ವಿಶ್ವ ರಕ್ತದಾನಿಗಳ ದಿನಾಚರಣೆ : ರಕ್ತದಾನ ಮಾಡಿ, ಜೀವ ಉಳಿಸಿ

‘ರಕ್ತದಾನ ಮಹಾದಾನ’ ಅನ್ನೋ ಮಾತಿದೆ. ಆದ್ರೆ ತುರ್ತು ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಅಗತ್ಯವಾದ ರಕ್ತ ಸಿಗದೇ ಅದೆಷ್ಟೋ ಜನರು ಪ್ರತಿ ದಿನ ಸಾವನ್ನಪ್ಪುತ್ತಿದ್ದಾರೆ. ತಂತ್ರಜ್ಣಾನ, ವೈದ್ಯಕೀಯ ಜಗತ್ತು ಎಷ್ಟೇ ಮುಂದುವರೆದಿದ್ದರೂ ರಕ್ತದ ಅಲಭ್ಯತೆಯ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇಂಥ ಸಂದರ್ಭಗಳಲ್ಲಿನ ಮ್ಮ ಕುಂದಾಪುರದ ಸುತ್ತ ಮುತ್ತಲಿನ ನವ ಯುವಕರು ಸೇರಿ ರಕ್ತದಾನಿಗಳ ಬಳಗ ಕುಂದಾಪುರ ಎಂಬ ಗುಂಪು ಮಾಡಿದ್ದೂ ಈಗಾಗಲೇ ಹಲವಾರು ಜನರಿಗೆ ರಕ್ತ ನೀಡಿ ಜೀವ ಮತ್ತು ಜೀವನ ನೀಡಿದ್ದಾರೆ.. ನಿಮಗೆ ಯಾವುದೇ ಗುಂಪಿನ ರಕ್ತದ ತುರ್ತು ಅವಶ್ಯಕತೆ ಇದ್ದಲ್ಲಿ ನಮ್ಮ ಗುಂಪನ್ನು ಸಂಪರ್ಕಿಸಿ ಹಾಗೆ ನಮಗೆ ಯಾವುದಾದರು ಗುಂಪಿನ ರಕ್ತ ಬೇಕಿದ್ದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ..

ಒಬ್ಬರಿಗಾಗಿ ಎಲ್ಲರೂ ಎಲ್ಲರಿಗಾಗಿ ಒಬ್ಬ

ರಕ್ತದಾನಿಗಳ ಬಳಗ ತಂಡವು ಸಾಕಷ್ಟು ಜನರಿಗೆ ತುರ್ತು ಸಮಯದಲ್ಲಿ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಬಳಗದಲ್ಲಿ ಜಾತಿ ಮತ ಭೇಧ ಇಲ್ಲದೆ ಪ್ರತಿಯೊಬ್ಬರು ಒಬ್ಬರ ಜೀವ ಉಳಿಸಲು ಹಗಲು ರಾತ್ರಿ ಎನ್ನದೇ ಪ್ರಯತ್ನ ಪಡುತ್ತಾರೆ. ಕುಂದಾಪುರ ರಕ್ತದಾನಿ ಬಳಗವು ಇದುವರೆಗೆ 200 ಕ್ಕೂ ಅಧಿಕ ಜನರಿಗೆ ತುರ್ತು ಸಮಯದಲ್ಲಿ ರಕ್ತ ನೀಡಿ ಸಹಕರಿಯಾಗಿದ್ದಾರೆ…

ಪ್ರತಿಯೊಬ್ಬ ರಕ್ತದಾನಿ ಕೂಡ ಜೀವ ರಕ್ಷಕನೇ -:- ರಕ್ತದಾನ ಮಾಡಿ ಜೀವ ಉಳಿಸಿ ಒಂದು ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶ ಒದಗಿಬರುತ್ತದೆ. ರಕ್ತದಾನ ಎನ್ನುವುದು ಬಹಳ ಪವಿತ್ರವಾದ ಕಾರ್ಯ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಲೇಬೇಕು. ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿ, ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ತರನ್ನು ಮತ್ತು ಗಾಯಗೊಂಡವರನ್ನು ಬದುಕಿಸುವುದು ಸಾಧ್ಯವಾಗುತ್ತದೆ.

