ಅನಾಥ ಮಗುವೊಂದು ಅಳುತಿತ್ತು…?

ಅನಾಥ ಮಗುವೊಂದು ಅಳುತಿತ್ತು, ಸ್ನಾನ ಮಾಡಿಸಿ ಮುದ್ದು ಮಾಡಿ ಒದ್ದೆಯಾದ ಮೈಯೋರೆಸೋ ಮಮತೆಯ ಕೈಗಳಿಲ್ಲವೆಂದು.

ಹೆಲ್ಫಿo ಗ್ ಹ್ಯಾಂಡ್ ಕುಂದಾಪುರ ಇವರಿಗೆ ಬಂದ ಮನವಿಯನ್ನು ಪರಿಗಣಿಸಿ ಸಂಸ್ಥೆಯ ಪದಾಧಿಕಾರಿಗಳು & ಸದಸ್ಯರೆಲ್ಲರೂ ಸೇರಿ, ನಿನ್ನೆ ಸಂತೆಕಟ್ಟೆಯ ಮಮತೆಯ ತೊಟ್ಟಿಲು ಶ್ರೀ ಕೃಷ್ಣ ಅನುಗ್ರಹ ಅನಾಥಾಶ್ರಮಕ್ಕೆ ಭೇಟಿನೀಡಿ ಆಶ್ರಮದ ನಿರ್ವಾಹಕರಾದ ಶ್ರೀ ಉದಯ್ ಸರ್ ರವರನ್ನು ಭೇಟಿಯಾಗಿ ಕುಶಲೋಪಕಾರಿ ವಿಚಾರಿಸಿ, ನಮ್ಮ ಹೆಲ್ಫಿoಗ್ ಹ್ಯಾಂಡ್ ಕುಂದಾಪುರದ ವತಿಯಿಂದ ಆಶ್ರಮಕ್ಕೆ ಅವಶ್ಯ ಇರುವ ವಸ್ತುಗಳು ಮತ್ತು₹ 21000 ಮೊತ್ತದ ಚೆಕ್ಕನ್ನು ನೀಡಲಾಯಿತು..ಮತ್ತು ಮುಂದಿನ ದಿನದಲ್ಲಿ ನಮ್ಮ ಸಂಸ್ಥೆಯು ಆಶ್ರಮದ ಜೊತೆ ಸದಾ ಸೇವೆಗೆ ಸಿದ್ದಾ ಎನ್ನುವ ಭರವಸೆಯನ್ನು ನೀಡಲಾಯಿತು.

ಮಮತೆಯ ತೊಟ್ಟಿಲು ಅನಾಥಶ್ರಮದಲ್ಲಿ ತಿಂಗಳಿಗೆ 2ಬಾರಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರೆಲ್ಲರೂ ಸೇರಿ ಆಶ್ರಮದ ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಂಸ್ಥೆಯ ಹಿತೈಷಿಗಳು ಆಗಿರುವ ಯುವ ಉದ್ಯಮಿ ರವಿ ರಟ್ಟಾಡಿಯವರು ನಮ್ಮೊಂದಿಗೆ ಸಂಪೂರ್ಣ ಸಹಕರಿಸಿದರು. ಮಹೇಶ್ ಫುಡ್ ಸಂಸ್ಥೆಯ ಮಹೇಶ್ ಅಣ್ಣರವರು 1 ಬಾಕ್ಸ್ ಪುಟ್ಟ ಕಂದಮ್ಮಗಳಿಗೆ ತಿಂಡಿ ತಿನಿಸು ನೀಡಿ ಸಹಕರಿಸಿರುತ್ತಾರೆ ಇವರಿಗೆ ಧನ್ಯವಾದಗಳು.

ಕೋವಿಡ್ ನಿಯಮವನ್ನು ಅನುಸರಿಸಿ ನಡೆದ ಈ ಕಾರ್ಯದಲ್ಲಿ ಸಂಸ್ಥೆಯ ಕುಂದಾಪುರದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಕಾರ್ಯಧ್ಯಕ್ಷ ಗುರುಚರಣ್ ಗಂಗೊಳ್ಳಿ, ಕಾರ್ಯದರ್ಶಿ ಗುರುಪ್ರಸಾದ್ ಖಾರ್ವಿ ಸದಸ್ಯರುಗಳಾದ ಸುನಿಲ್ ಖಾರ್ವಿ ತಲ್ಲೂರ್, ದೀಪಕ್ ಖಾರ್ವಿ, ಅವಿನಾಶ್, ಚೇತನ್ ಖಾರ್ವಿ, ಸಚಿನ್ ಖಾರ್ವಿ, ಸುಹಾಸ್ ಖಾರ್ವಿ, ರಮೇಶ್ ಗಂಗೊಳ್ಳಿ, ಹಾಗೆಯೇ ಪ್ರತಿಯೊಂದು ಕೆಲಸದಲ್ಲಿ ಸಹಾಯ ಮಾಡಿ ಸಹಕರಿಸುತ್ತಿರುವ ರವೀಂದ್ರ ರಟ್ಟಾಡಿಯವರು ಉಪಸ್ಥಿತರಿದ್ದರು.

Report: www.kharvionline.com

Leave a Reply

Your email address will not be published. Required fields are marked *