ಇವಳೇ ಅಲ್ಲವೇ ನಮ್ಮ ಸಂಪತ್ತು

ಪರಶುರಾಮ ರು ಸ್ರಷ್ಡಿಸಿದ ಕರಾವಳಿ ತೀರದ ಸುಂದರತೆಯ ತಾಣಗಳೊಲ್ಲೊಂದು ನಮ್ಮ ಈ ಕುಂದಾಪುರ…

ಕುಂದಾವರ್ಮ ರಾಜರು ಆಳಿದ ಸುಪ್ರಸಿದ್ದ ಕುಂದಾಪುರವು ಹಲವಾರು ದೈವ, ದೇವರುಗಳು ನಲೆನಿಂತಿರುವ ಧಾರ್ಮಿಕ ತಾಣವು ಹೌದು.

ಮೈ ತಳೆದು ಹರಿಯುವ ಸೌಪರ್ಣಿಕ, ವರಾಯಿ, ಕುಬ್ಜೆ, ಕೆದಕೆ, ಚಕ್ರೆ ಈ ಐದು ಪವಿತ್ರ ನದಿಗಳು ಸಂಗಮವಾಗುವ ಪಂಚಗಂಗಾವಳಿ ನದಿ ಹರಿದು ಸುಂದರತೆಗೆ ಮತ್ತೊಂದು ಸಾಕ್ಷಿಯಾಗಿದೆ ಕುಂದಾಪುರ.

ಕರಾವಳಿ ಭಾಗದ ಹಲವು ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರಗಳಿಂದ ಹರಿದು ಬರುವ ಈ ಐದು ಪವಿತ್ರ ನದಿಗಳು ಇಲ್ಲೆ ಸಂಗಮವಾಗಿ ಗಂಗೊಳ್ಳಿ ಮಾರ್ಗವಾಗಿ ಪಂಚಗಂಗಾವಳಿ ಹೆಸರಿನಲ್ಲಿ ಸಮುದ್ರ ಸೇರುತ್ತದೆ, ಮಂಗಳೂರಿನ ಕರಾವಳಿ ಭಾಗದಿಂದ ಕಾರವಾರದವರೆಗೂ ನಮ್ಮ ಸಮಾಜದ 90% ಜನರು ಮೀನುಗಾರಿಕೆ ಗೆ ಅವಲಂಬಿತವಾಗಿದೆ, ನದಿ ಮತ್ತು ಸಮುದ್ರಗಳನ್ನು ನಂಬಿ ಬದುಕು ಕಟ್ಟಿಕೊಂಡ ಕೊಂಕಣಿ ಖಾರ್ವಿ ಸಮಾಜದವರು ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗುರಿತಿಸಿಕೊಳ್ಳುತ್ತಾರೆಂದರೆ ಅದರ ಹಿಂದಿರುವ ಶಕ್ತಿ ಮೀನುಗಾರಿಕೆ ಹಾಗೂ ನಾವು ನಂಬಿಕೊಂಡ ಬಂದ ಗಂಗಮಾತೆ.

ಕುಂದಾಪುರ ದ ಮೀನುಗಾರರಿಗೆ ಸಮುದ್ರದ ಪಾಲು ಇಲ್ಲದಂತಾದರೂ ಈ ಪಂಚಾಗಂಗ ನದಿಯನ್ನೆ ನಂಬಿ ಜೀವನ ಕಟ್ಟಿಕೊಂಡು ಬರುತ್ತಿರುವ ಮೀನುಗಾರರಿಗೂ ಒಡಲಿಂದ ಅನ್ನ ನೀಡಿ ಮೀನುಗಾರರ ಬದುಕಿನ ಅನ್ನದಾತೆಯಾಗಿರುವ ಪಂಚಗಂಗಾವಳಿ ನದಿಯ ಒಡಲು, ಇಂದು ನಮ್ಮ ನಮ್ಮ ಮನೆಯ ಕಸಗಳು, ಪಾತ್ರೆ ತಟ್ಟೆಗಳು ತೊಳೆದ ನೀರುಗಳು, ಸರಾಗ ಹರಿವಿನಿಂದ ಇಂದು ಕಲುಶಿತವಾಗುತ್ತಿರುವುದು ಕೂಡ ಅಕ್ಷರಶಃ ಸತ್ಯ,

ದಡದಲ್ಲಿ ನಿಂತು ಕೈ ಯಲ್ಲಿ ಕಸದ ಪೊಟ್ಟಣ ಮೈಯಾ ಭಾರವನ್ನೇಲ್ಲಾ ಕೈ ಗೆ ಇಟ್ಟು ನದಿಗೆ ಕಸದ ಪೊಟ್ಟಣ ಎಸೆಯುವಾಗ ಒಮ್ಮೆಯಾದರೂ ಮನಸ್ಸಿಗೆ ಇವಳು ನಮ್ಮ ಅನ್ನಧಾತೆ ಎಂಬ ಭಾವನೆ ಬರಬೇಕಿದೆ..

ವ್ರತ್ತಿಯ ಪ್ರವತ್ತಿಯಲ್ಲಿ ಆಯುಧ ಪೂಜೆಯಂದು ಎಲ್ಲಾ ವರ್ಗದಿಂದ ಅವರರವರಿಗೆ ಉದ್ಯೋಗ ನೀಡುವ ಆಯುಧಗಳಲ್ಲಿ ದೇವರನ್ನು ಕಂಡು ಪೂಜೆ ಸಲ್ಲಿಸುದುಂಟು, ಭೂಮಿತಾಯಿ ಅನ್ನಧಾತೆಯಾಗಿರುವ ರೈತರು ವರ್ಷದಲ್ಲಿ ಒಮ್ಮೆ ಭೂತಾಯಿಗೆ ಫೂಜೆ ಸಲ್ಲಿಸುದುಂಟು, ನಾವು ಏನನ್ನು ನೀಡದೆ ನಮಗೆ ಆಸರೆಯಾಗಿರುವ ನದಿಗಳನ್ನು ಕಲುಸಿತ ಮಾಡುದೆಂದರೆ ಇದು ನಮ್ಮ ದೌರ್ಭಾಗ್ಯ ವಲ್ಲವೇ

ಬಹುಷ ಎಲ್ಲಿಯೂ ಕಾಣ ಸಿಗದ ಐದು ನದಿಗಳ ದಡಗಳಲ್ಲಿರುವ ನಾವೇ ಭಾಗ್ಯವಂತರು ಅವಳ ಒಡಲ ತುತ್ತು ತಿನ್ನುವ ನಾವೇ ಧನ್ಯರಲ್ಲವೇ..? ನಮಗೆ ಅನ್ನ ನೀಡುವ ಇವಳ ಒಡಲನ್ನು ಶುಚಿಯಾಗಿಡುವ, ಪೂಜಿಸುವ ಹೊಣೆ ನಮ್ಮದಲ್ಲವೆ?

ಇವಳೇ ಅಲ್ಲವೇ ನಮ್ಮ ಸಂಪತ್ತು ಇವಳಿಗೂ ಗಂಗಾರತಿ ಮಾಡುವ ಹೊಣೆ ನಮ್ಮದಲ್ಲವೇ..?

“ಸಂಕಲ್ಪಿಸೋಣ ನಮ್ಮ ನದಿಯ ಶುಚಿತ್ವಗಾಗಿ” ಇವಳ ಆರತಿಗಾಗಿ”

ಎಸ್. ಸುನೀಲ್ ಖಾರ್ವಿ, ಕುಂದಾಪುರ

Leave a Reply

Your email address will not be published. Required fields are marked *