ಕೈ ಬೆರಳು ತುಂಡಾಗಿ ನೇತಾಡುತಿತ್ತು….!!?

ಕೈ ಬೆರಳು ತುಂಡಾಗಿ ನೇತಾಡುತಿತ್ತು. ಆದರೂ ಧೈರ್ಯಗೆಡಲಿಲ್ಲ ಈ ದೈತ್ಯ ಪ್ರತಿಭೆ. ಆತ್ಮ ಸಾಕ್ಷಿಯಿಂದ Finix ನಂತೆ ಎದ್ದು ನಿಂತ.....ಮುಂದೆ ನಡೆದದ್ದೇ ವಿಸ್ಮಯ...!! ವೆಂಕಟೇಶ್ ಏನ್ ಪಟೇಲ್ ಗಂಗೊಳ್ಳಿ Glass Arts ನಲ್ಲಿ ಹೊಸ ಮಿಂಚು..

ಈತನ ಕುಟುಂಬದಲ್ಲಿ ಯಾರೂ ಚಿತ್ರಕಾರರಲ್ಲ. ಚಿತ್ರಗಾರಿಕೆಯ ಯಾವುದೇ ಹಿನ್ನಲೆಯಲ್ಲಿ ಬೆಳೆಯದ ಈ ಹುಡುಗನಿಗೆ ಚಿತ್ರಗಾರಿಕೆ ದೈವದತ್ತವಾಗಿ ಮೂಡಿ ಬಂತು.

ಬಾಲ್ಯದಿಂದಲೂ ವಿವಿಧ paintings, ಕಲಾಕೃತಿ ಗಳನ್ನೂ ಬಿಡಿಸುತ್ತಿದ್ದ ಈತ ಭಾವಚಿತ್ರಗಳನ್ನು ಅಷ್ಟೇ ನಿಖರವಾಗಿ ಫಿನಿಶಿಂಗ್ ನೀಡುತ್ತಾ ಬರೆಯುತ್ತಿದ್ದ. ಈತನ ಥರ್ಮಕಾಲ್ ಆರ್ಟ್ಸ್ Really so Beautiful and Amazing ಮನಸ್ಸು ಮಾಡಿದ್ದರೆ ಶಾಲಾ ಡ್ರಾಯಿಂಗ್ ಮಾಸ್ಟರ್ ಅಗಬಹುದಿತ್ತು. ಒಳ್ಳೆಯ ಅವಕಾಶ ಕೈ ತಪ್ಪಿ ಹೋದರೂ ತನ್ನ ಚಿತ್ರಗಾರಿಕೆಯನ್ನು ಮಾತ್ರ ಬಿಡದೆ ಮುಂದುವರಿಸಿದ…

ಕೈ ಯಲ್ಲಿ ಬ್ರಶ್, ಪೆನ್ ಸಿಕ್ಕರೆ ಮುಗಿತು ಅಲ್ಲೊಂದು ಅದ್ಭುತವನ್ನೆ ಸ್ರಷ್ಟಿಸುತ್ತಿದ್ದ. ಈತ ಬಿಡಿಸಿದ ಸಾಯಿ ಬಾಬಾ ಆರ್ಟ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಿವನ ಪೇಂಟಿಂಗ್ ವಾವ್…. ಹೀಗೆ ಮಾಂತ್ರಿಕ ಶಕ್ತಿಯ ಕೈ ಚಳಕ ದಲ್ಲಿ ಚಿತ್ರಗಳ ವೈಭವವನ್ನೇ ಮೆರೆಸುವ ಈ ಅದ್ಭುತ ಚಿತ್ರಗಾರನ ಹೆಸರು ಶ್ರೀ ವೆಂಕಟೇಶ್ ನರಸಿಂಹ ಪಟೇಲ್ ಗಂಗೊಳ್ಳಿ

SSLC ಅದ ಬಳಿಕ ಕೆಲವು ವರ್ಷ ತನ್ನ ಅಣ್ಣ ದಾಮೋದರ್ ಪಟೇಲ್ ನೊಂದಿಗೆ decoration ಕೆಲಸದಲ್ಲಿ ತೊಡಗಿ ಅಲ್ಲಿ ತನ್ನ ಆರ್ಟ್ಸ್ ಮೂಲಕ ಗಮನ ಸೆಳೆದ. ನಂತರ ಬದುಕು ಕಟ್ಟಿ ಕೊಳ್ಳಲು ಮಾಯಾ ನಗರಿ ಬೆಂಗಳೂರು ಗೆ ಹೋದ ವೆಂಕಟೇಶ್ ಗೆ ಅಲ್ಲಿ ಸಿಕ್ಕಿದ ಕೆಲಸ ಗ್ಲಾಸ್ ಆರ್ಟ್ಸ್….!!! ವಿಚಿತ್ರವೆಂದರೆ ಗ್ಲಾಸ್ ಆರ್ಟ್ಸ್ ಬಗ್ಗೆ ಈತನಿಗೆ ಏನೂ ಗೊತ್ತಿರಲಿಲ್ಲ. ಗ್ಲಾಸ್ ಮೇಲೆ ಆರ್ಟ್ಸ್ ಮಾಡೋದು ಖಂಡಿತ ಸುಲಭದ ಕಾರ್ಯ ವಾಗಿರಲಿಲ್ಲ.