ಅನೇಕ ತುರ್ತುಸಂದರ್ಭಗಳಲ್ಲಿ ಜನರ ಜೀವ ಉಳಿಸಬೇಕಾದರೆ ರಕ್ತಪೂರೈಕೆ ಬೇಕೇ ಬೇಕು. ಇಷ್ಟು ಬೇಡಿಕೆ ಇರುವ ರಕ್ತಕ್ಕೆ ಬದಲಾಗಿ ಏನನ್ನೋ ಕೊಡಲು ಆಗುವುದಿಲ್ಲ. ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ, ಅನಿವಾರ್ಯವಾಗಿ ರಕ್ತದಾನಿಗಳ ಮೇಲೆ ಅವಲಂಬಿಸಬೇಕಾಗಿದೆ. ಸ್ವಯಂ ಸ್ಪೂರ್ತಿಯಿಂದ ರಕ್ತದಾನ ಮಾಡುವ ಪದ್ಧತಿ ಇನ್ನೂ ಚುರುಕುಗೊಳ್ಳಬೇಕಾಗಿದೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾನವೀಯತೆಯ ದೃಷ್ಟಿಯಿಂದ ಬೇರೆಯವರಿಗೆ ರಕ್ತ ನೀಡುವುದೇ ರಕ್ತದಾನ ವಾಗಿದೆ. ರಕ್ತದಾನ ಮಾಡಿ, ಜೀವ ಉಳಿಸಿ ಹಾಗೂ ಇದರ ಕುರಿತ ಸಾಮಾಜಿಕ ಕಳಕಳಿ ಎಲ್ಲೆಡೆ ಮೂಡಿಸಿ.

ರಕ್ತದಾನಿಗಳ ಬಳಗ ಕುಂದಾಪುರ

2 thoughts on “ವಿಶ್ವ ರಕ್ತದಾನಿಗಳ ದಿನಾಚರಣೆ : ರಕ್ತದಾನ ಮಾಡಿ, ಜೀವ ಉಳಿಸಿ

  1. ಸಮಾಜದಲ್ಲಿ ರಕ್ತದಾನ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಅಗತ್ಯ ಸಂದರ್ಭ ರಕ್ತಕ್ಕಾಗಿ ಪರದಾಟ ನಡೆಸುವ ಪರಿಸ್ಥಿತಿ ಇರುತ್ತದೆ. ಎಷ್ಟೋ ಸಂಘ ಸಂಸ್ಥೆಗಳು, ಸಾರ್ವಜನಿಕರು ರಕ್ತದಾನಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ. ಅದರಲ್ಲಿ *ರಕ್ತದಾನಿಗಳ ಬಳಗ ಕುಂದಾಪುರ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಯಕ್ಷಭಿಮಾನಿ ರಕ್ತದಾನಿಗಳ ಬಳಗ ಗಂಗೊಳ್ಳಿ* ತಂಡವು ರಕ್ತದಾನದ ಜತೆಗೆ ಸಮಾಜಮುಖಿ ಕಾರ್ಯವನ್ನು ತೊಡಗಿಸಿಕೊಂಡಿದ್ದಾರೆ. ರಕ್ತದಾನಿಗಳು ಜೀವ ರಕ್ಷಕರು. ರಕ್ತದ ಅಗತ್ಯವಿದ್ದಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುತ್ತಿದ್ದಾರೆ.
    ಹಾಗೆಯೇ ರಕ್ತ…. ಮಾರುಕಟ್ಟೆಯಲ್ಲಿ ದೊರೆಯುವಂತದ್ದಲ್ಲ, ದಾನದಿಂದಲೇ ನೀಡಬೇಕಾಗಿದೆ. ಜೀವ ಉಳಿಸಲು ನೀಡುವ ಉಡುಗೊರೆಯಾಗಿರುತ್ತದೆ. ಹಿಂದೆ ವೈದ್ಯರು, ಸಿಬಂದಿ ರಕ್ತ ಒದಗಿಸುವಂತಹ ವಾತಾವರಣವಿತ್ತು. ಈಗ ಕಾಲ ಬದಲಾಗಿದೆ. ಬೇಧವಿಲ್ಲದೆ ಎಲ್ಲರೂ ಮಾಡಬೇಕಾದ ಮಹತ್ಕಾರ್ಯವೇ ರಕ್ತದಾನ. ಹಾಗೆಯೇ… ನನ್ನೆಲ್ಲ ರಕ್ತದಾನಿ ಬಂದುಗಳಿಗೆ *ವಿಶ್ವ ರಕ್ತದಾನಿಗಳ ದಿನಾಚರಣೆಯ ಶುಭಾಶಯಗಳು*
    ಗುರುಪ್ರಸಾದ್ ಖಾರ್ವಿ
    ಅಧ್ಯಕ್ಷರು
    ರಕ್ತದಾನಿಗಳ ಬಳಗ, ಕುಂದಾಪುರ.
    ಹಾಗೂ
    ಕಾರ್ಯನಿರ್ವಾಹಕರು
    ಹೆಲ್ಪಿಂಗ್ ಹ್ಯಾಂಡ್ಸ್ , ಕುಂದಾಪುರ

