ಕಡಲತಡಿಯ ನರ್ಕುಳ ಮತ್ತು ನದಿತಳದ ಮುಟುಂಗ

ನರ್ಕುಳ ಸಮುದ್ರ ತೀರದ ಮರಳಿನಲ್ಲಿ ಬಿಲ ತೋಡಿ ವಾಸಿಸುವ ವಿಶಿಷ್ಟ ಏಡಿ ಜಗತ್ತಿನಾದ್ಯಂತ ಸಮುದ್ರ ತೀರಗಳಲ್ಲಿ ವಾಸಿಸುವ ಈ ನರ್ಕುಳ ಏಡಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಭೇಧಗಳಿವೆ ಮೀನುಗಾರರಿಗೆ ಮತ್ತು ಕಡಲತಡಿಯ ವಿಹಾರಾರ್ಥಿಗಳಿಗೆ ಈ ಏಡಿಗಳು ಚಿರಪರಿಚಿತ ಇಂಗ್ಲೀಷ್ ಭಾಷೆಯಲ್ಲಿ ಇವನ್ನು ಪಿಶಾಚಿ ಏಡಿಗಳು ಅಂದರೆ ಗೋಸ್ಟ್ ಕ್ರಾಬ್ಸ್ ಎಂದು ಕರೆದರೆ ಕುಂದಾಪುರ ಬದಿ ಕನ್ನಡ ಮತ್ತು ಕೊಂಕಣಿಯಲ್ಲಿ ನರ್ಕುಳ ಎಂದು ಕರೆಯುತ್ತಾರೆ ಮತ್ತು ಉತ್ತರ ಕನ್ನಡ ಕಡೆ ಇವನ್ನು ವಾಂಟಿ ಜಳ್ಳಿ ಎಂದು ಕರೆಯುತ್ತಾರೆ

ಈ ಜಳ್ಳಿಗಳು ಗಂಟೆಗೆ ಹತ್ತು ಮೈಲಿ ವೇಗದಲ್ಲಿ ಓಡುತ್ತದೆ ಶತ್ರುಗಳಿಂದ ಪಾರಾಗುವ ಸಂದರ್ಭದಲ್ಲಿ ಇದರ ವೇಗ ಮತ್ತಷ್ಟು ಹೆಚ್ಚಾಗುತ್ತದೆ ಇವುಗಳು ವಾಸಿಸುವ ಬಿಲಗಳು ಮೂರುವರೆಯಿಂದ ನಾಲ್ಕು ಅಡಿಗಳ ತನಕ ಉದ್ದವಿರುತ್ತದೆ ಮನುಷ್ಯರು ಅಥವಾ ಇದರ ಶತ್ರುಗಳಾದ ಕಡಲಕ್ಕಿ ಹದ್ದು ನಾಯಿ ಮುಂತಾದ ಪ್ರಾಣಿಗಳನ್ನು ಕಂಡ ಕೂಡಲೇ ಬಿಲದ ಕಡೆ ಓಡುತ್ತದೆ ಅದು ಸಾಧ್ಯ ವಾಗದೇ ಇದ್ದಲ್ಲಿ ನೇರವಾಗಿ ಸಮುದ್ರದ ನೀರು ಅಪ್ಪಳಿಸುವ ತೇವಭರಿತ ಮರಳಿನಲ್ಲಿ ಕ್ಷಣ ಮಾತ್ರದಲ್ಲಿ ಹುದುಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತದೆ ನರ್ಕುಳ ಏಡಿಗಳಿಗೆ 360 ಡಿಗ್ರಿ ವಾಲುವ ಸೂಕ್ಷ್ಮ ಕಣ್ಣುಗಳಿದ್ದು ಸುತ್ತ ಮುತ್ತಲ ವಿದ್ಯಮಾನಗಳು ಅದಕ್ಕೆ ಸಂಪೂರ್ಣ ಗೋಚರವಾಗುತ್ತದೆ ಅಷ್ಟೇ ಅಲ್ಲ ಅವುಗಳು ಬಿಲ ತೋಡುವಾಗ ತಮ್ಮ ದೇಹಗಳನ್ನು 45 ಡಿಗ್ರಿ ಕೋನದಲ್ಲಿ ವಾಲಿಸಿಕೊಳ್ಳುತ್ತದೆ ಸಮುದ್ರದ ಹುಳುಗಳು ಸಣ್ಣಪುಟ್ಟ ಮೀನುಗಳು ಆಮೆಗಳ ಮರಿಗಳು ಮತ್ತು ಸತ್ತ ಮೀನುಗಳು ಇವುಗಳ ಪ್ರಮುಖ ಆಹಾರ ಇವುಗಳು ಬಿಲದಲ್ಲಿ ಇರುವಾಗಲೇ ಅರ್ಧ ಕೀ ಮಿ ದೂರದಿಂದಲೇ ಮನುಷ್ಯರ ಅಥವಾ ನಾಯಿಗಳ ಹೆಜ್ಜೆಸಪ್ಪಳವನ್ನು ಆಲಿಸುವ ಸಾಮರ್ಥ್ಯ ವನ್ನು ಹೊಂದಿವೆ ಅನತಿ ದೂರದಲ್ಲಿ ಪ್ರಾಣಿಗಳು ಬರುತ್ತಿರುವ ಸಂದರ್ಭದಲ್ಲಿ ಇವುಗಳ ಹೊಟ್ಟೆ ಭಾಗದಲ್ಲಿ ಸಂಕುಚಿತಗೊಳ್ಳುತ್ತದೆ ಸಮುದ್ರ ತೀರಗಳಲ್ಲಿ ಬಿಸಾಡುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳ ದೆಸೆಯಿಂದ ಇವುಗಳ ಆಸ್ಥಿತ್ವಕ್ಕೆ ಧಕ್ಕೆ ಬಂದಿದೆ ಎಂದು ಇತ್ತೀಚಿನ ವರದಿಯಲ್ಲಿ ತಿಳಿದು ಬಂದಿದೆ