ಸ್ವಲ್ಪ ತಪ್ಪಿದರೂ,ಎಡವಿದರೂ ಭಾರಿ ಬೆ ಲೆ ಯ ಗ್ಲಾಸ್ ಶೀಟ್ ಗಳು ಮೂಲೆ ಸೇರುತ್ತಿತ್ತು. ಅಂತಹ ಸೂಕ್ಷ್ಮ ಕಲೆಗಾರಿಕೆಗೆ ವೆಂಕಟೇಶ್ ಎದೆಯೊಡ್ಡಿ ನಿಂತು ಬಿಟ್ಟ. ಮಾಲೀಕ ನ ಮಾರ್ಗ ದರ್ಶನ ದಲ್ಲಿ ಆ ಕಲೆಗಾರಿಕೆಯನ್ನು ಕೆಲವು ತಿಂಗಳಲ್ಲಿ ಕಲಿತು ಅಚ್ಚರಿ ಮೂಡಿಸಿ ಬಿಡುತ್ತಾನೆ. ಮೊದಲೇ ಅದ್ಭುತ ಆರ್ಟಿಸ್ಟ್ ಆಗಿರುವ ವೆಂಕಟೇಶ್ ಗೆ ಗ್ಲಾಸ್ ಮೇಲೆ ಗೆರೆ ಎಳೆಯುವ ತಂತ್ರಗಾರಿಕೆಯ ಒಳ ಹೊರಗೂ ಅರಿಯಲು ಹೆಚ್ಚು ಸಮಯ ಬೇಕಿರಲಿಲ್ಲ. ಕೆಲವು ತಿಂಗಳಲ್ಲಿ ಒಬ್ಬ ಅದ್ಬುತ ಗ್ಲಾಸ್ ಆರ್ಟ್ಸ್ ಆರ್ಟಿಸ್ಟ್ ಆಗಿ ಬೆಂಗಳೂರಿನಲ್ಲಿ ಎಲ್ಲರ ಗಮನ ಸೆಳೆದ. ಹಳ್ಳಿಯಿಂದ ಹೋದ ಈ ಕಲೆಗಾರ ಅಲ್ಲಿ ಜಾದು ಮಾಡಿ ಬಿಟ್ಟ…..

ಇಲ್ಲಿರುವ ಆತನ ಚಿತ್ರಗಳು ಈತನ ಪ್ರತಿಭೆಯ ಸತ್ಯತೆಗೆ ಜ್ವಲಂತ ಸಾಕ್ಷಿಯಾಗಿದೆ. ಇಂದು ಶ್ರೀಮಂತರ,ಸಿನಿಮಾ ನಟರ ಮನೆ ಆಫೀಸ್ ನಲ್ಲಿ ವೆಂಕಟೇಶ್ ಆರ್ಟ್ಸ್ ನಲಿಯುತ್ತಿದೆ. ಸ್ಟಾರ್ ಹೋಟೆಲ್ ಗೋಡೆ ಬಾಗಿಲು ಗಳಲ್ಲಿ ವೆಂಕಟೇಶ್ ಆರ್ಟ್ಸ್ ವಿಸ್ಮಯತೆಯನ್ನು ಹುಟ್ಟು ಹಾಕಿಸಿದೆ. ಸೆಲೆಬ್ರಿಟಿಗಳು ಈತನ ಆರ್ಟ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರಿವುದು ನಿಜಕ್ಕೊ ಉತ್ತಮ ಬೆಳವಣಿಗೆ.

