ಲ ತಮ್ಮ ಸ್ವಸ್ಥಾನದ ಮಿತಿಯಲ್ಲಿ ಮತ್ತು ದೂರದಿಂದ ಸ್ವಸ್ಥಾನ ತಲುಪಲು ಸಹಾಯ ಮಾಡುತ್ತದೆ ಸಮುದ್ರದ ಮೀನುಗಳು ನದಿಗಳಲ್ಲಿ ಪ್ರವೇಶಿಸುವುದು ಅಪರೂಪ ಏನಾದರೂ ಅಪ್ಪಿ ತಪ್ಪಿ ಬಂದರೆ ಅವುಗಳು ವೈಜ್ಞಾನಿಕ ರೀತ್ಯ ಸಮುದ್ರ ಮತ್ತು ನದಿ ಅಳಿವೆ ಸಂಗಮದ ನೀರಿನ ವ್ಯತ್ಯಾಸ ಮತ್ತು ವಾಸನೆ ಗ್ರಹಿಸಿ ಮರಳಿ ಸ್ವಸ್ಥಾನವನ್ನು ತಲುಪಬಲ್ಲುದು ಇದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ

ಉಮಾಕಾಂತ ಖಾರ್ವಿ ಕುಂದಾಪುರ

How Do Fish… SMELL?

A fish’s nose is made up of two openings (nostrils) on the head. The sense of smell is very important to a fish, because it helps them find their food and warns them of danger.

Leave a Reply

Your email address will not be published. Required fields are marked *