ಇನ್ನು ನದಿತಳದ ಮುಟುಂಗ ಏಡಿಗಳ ಬಗ್ಗೆ ಹೇಳುವುದಾದರೆ ಇವುಗಳು ನರ್ಕುಳ ಏಡಿಗಳ ಕುಟುಂಬಕ್ಕೆ ಸೇರಿದಾಗಿದ್ದು ಹೆಚ್ಚು ಕಮ್ಮಿ ನರ್ಕುಳ ಏಡಿಯ ದೇಹಪ್ರಕೃತಿ ಹೊಂದಿದರೂ ಇದರ ಬೆನ್ನು ಭಾಗದ ಹೊರ ಮೈ ತುಂಬಾ ಬಲಿಷ್ಠ ವಾಗಿರುತ್ತದೆ ಈ ಹಿಂದೆ ನದಿಯಲ್ಲಿ ಟ್ರಾಲ್ ಬಲೆಯ ಮೀನುಗಾರಿಕೆಯಲ್ಲಿ ಈ ಮುಟುಂಗಗಳು ತುಂಬಾ ಸಿಗುತ್ತಿದ್ದವು ಇದನ್ನು ಯಾರೂ ತಿನ್ನುವುದಿಲ್ಲವಾದ್ದರಿಂದ ಮೀನುಗಾರರು ಸುರಕ್ಷಿತವಾಗಿ ಮರಳಿ ನದಿಗೆ ಬಿಡುತ್ತಿದ್ದರು ಟ್ರಾಲ್ ಬಲೆ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮುಟುಂಗಗಳು ತಮ್ಮ ನೆಲೆಯಲ್ಲಿ ಸುರಕ್ಷಿತವಾಗಿದೆ ಎಂದು ನಂಬಲಾಗಿದೆ ಈ ಮುಟುಂಗಗಳು ಕುಂದಾಪುರ ಬೊಬ್ಬುಕುದ್ರುವಿನ ಪಶ್ಚಿಮ ಭಾಗದಲ್ಲಿ ಮತ್ತು ಗಂಗೊಳ್ಳಿ ಉಪ್ಪಿನಕುದ್ರು ನದಿಯ ಆಳಭಾಗದಲ್ಲಿ ಟ್ರಾಲ್ ಬಲೆಗಳಿಗೆ ಸಿಗುತ್ತಿದ್ದವು ಈಗ ಕಾಣಸಿಗುವುದು ಅಪರೂಪ ಪಂಚಗಂಗಾವಳಿ ನದಿ ಪಾತ್ರ ಮತ್ತು ಸಮುದ್ರ ತೀರಗಳ ವೈಶಿಷ್ಟ್ಯತೆಗಳನ್ನು ಕೆದುಕುತ್ತಾ ಹೊರಟರೆ ಅದು ಬರೆದು ಮುಗಿಸಲಾಗದ ಅನಂತ ಗಮ್ಯದತ್ತ ನಮ್ಮನ್ನು ಕರೆದೊಯ್ಯುತ್ತದೆ

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *