ಅನುಕಂಪ ಬೇಡ ಅವಕಾಶ ನೀಡಿ ಎನ್ನುವ ಚೈತನ್ಯದ ಚಿಲುಮೆ ಅಕ್ಷಯ್ ಮೇಸ್ತ ಹೊನ್ನಾವರ.

ವಿಕಲಚೇತನರು ಎಂದರೆ ಅಸಹಾಯಕರಲ್ಲ ಅನುಕಂಪದ ಬದಲು ಅವಕಾಶ ನೀಡಿದರೆ ನಾವು ಸಮಾಜದಲ್ಲಿ ಯಾರಿಗೇನು ಕಮ್ಮಿ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸುತ್ತೇವೆ ಎನ್ನುವ ಅಚಲವಾದ ಆತ್ಮವಿಶ್ವಾಸದ ನುಡಿಗಳನ್ನಾಡುವ ಅಕ್ಷಯ ಮೇಸ್ತ ಸುತ್ತಲಿನ ಸಮಾಜದಲ್ಲಿ ವಿಶೇಷ ಚೇತನವಾಗಿ ಕಾಣಿಸುತ್ತಾರೆ.x ಪಟ್ಟಣದ ಉದ್ಯಮ ನಗರ ನಿವಾಸಿಯಾಗಿರುವ ಅಕ್ಷಯ ಮೇಸ್ತ ತಂದೆ ಲೋಲಯ್ಯ ಮೇಸ್ತ ಹಾಗೂ ತಾಯಿ ಲಕ್ಷ್ಮೀ ಮೇಸ್ತ ಅವರ ಕಿರಿಯ ಮಗನಾದ ಅಕ್ಷಯನಿಗೆ ಹುಟ್ಟುವಾಗಲೇ ಒಂದು ಕಾಲು ದುರ್ಬಲವಾಗಿರುವ ಸಂಗತಿ ತಿಳಿದಿದ್ದು ಆತ ಅಂಬೆಗಾಲಿಡಲು ಪ್ರಾರಂಭಿಸಿದಾಗಲೇ.

ತಮ್ಮ ಮಗು ಇತರರಂತೆ ಅಲ್ಲ ಎನ್ನುವ ಸಣ್ಣ ನೋವು ಮನದಲ್ಲಿದ್ದರೂ ಯಾವುದನ್ನೂ ಮಗುವಿನ ಎದುರು ತೋರಿಸಿಕೊಳ್ಳದ ಹೆತ್ತವರು ಮಗುವನ್ನು ಸಮಾಜದಿಂದ ಪ್ರತ್ಯೇಕಿಸಿದೇ ಎಲ್ಲರ ನಡುವೆ ಒಂದಾಗಿ ಬೆಳೆಯುವಂತೆ ನೋಡಿಕೊಂಡರು

ಇದರಿಂದಾಗಿ ಬಾಲಕ ಅಕ್ಷಯ ನಿಗೆ ತನ್ನ ಒಂದು ಕಾಲು ಅಷ್ಟಾಗಿ ಸಹಕರಿಸುತ್ತಿಲ್ಲ ಎನ್ನುವ ಸಂಗತಿ ಯಾವತ್ತು ದೊಡ್ಡದಾಗಿ ಕಾಣಿಸಲೇ ಇಲ್ಲ ಇತರರಿಗೆ ದೌರ್ಬಲ್ಯವಾಗಿ ಕಾಣಿಸುವುದು ನನ್ನ ಪಾಲಿಗೆ ಸಾಮರ್ಥ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹುಡುಗ ನೋಡನೋಡುತ್ತಲೇ ಮನೆಮಂದಿಗೆ ಹೊರೆಯಾಗುವ ಬದಲು ಸಮಾಜಕ್ಕೆ ಸ್ಪೂರ್ತಿಯಾಗಿ ಬೆಳೆದು ನಿಂತಿರುವುದು ಆತನ ಆತ್ಮಸ್ಥೈರ್ಯವನ್ನು ಪ್ರತಿಬಿಂಬಿಸುತ್ತಿದೆ.

ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಹೊನ್ನಾವರದಲ್ಲಿ ಪೂರೈಸಿ ಕೊಂಡಿರುವ ಅಕ್ಷಯ ಪ್ರಸ್ತುತ ಯು.ಕೆ. ಸೌಹಾರ್ದ ದಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ದುಡಿಯುತ್ತಿದ್ದಾನೆ ಅಂಗವೈಕಲ್ಯವನ್ನು ಮೆಟ್ಟಿನಿಂತು ಎದುರಾದ ಸವಾಲುಗಳನ್ನೆಲ್ಲಾ ಸಂಭಾಳಿಸಿಕೊಂಡು ಮುನ್ನುಗ್ಗುತ್ತಿರುವ ಈತ ತನ್ನ ಸಾಮಾಜಿಕ ಕಳಕಳಿ ಹಾಗೂ ತೊಡಗಿಸಿಕೊಳ್ಳುವಿಕೆ ಯಿಂದಲೂ ಮನೆಮಾತಾಗಿದ್ದಾರೆ

ಹೊನ್ನಾವರ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಅಪರಿಮಿತ ಉತ್ಸಾಹದಿಂದ ತೊಡಗಿಸಿಕೊಂಡಿರುವ ಈತ ತನ್ನದೇ ಮನಸ್ಥಿತಿಯ ಹತ್ತಾರು ಗೆಳೆಯರೊಂದಿಗೆ 50 ಕ್ಕೂ ಹೆಚ್ಚು ವಾರಗಳಿಂದ ಸ್ವಯಂ ಪ್ರೇರಿತವಾದ ಶ್ರಮದಾನಗಳಲ್ಲಿ ಪಾಲ್ಗೊಂಡಿದ್ದಾನೆ.

ಹೆತ್ತವರಿಗೆ ಕೆಟ್ಟ ಹೆಸರು ತರುವ ಕೆಲಸ ಒಂದನ್ನು ಬಿಟ್ಟು ನೀನು ಏನು ಬೇಕಾದರೂ ಮಾಡು ಎಂದು ತಂದೆ – ತಾಯಿಯ ಮಾತುಗಳನ್ನೇ ಆದರ್ಶವಾಗಿಟ್ಟುಕೊಂಡು ಸಮಾಜಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸಬೇಕೆಂದು ಹೋರಾಡುತ್ತಿರುವುದು ಇತರರಿಗೂ ಮಾದರಿಯಾಗುವಂತದ್ದು.

ದೈಹಿಕವಾಗಿ ಸದೃಢವಾಗಿರುವ ಎಷ್ಟೋ ಮಂದಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ ಕಾರ್ಯದಲ್ಲಿಯೇ ತಮ್ಮ ಶಕ್ತಿ ಸಾಮರ್ಥ್ಯ, ಸಮಯವನ್ನು ವ್ಯಯಿಸುತ್ತಿರುವ ಹೊತ್ತಲ್ಲಿ ಒಂದು ಕಾಲಿನ ಅಸಹಕಾರದ ನಡುವೆಯೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಹೆಣಗಾಡುತ್ತಲೇ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅಕ್ಷಯನ ಆತ್ಮವಿಶ್ವಾಸ ಇತರರಿಗೂ ಸ್ಪೂರ್ತಿ. ಇಲ್ಲಿ ಸ್ವ ಹಿತದ ಕಾರ್ಯವಲ್ಲ, ಸಮಾಜಕ್ಕಾಗಿ, ದೇಶಕ್ಕಾಗಿ ಮಿಡಿಯುವ ಮನಸ್ಸಿನ ಕಾರ್ಯ.

ದೇಶ ಹಾಗೂ ಸಮಾಜ ನಮಗೇನು ಮಾಡಿದೆ ಅನ್ನುವುದಕಕ್ಕಿಂತ ನಾವು ದೇಶ ಹಾಗೂ ಸಮಾಜಕ್ಕೆ ಏನು ಮಾಡಿದ್ದೇವೆ ಎಂಬುದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಸಂವಿಧಾನದಲ್ಲಿ ಉಲ್ಲೇಖಿಸಿರುವ ಕೇವಲ ಹಕ್ಕುಗಳ ಬಗ್ಗೆ ಅಷ್ಟೇ ಧ್ವನಿ ಎತ್ತುತ್ತೇವೆ ಆದರೆ ದೇಶಕ್ಕಾಗಿ ಸಮಾಜದ ಒಳಿತಿಗಾಗಿ ನಾವು ಮಾಡಬೇಕಾದ ಕರ್ತವ್ಯವನ್ನೇ ಮರೆಯುತ್ತೀವಿ…. ಪರರಿಗಾಗಿ, ಸಮಾಜದ ಹಿತಕ್ಕಾಗಿ ತುಡಿಯುವ ಯುವ ಮನಸ್ಸುಗಳು ಎಂದೆಂದಿಗೂ ಅಮರವಾಗಿರುತ್ತವೆ.

source :ಲಕ್ಷ್ಮೀಕಾಂತ ಗೌಡ

Leave a Reply

Your email address will not be published. Required fields are marked *