ಹೀಗೆ ತನ್ನ ಶ್ರಮದಿಂದ ತನ್ನ ಬದುಕನ್ನು ಕಟ್ಟಿ ಕೊಂಡ ವೆಂಕಟೇಶ್ ತನ್ನ ಆರ್ಟ್ಸ್ ಗಳಿಂದ ಅಲ್ಲೊಂದು ಹವಾ ಹುಟ್ಟು ಹಾಕಿಸಿದ…ವೆಂಕಟೇಶ್ ಆರ್ಟ್ಸ್ ಗೆ ಬಲು ಬೇಡಿಕೆ ಬರುತ್ತಿದ್ದರಿಂದ ಮಾಲೀಕರು ಈತನಿಗೆ ಪ್ರೀತಿ ತೋರಿಸುತ್ತ ಒಳ್ಳೆದಾಗಲಿ ನಿನಗೆ ಎಂದು ಹಾರೈಸಿದರು. ಹೀಗಿರುವಾಗ ಆ ಒಂದು ದಿನ ವೆಂಕಟೇಶ್ ಪಾಲಿಗೆ ಕೆಟ್ಟ ದಿನ . ರಾಕ್ಸ್ ಮೇಲೆ ಇದ್ದ ಗ್ಲಾಸ್ ಗಳನ್ನ ಕೆಳಗಿರಿಸಲು ವೆಂಕಟೇಶ್ ಅದನ್ನು ಎಳೆದ ಅಷ್ಟೇ….ಆಬ್ಭಾ..ಬಲು ಭಾರದ ಗ್ಲಾಸ್ ಒಂದು ಜಾರಿ ಒಮ್ಮೆಲೇ ಕೆಳಗಡೆ ಬೀಳುತ್ತದೆ. ಅದನ್ನು ತಡೆಯಲು ಪ್ರಯತ್ನ ಪಟ್ಟ ವೆಂಕಟೇಶ್ ಗೆ ಏನ್ ಆಗುತ್ತಿದೆ ಎಂದು ತಿಳಿಯುವಸ್ಥರಲ್ಲಿ ಅದು ಆತನ ಬಲ ಕೈ ನ ಬೆರಳು ಗಳನ್ನ ತುಂಡರಿಸಿ ಹಾಕಿತ್ತು. ನೇತಾಡುತ್ತಿದ್ದ ಬೆರಳುಗಳು ನೋಡಿದ ವೆಂಕಟೇಶ್ ಗೆ ಕಣ್ಣೆದುರು ಮುಂದಿನ ತನ್ನ ಬದುಕು ಹೇಗೆ ಎಂಬ ಕರಾಳ ದಿನಗಳು ಮುಂದೆ ಬಂದಂತೆ ಅಯೀತು. ಬದುಕು ನೀಡಿದ ಬೆರಳುಗಳು, ಮೆಚ್ಚುಗೆ ನೀಡಿದ ಬೆರಳುಗಳು, ನೂರಾರು ಕಲಾಕೃತಿ ರಚಿಸಿ ಬೆರಗು ಮೂಡಿಸಿದ ಬೆರಳುಗಳು…..!!!ಇಂದು ಯಾವುದಕ್ಕೂ ಬೇಡವಾದಂತೆ ನೇತಾ ಡುತಿರುವದನ್ನು ಅರಗಿಸಿ ಕೊಳ್ಳಲು ಸಾಧ್ಯ ವಾಗಲಿಲ್ಲ ವೆಂಕಟೇಶ್ ಗೆ..ಆದರೂ ಎಲ್ಲವನ್ನೂ ಸಹಿಸಿದ. ಬ್ಯಾಂಡೇಜ್ ಕಟ್ಟಿಕೊಂಡು ಒಂದು ತಿಂಗಳು ಕೂಡ ಮನೆಯಲ್ಲಿ ಕುಳಿತಿರದ ವೆಂಕಟೇಶ್ ಕೆಲಸಕ್ಕೆ ಬಂದಾಗ ಎಲ್ಲರಿಗೂ ಶಾಕ್ ಆಗುತ್ತೆ. ಪ್ರಯತ್ನ ಪಟ್ಟರೂ ಬಲ ಕೈ ಯಾವುದಕ್ಕೂ ಒಪ್ಪದಿದ್ದಾಗ ಧೈರ್ಯ ಗೆಡದ ವೆಂಕಟೇಶ್ ಅಂದಿನಿಂದ ಎಡ ಕೈ ಗೆ ತರಬೇತು ನೀಡುತ್ತಾನೆ. ಎಡ ಕೈ ನಿಂದಲೇ ಗೆರೆ ಎಳೆಯುತ್ತಾನೆ, ಚಿತ್ರ ಬರೆಯಲು ಆರಂಭಿಸತ್ತಾನೆ ಕಷ್ಟ..ಕಷ್ಟ…ಯಾವುದಕ್ಕೂ ಜಗ್ಗಲ್ಲ ವೆಂಕಟೇಶ್..