  2. ಸಮಾಜದಲ್ಲಿ ರಕ್ತದಾನ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಅಗತ್ಯ ಸಂದರ್ಭ ರಕ್ತಕ್ಕಾಗಿ ಪರದಾಟ ನಡೆಸುವ ಪರಿಸ್ಥಿತಿ ಇರುತ್ತದೆ. ಎಷ್ಟೋ ಸಂಘ ಸಂಸ್ಥೆಗಳು, ಸಾರ್ವಜನಿಕರು ರಕ್ತದಾನಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ. ಅದರಲ್ಲಿ *ರಕ್ತದಾನಿಗಳ ಬಳಗ ಕುಂದಾಪುರ, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಯಕ್ಷಭಿಮಾನಿ ರಕ್ತದಾನಿಗಳ ಬಳಗ ಗಂಗೊಳ್ಳಿ* ತಂಡವು ರಕ್ತದಾನದ ಜತೆಗೆ ಸಮಾಜಮುಖಿ ಕಾರ್ಯವನ್ನು ತೊಡಗಿಸಿಕೊಂಡಿದ್ದಾರೆ. ರಕ್ತದಾನಿಗಳು ಜೀವ ರಕ್ಷಕರು. ರಕ್ತದ ಅಗತ್ಯವಿದ್ದಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುತ್ತಿದ್ದಾರೆ.
    ಹಾಗೆಯೇ ರಕ್ತ…. ಮಾರುಕಟ್ಟೆಯಲ್ಲಿ ದೊರೆಯುವಂತದ್ದಲ್ಲ, ದಾನದಿಂದಲೇ ನೀಡಬೇಕಾಗಿದೆ. ಜೀವ ಉಳಿಸಲು ನೀಡುವ ಉಡುಗೊರೆಯಾಗಿರುತ್ತದೆ. ಹಿಂದೆ ವೈದ್ಯರು, ಸಿಬಂದಿ ರಕ್ತ ಒದಗಿಸುವಂತಹ ವಾತಾವರಣವಿತ್ತು. ಈಗ ಕಾಲ ಬದಲಾಗಿದೆ. ಬೇಧವಿಲ್ಲದೆ ಎಲ್ಲರೂ ಮಾಡಬೇಕಾದ ಮಹತ್ಕಾರ್ಯವೇ ರಕ್ತದಾನ. ಹಾಗೆಯೇ… ನನ್ನೆಲ್ಲ ರಕ್ತದಾನಿ ಬಂದುಗಳಿಗೆ *ವಿಶ್ವ ರಕ್ತದಾನಿಗಳ ದಿನಾಚರಣೆಯ ಶುಭಾಶಯಗಳು*
    ಗುರುಪ್ರಸಾದ್ ಖಾರ್ವಿ
    ಅಧ್ಯಕ್ಷರು
    ರಕ್ತದಾನಿಗಳ ಬಳಗ, ಕುಂದಾಪುರ.
    ಹಾಗೂ
    ಕಾರ್ಯನಿರ್ವಾಹಕರು
    ಹೆಲ್ಪಿಂಗ್ ಹ್ಯಾಂಡ್ಸ್ , ಕುಂದಾಪುರ

Leave a Reply

Your email address will not be published. Required fields are marked *