ಕೊನೆಗೂ ಈತನ ಹಠ ಪ್ರಯತ್ನ ಗೆಲ್ಲುತ್ತದೆ..ಎಡ ಕೈ ಈತ ಹೇಳಿದಂತೆ ಕೇಳಲು ಆರಂಭಿಸತ್ತದೆ. ಸುಂದರ ಕಲಾಕೃತಿಗಳು ಭಾರಿ ಮೊತ್ತದ ಗಾಜಿನ ಮೇಲೆ ವೆಂಕಟೇಶ್ ಹೇಳಿದಂತೆ, ಬರೆದಂತೆ, ಯೋಚಿದಂತೆ ಅರಳುತ್ತಾ ಹೋಗುತ್ತದೆ….finix ನಂತೆ ವೆಂಕಟೇಶ್ ಮೇಲಕ್ಕೆ ಎದ್ದು ನಿಲ್ಲುತ್ತಾನೆ. ಎಡ ಕೈ ಯಿಂದ ಬಿಡಿಸಿದ ಚಿತ್ರ ಗಳನ್ನ ನೋಡಿದ ಬಲ ಕೈ ನಾಚಿ ನೀರಾಯಿತು. ಹಲವು ಪ್ರಥಮಗಳಿಗೆ ವೆಂಕಟೇಶ್ ಸಾಕ್ಷಿ ಆಗುತ್ತಾನೆ.ಒಂದೊಂದು ಕಲಾಕೃತಿಗಳು ಒಂದೊಂದನ್ನು ಮೀರಿಸುವಂತೆ ವೆಂಕಟೇಶ್ ಸ್ವತಹ ತನಗೆನೆ ಸವಾಲ್ ಹಾಕಿ ರಚಿಸುತ್ತಾನೆ. Glass Arts ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಹಳ್ಳಿಯ ಯುವಕನೋರ್ವ ಮಾಯಾ ನಗರಿ ಬಣ್ಣದ ನಗರ ಬೆಂಗಳೂರ್ ನಲ್ಲಿ ಅಚ್ಚರಿ ಹುಟ್ಟಿವಂತೆ ಬೆಳೆಯುತ್ತಾನೆ.

ಇದೀಗ ತನ್ನ ಸ್ನೇಹಿತ ನೊಂದಿಗೆ SV Glass Arts ಅನ್ನು ಸ್ವತಹ ಆರಂಭಿಸುವ ಮೂಲಕ ಹೊಸ ಬದುಕನ್ನು ಕಟ್ಟಿಕೊಂಡು ನೂತನ ಕಲಾಕೃತಿಗೆ ಜೀವ ನೀಡುತಿದ್ದಾನೆ.ಇದೀಗ ಎರಡು ಕೈ ಗಳಿಂದಲೂ ಚಿತ್ರ ಬರೆಯುವ ವೆಂಕಟೇಶ್ ಆತ್ಮ ಸ್ಟೈರ್ಯ ಇದ್ದರೆ ಏನೂ ಸಾಧಿಸಬಹುದು ಎನ್ನುತ್ತಾನೆ. ಯಾವುದಕ್ಕೂ ಹೆದರ ಬಾರದು. ಅನಿವಾರ್ಯತೆಯ ಸಂಧರ್ಭಗಳು ಎನನ್ನೂ ಸಾಧಿಸುವಂತೆ ಮಾಡುತ್ತದೆ ಎನ್ನುವ ವೆಂಕಟೇಶ್ ಎಲ್ಲರಿಗೂ ಒಳ್ಳೆಯ ಉದಾಹರಣೆ.

ಬಹುಮುಖ ಪ್ರತಿಭಾವಂತ ವೆಂಕಟೇಶ್ ಒಬ್ಬ ಒಳ್ಳೆಯ ಕ್ರಿಕೆಟ್ ರ್ ಕೂಡ ಹೌದು.ಓಪನಿಂಗ್ ಬ್ಯಾಟ್ಸ್ ಮ್ಯಾನ್ ಅಲ್ಲದೆ ಅಲ್ಲ್ರೌಂಡ್ರ್ ಆಗಿರುವ ವೆಂಕಟೇಶ್ ಮಹಿಳೆಯರು ನಾಚುವಂತೆ ಸುಂದರವಾದ ರಂಗೋಲಿ ಬಿಡಿಸುತ್ತಾರೆ.

ವಿಭಿನ್ನತೆಗಳ ಕಣಜ ಈತನ ಕಲಾಕೃತಿ. ನೋಡಲು ಕಣ್ಣಿಗೆ ಹಬ್ಬ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ನಿನ್ನದಾಗಲಿ ವೆಂಕಟೇಶ್.. ನೂರು ವರ್ಷ ಚೆನ್ನಾಗಿರು.

God bless your family

ರವಿ ಕುಮಾರ್ ಗಂಗೊಳ್ಳಿ

One thought on “ಕೈ ಬೆರಳು ತುಂಡಾಗಿ ನೇತಾಡುತಿತ್ತು….!!?

  1. ವೆಂಕಟೇಶ್ ಅವರ ಸಾಧನೆ ತುಂಬಾ ಅಪರೂಪದ ಸಾಧನೆ. ಸವಾಲನ್ನು ಮೆಟ್ಟಿ ನಿಂತು ಬೆಳೆದ ಅವರ ಇಚ್ಛಾಶಕ್ತಿಗೆ ತಲೆದೂಗಲೇಬೇಕು….

Leave a Reply

Your email address will not be published. Required fields are marked *